2017ರಲ್ಲಿ ವೋಲ್ವೋ ಸ್ವಯಂಚಾಲಿತ ಕಾರುಗಳ ನೈಜ ಪರೀಕ್ಷೆ

By Nagaraja

2017ನೇ ಇಸವಿಯಲ್ಲಿ ವೋಲ್ವೋ ಸ್ವಯಂಚಾಲಿತ ಕಾರುಗಳ ನೈಜ ಪರೀಕ್ಷೆ ನಡೆಯಲಿದೆ. ವೋಲ್ವೋ 'ಡ್ರೈಮ್ ಮಿ ಯೋಜನೆ'ಯ ಭಾಗವಾಗಿ ಇದು ಆಯೋಜನೆಯಾಗಲಿದ್ದು, ಸೆಲ್ಪ್ ಡ್ರೈವ್ ಕಾರುಗಳ ಮೊದಲ ರಿಯಲ್ ಟೈಮ್ ಪರೀಕ್ಷೆ ನಡೆಸಲು ಸಂಸ್ಥೆಯು ಸಜ್ಜಾಗುತ್ತಿದೆ.

2017ರ ವೇಳೆಯಾಗುವಾಗ 100ರಷ್ಟು ಸ್ವಯಂಚಾಲಿತ ಕಾರುಗಳನ್ನು ಸಾರ್ವಜನಿಕರಾಗಿ ಮುಕ್ತಗೊಳಿಸಲಾಗುವುದು. ಈ ಮೂಲಕ ವೋಲ್ವೋ ಭವಿಷ್ಯದ ಕಾರುಗಳ ನೈಜ ರಸ್ತೆ ಪರೀಕ್ಷೆ ನಡೆಯಲಿದೆ. ಇದೇ ಸಂದರ್ಭದಲ್ಲಿ ವೋಲ್ವೋ ಡ್ರೈವ್ ಮಿ ಯೋಜನೆಗೆ ಸಂಬಂಧಪಟ್ಟಂತೆ ಹೊಸ ಮಾಹಿತಿಗಳನ್ನು ಬಹಿರಂಗಪಡಿಸಲಾಗಿದೆ.

volvo

ವೋಲ್ವೋ ಆಯ್ದ ಗ್ರಾಹಕರಿಗೆ ಮೊದಲೇ ನಿರ್ಧರಿಸಿದ ಸ್ವಿಡನ್‌ನ ನಗರಗಳಲ್ಲಿ ಸ್ವಯಂಚಾಲಿತ ಕಾರುಗಳ ಪರೀಕ್ಷೆ ನೆರವೇರಲಿದೆ. ಇದು ಸೆಲ್ಪ್ ಡ್ರೈವ್ ಕಾರುಗಳಿಗೆ ನೈಜ ಪರೀಕ್ಷೆಯಾಗಲಿದೆ ಎಂದು ಸಂಸ್ಥೆಯು ಅಭಿಪ್ರಾಯಪಟ್ಟಿದೆ.

ಸ್ವಯಂಚಾಲಿತ ಕಾರುಗಳ ತಾಂತ್ರಿಕ ದೋಷಗಳನ್ನು ಸಾಧ್ಯವಾದಷ್ಟು ನಿವಾರಿಸುವುದು ಸಂಸ್ಥೆಯ ಇರಾದೆಯಾಗಿದೆ. ಈ ನಿಟ್ಟಿನಲ್ಲಿ ನಿರಂತರ ಅಧ್ಯಯನದಲ್ಲಿ ಮಗ್ನವಾಗಿದೆ. ಇದರಂತೆ ಎಲ್ಲ ವಿಭಾಗದಲ್ಲೂ ಪರಿಪೂರ್ಣತೆ ಗಿಟ್ಟಿಸಿಕೊಳ್ಳುವ ಗುರಿಯಿರಿಸಿಕೊಂಡಿದೆ.

ಏರ್ ಕ್ರಾಫ್ಟ್‌ನಿಂದ ಸ್ಪೂರ್ತಿ ಪಡೆದು ಸೆಲ್ಪ್ ಡ್ರೈವಿಂಗ್ ಕಾರುಗಳನ್ನು ರಚಿಸಲಾಗಿದೆ. ಇಲ್ಲಿ ವಿವಿಧ ರೀತಿಯ ಸೆನ್ಸಾರ್, ರಾಡಾರ್, ಲೇಸರ್ ಸ್ಕ್ಯಾನರ್, ಓಪ್ಟಿಕಲ್ ಕ್ಯಾಮೆರಾ ಜೊತೆಗೆ 360 ಡಿಗ್ರಿ ವೀಕ್ಷಣೆ ಕೂಡಾ ಇರಲಿದೆ.

Most Read Articles

Kannada
English summary
Volvo to offer 100 self drive cars to public for test in 2017.
Story first published: Tuesday, February 24, 2015, 12:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X