ವಾರೆವ್ಹಾ ವೋಲ್ವೋ; 2016ರಲ್ಲಿ 7 ಕಾರುಗಳು ಭಾರತಕ್ಕೆ

By Nagaraja

ವಾಹನ ಪ್ರೇಮಿಯೊಬ್ಬನ ಪಾಲಿಗೆ ಇದಕ್ಕಿಂತಲೂ ಮಿಗಿಲಾಗಿ ಹೆಚ್ಚೇನು ಬೇಕಾಗಿಲ್ಲ. ಹಿಂದೊಮ್ಮೆ ಭಾರತದಲ್ಲಿ ಕಾರೊಂದನ್ನು ಬಿಡುಗಡೆ ಮಾಡಲು ಹತ್ತು ಹಲವು ಬಾರಿ ಯೋಚಿಸುತ್ತಿದ್ದ ಕಾಲಘಟ್ಟವೀಗ ಮರೆಯಾಗಿದೆ. ಭಾರತ ಬದಲಾಗಿದೆ. ಬದಲಾಗುತ್ತಿದೆ. ವಾಹನ ಮಾರುಕಟ್ಟೆಯಲ್ಲೂ ಇದನ್ನು ಸ್ಪಷ್ಟವಾಗಿ ಮನಗಾಣಬಹುದಾಗಿದೆ.

Also Read: ವೋಲ್ವೋದಿಂದ ಕಾಂಗರೂ ಪತ್ತೇದಾರಿ ತಂತ್ರಜ್ಞಾನ

ಬೆಳೆದು ಬರುತ್ತಿರುವ ಭಾರತ ಮಾರುಕಟ್ಟೆಯ ಸಾಮರ್ಥ್ಯವನ್ನು ಅರಿತುಕೊಂಡಿರುವ ಸ್ವೀಡನ್‌ನ ಐಕಾನಿಕ್ ವಾಹನ ತಯಾರಿಕ ಸಂಸ್ಥೆ ವೋಲ್ವೋ ಈಗ 2016 ಸಾಲಿನಲ್ಲಿ ಭಾರತದಲ್ಲಿ ಏಳು ಹೊಸ ಹಾಗೂ ಪರಿಷ್ಕೃತ ಮಾದರಿಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ. ಅಂದ ಮೇಲೆ ವಾರೆವ್ಹಾ ವೋಲ್ವೋ ಎಂದೇ ಶ್ಲಾಘಿಸಬೇಕಾಗುತ್ತದೆ.

01. ವೋಲ್ವೋ ವಿ40 ಕ್ರಾಸ್ ಕಂಟ್ರಿ

01. ವೋಲ್ವೋ ವಿ40 ಕ್ರಾಸ್ ಕಂಟ್ರಿ

ವೋಲ್ವೋ ವಿ40 ಕ್ರಾಸ್ ಕಂಟ್ರಿ ಈಗಾಗಲೇ ದೇಶದ ಮಾರುಕಟ್ಟೆಯಲ್ಲಿರುವುದರಿಂದ ನಿಸ್ಸಂಶವಾಗಿಯೂ ಇದೊಂದು ಫೇಸಿಲಿಫ್ಟ್ ಮಾದರಿಯಾಗಿರಲಿದೆ. ದೇಶದ ಅತ್ಯುತ್ತಮ ಕ್ರಾಸೋವರ್ ಸಾಲಿನಲ್ಲಿ ಗುರುತಿಸಿಕೊಳ್ಳಲಿರುವ ವೋಲ್ವೋ ವಿ40 ಕ್ರಾಸ್ ಕಂಟ್ರಿ ಹೊಸ ಫ್ರಂಟ್ ಬಂಪರ್, ಹೆಡ್ ಲೈಟ್, ಟೈಲ್ ಲ್ಯಾಂಪ್ ಹಾಗೂ ಆಕರ್ಷಕ ಒಳಮೈಯನ್ನು ಗಿಟ್ಟಿಸಿಕೊಳ್ಳಲಿದೆ.

ಎಂಜಿನ್:

2.0 ಲೀಟರ್, 5 ಸಿಲಿಂಡರ್, ಟರ್ಬೊ ಡೀಸೆಲ್, 150 ಅಶ್ವಶಕ್ತಿ

1.6 ಲೀಟರ್, 4 ಸಿಲಿಂಡರ್, ಟರ್ಬೊ ಪೆಟ್ರೋಲ್, 180 ಅಶ್ವಶಕ್ತಿ

02. ವೋಲ್ವೋ ವಿ40

02. ವೋಲ್ವೋ ವಿ40

ದೇಶದಲ್ಲಿ ವೋಲ್ವೋ ವಿ40 ಕೂಡಾ ಹೊಸ ಸ್ವರೂಪವನ್ನು ಪಡೆದುಕೊಳ್ಳಲು ಸಜ್ಜಾಗುತ್ತಿದೆ. ಇದರಲ್ಲೂ ಪರಿಷ್ಕೃತ ಬಂಪರ್, ಹೆಡ್ ಲೈಟ್, ಟೈಲ್ ಲ್ಯಾಂಪ್ ಪ್ರಮುಖ ಆಕರ್ಷಣೆಯಾಗಲಿದೆ.

ಎಂಜಿನ್: 2.0 ಲೀಟರ್, 5 ಸಿಲಿಂಡರ್, ಟರ್ಬೊ ಡೀಸೆಲ್, 150 ಅಶ್ವಶಕ್ತಿ.

03. ವೋಲ್ವೋ ಎಸ್60 ಕ್ರಾಸ್ ಕಂಟ್ರಿ

03. ವೋಲ್ವೋ ಎಸ್60 ಕ್ರಾಸ್ ಕಂಟ್ರಿ

ದೇಶದಲ್ಲಿ ಬಿಡುಗಡೆಯಾಗಲಿರುವ ಚೊಚ್ಚಲ ಕ್ರಾಸ್ ಕಂಟ್ರಿ ಎಂಬ ಗೌರವಕ್ಕೆ ವೋಲ್ವೋ ಎಸ್60 ಕ್ರಾಸ್ ಕಂಟ್ರಿ ಪಾತ್ರವಾಗಲಿದೆ. ಇದು ಎಸ್60 ಸೆಡಾನ್ ಕಾರಿನ ತಳಹದಿಯಲ್ಲಿ ನಿರ್ಮಾಣವಾಗಲಿದೆ.

ಎಂಜಿನ್: 2.4 ಲೀಟರ್, 5 ಸಿಲಿಂಡರ್, ಟರ್ಬೊ ಡೀಸೆಲ್, 178 ಅಶ್ವಶಕ್ತಿ

04.ವೋಲ್ವೋ ಎಸ್60 ಪೊಲೆಸ್ಟರ್

04.ವೋಲ್ವೋ ಎಸ್60 ಪೊಲೆಸ್ಟರ್

ಭಾರತದಲ್ಲಿ ಈಗಾಗಲೇ ವೋಲ್ವೋ ಎಸ್60 ಪೊಲೆಸ್ಟರ್ ಚರ್ಚೆಗೆ ಗ್ರಾಸವಾಗಿದೆ. ಇದನ್ನು ವೋಲ್ವೋದ ನಿರ್ವಹಣಾ ವಿಭಾಗವಾದ ಪೊಲಸ್ಟರ್ ನಿರ್ಮಿಸಿದೆ. ಅಂದರೆ ಭಾರತದಲ್ಲೂ ಬೆಂಝ್ ಎಎಂಜಿ ಹಾಗೂ ಬಿಎಂಡಬ್ಲ್ಯು ಎಂ ಶ್ರೇಣಿಯ ವಾಹನಗಳಿಗೆ ಬಿಸಿ ಮುಟ್ಟಲಿದೆ ಎಂಬುದರಲ್ಲಿ ಸಂಶಯವೇ ಇಲ್ಲ.

ಎಂಜಿನ್: 3.0 ಲೀಟರ್, 6 ಸಿಲಿಂಡರ್, ಟರ್ಬೊ ಪೆಟ್ರೋಲ್, 345 ಅಶ್ವಶಕ್ತಿ

05 ವೋಲ್ವೋ ಎಸ್90

05 ವೋಲ್ವೋ ಎಸ್90

ಸಂಸ್ಥೆಯ ಫ್ಲ್ಯಾಗ್ ಶಿಪ್ ಮಾದರಿಯಾಗಿರುವ ವೋಲ್ವೋ ಎಸ್90 ವಿನ್ಯಾಸದ ಬಗ್ಗೆ ವರ್ಣಿಸಲು ಪದಗಳೇ ಸಾಲದು. ಎಕ್ಸ್‌ಸಿ90 ಲಗ್ಷುರಿ ಸೆಡಾನ್ ಕಾರಿನ ತಳಹದಿಯಲ್ಲಿ ನಿರ್ಮಾಣವಾಗಲಿರುವ ವೋಲ್ವೋ ಎಸ್90 ಅತ್ಯಂತ ಶಕ್ತಿಶಾಲಿ ಎಂಬುದರಲ್ಲೇ ಸಂಶಯವೇ ಇಲ್ಲ.

ಎಂಜಿನ್: 2.0 ಲೀಟರ್, 4 ಸಿಲಿಂಡರ್, ಟ್ವಿನ್ ಟರ್ಬೊ ಡೀಸೆಲ್, 225 ಅಶ್ವಶಕ್ತಿ.

06. ವೋಲ್ವೋ ಎಕ್ಸ್‌ಸಿ90 ಎಕ್ಸಲೆನ್ಸ್

06. ವೋಲ್ವೋ ಎಕ್ಸ್‌ಸಿ90 ಎಕ್ಸಲೆನ್ಸ್

ವೋಲ್ವೋ ಎಕ್ಸ್‌ಸಿ90 ಕಾರಿನ ಎರಡು ವರ್ಷನ್ ಗಳನ್ನು ದೇಶಕ್ಕೆ ಪರಿಚಯಿಸಲು ವೋಲ್ವೋ ಸಜ್ಜಾಗಿದೆ. ಇದರಲ್ಲಿ ವೋಲ್ವೋ ಎಕ್ಸ್‌ಸಿ90 ಎಕ್ಸಲೆನ್ಸ್ ಒಂದಾಗಿದೆ. ಇದು ದೇಶದಲ್ಲಿ ಮರ್ಸಿಡಿಸ್ ಬೆಂಝ್ ಜಿಎಲ್‌ಎಸ್ ಮತ್ತು ರೇಂಜ್ ರೋವರ್ ಗಳಂತಹ ಐಷಾರಾಮಿ ಕ್ರೀಡಾ ಬಳಕೆಯ ವಾಹನಗಳಿಗೆ ಪ್ರತಿಸ್ಪರ್ಧಿಯಾಗಲಿದೆ. ನಾಲ್ಕು ಸೀಟು ವ್ಯವಸ್ಥೆಯ ಈ ಕಾರು ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿರಲಿದೆ.

ಎಂಜಿನ್: 2.0 ಲೀಟರ್, 4 ಸಿಲಿಂಡರ್, ಟ್ವಿನ್ ಟರ್ಬೊ ಡೀಸೆಲ್, 225 ಅಶ್ವಶಕ್ತಿ

 07. ವೋಲ್ವೋ ಎಕ್ಸ್‌ಸಿ90 ಆರ್ ಡಿಸೈನ್

07. ವೋಲ್ವೋ ಎಕ್ಸ್‌ಸಿ90 ಆರ್ ಡಿಸೈನ್

ಮೇಲೆ ಸೂಚಿಸಲಾದ ವೋಲ್ವೋ ಎಕ್ಸ್‌ಸಿ90 ಮಾದರಿಯ ಎರಡನೇ ವರ್ಷನ್ ಇದಾಗಿದೆ. ಇದರಲ್ಲಿ ಹೆಚ್ಚು ಕ್ರೀಡಾತ್ಮಕ ವಿನ್ಯಾಸಕ್ಕೆ ಒತ್ತು ಕೊಡಲಾಗಿದೆ. ಟ್ವಿನ್ ಎಕ್ಸಾಸ್ಟ್, ದೊಡ್ಡದಾದ ಚಕ್ರಗಳು ಇದರ ಪ್ರಮುಖ ಆಕರ್ಷಣೆಯಾಗಲಿದೆ.

ಎಂಜಿನ್: 2.0 ಲೀಟರ್, 4 ಸಿಲಿಂಡರ್, ಟ್ವಿನ್ ಟರ್ಬೊ ಡೀಸೆಲ್, 225 ಅಶ್ವಶಕ್ತಿ

Most Read Articles

Kannada
Read more on ವೋಲ್ವೋ volvo
English summary
Volvo Gearing Up 7 New Launches For India In 2016
Story first published: Saturday, November 28, 2015, 15:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X