ಪರಿಸರ ಸ್ನೇಹಿ ಲೈಕನ್ ಸೂಪರ್ ಸ್ಪೋರ್ಟ್ ಕಾರು

By Nagaraja

ಒಂದೆರಡು ವರ್ಷಗಳ ಹಿಂದೆ ಲೈಕನ್ ಹೈಪರ್ ಸ್ಪೋರ್ಟ್ ಕಾರನ್ನು ನಿರ್ಮಿಸಿದ್ದ ಲಿಬನಿಯಾ ತಳಹದಿಯ ಸಂಸ್ಥೆಯಾಗಿರುವ ಡಬ್ಲ್ಯು ಮೋಟಾರ್ಸ್, ಈಗ ಮಗೆದೊಂದು ಆಕರ್ಷಕ ಕಾರಿನ ತಯಾರಿಯಲ್ಲಿ ತೊಡಗಿದೆ.

ವಿಶೇಷವೆಂದರೆ ಲೈಕನ್ ಸೂಪರ್ ಸ್ಪೋರ್ಟ್ ಮಧ್ಯ ಪೂರ್ವದಲ್ಲಿ ನಿರ್ಮಾಣವಾಗಿದ್ದ ಮೊದಲ ಸೂಪರ್ ಕಾರೆಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಇಂತಹ ಸೀಮಿತ ಏಳು ಲೈಕನ್ ಸೂಪರ್ ಸ್ಪೋರ್ಟ್ ಕಾರಗಳನ್ನಷ್ಟೇ ನಿರ್ಮಿಸಲಾಗಿತ್ತು.

lykan supersport

2013 ದುಬೈ ಅಂತರಾಷ್ಟ್ರೀಯ ಮೋಟಾರು ಶೋದಲ್ಲಿ ಲೈಕನ್ ಹೈಪರ್ ಸ್ಪೋರ್ಟ್ ಕಾರು ಬಿಡುಗಡೆಗೊಳಿಸಿದ್ದ ಡಬ್ಲ್ಯು ಮೋಟಾರ್ಸ್ ಸಂಸ್ಥೆಯೀಗ ಒಂದು ಹೆಜ್ಜೆ ಮುಂದಿಟ್ಟಿದ್ದು, ಇನ್ನು ಹೆಚ್ಚಿನ ಶಕ್ತಿಶಾಲಿ ಲೈಕನ್ ಕಾರನ್ನು ನಿರ್ಮಿಸುವ ತವಕದಲ್ಲಿದೆ.

ಲೈಕನ್ ಹೈಪರ್ ಸ್ಪೋರ್ಟ್ ಎರಡು ಬಾಗಿಲುಗಳ ಸೂಪರ್ ಕಾರು ಜಗತ್ತಿನ ಮೂರನೇ ಅತಿ ದುಬಾರಿ ಕಾರೆಂಬ ಕೀರ್ತಿಗೂ ಪಾತ್ರವಾಗಿತ್ತು. 3.4 ಮಿಲಿಯನ್ ಅಮೆರಿಕನ್ ಡಾಲರ್‌ಗಳಷ್ಟು ದುಬಾರಿಯ ಈ ಕಾರು ಲಂಬೋರ್ಗಿನಿ ವೆನನೊ (4.5 ಮಿಲಿಯನ್ ಅಮೆರಿಕನ್ ಡಾಲರ್‌)ಮತ್ತು ಮೇಬ್ಯಾಕ್ ಎಕ್ಸೆಲೆರೊ (8 ಮಿಲಿಯನ್ ಅಮೆರಿಕನ್ ಡಾಲರ್‌) ಸಾಲಿನಲ್ಲಿ ಗುರುತಿಸಿಕೊಂಡಿತ್ತಲ್ಲದೆ ಬುಗಾಟಿ ವೆರೋನ್ ಸೂಪರ್ ಸ್ಪೋರ್ಟ್ ಕಾರಿಗಿಂತಲೂ ದುಬಾರಿಯೆನಿಸಿತ್ತು.

ಈಗ ಲೈಕನ್ ಹೈಪರ್ ಸ್ಪೋರ್ಟ್ ಮುಂದಿನ ವರ್ಷನ್ ಎಂದೇ ಕರೆಯಲ್ಪಡುವ ಲೈಕನ್ ಸೂಪರ್ ಸ್ಪೋರ್ಟ್ ಕಾರಿನ ಅಭಿವೃದ್ಧಿಯಲ್ಲಿ ಸಂಸ್ಥೆಯು ತೊಡಗಿದೆ. ಈ ಪರಿಸರ ಸ್ನೇಹಿ ಕಾರಿನ ಪೂರ್ಣ ರೂಪ ಲೈಕನ್ ಸೂಪರ್ ಸ್ಪೋರ್ಟ್ ಹೈಬ್ರಿಡ್ ಸಿಂಥೇಟಿಕ್ ಫ್ಲೂಯಲ್ ಎಂದೆನಿಸಿಕೊಳ್ಳಲಿದೆ.

ಇದಕ್ಕಾಗಿ ಏರ್ ಫ್ಲೂಯಲ್ ಸಿಂಥೇಸಿಸ್ ಎನ್ನುವ ಸಂಸ್ಥೆಯೊಂದಿಗೆ ಡಬ್ಲ್ಯು ಮೋಟಾರ್ಸ್ ಕೈಜೋಡಿಸಿಕೊಂಡಿದೆ. ಪ್ರಸ್ತುತ ಸಂಸ್ಥೆಯು ಗಾಳಿ ಹಾಗೂ ಸೌರ ಶಕ್ತಿಯಿಂದ ಮೆಥಾನಲ್‌ಗೆ ಸಮಾನವಾದ ಇಂಧನ ಉತ್ಪಾದಿಸುತ್ತದೆ. ಅಂದರೆ ಲೈಕನ್ ಸೂಪರ್ ಸ್ಪೋರ್ಟ್ ಕಾರು ಬದಲಿ ಇಂಧನದಲ್ಲಿ ಓಡಾಡಲಿದೆ ಎಂಬುದು ಖಚಿತವಾಗಿದೆ. ಒಟ್ಟಿನಲ್ಲಿ 2016ರಲ್ಲಿ ಬಿಡುಗಡೆ ವೇಳೆಯಷ್ಟೇ ಈ ಬಗ್ಗೆ ಹೆಚ್ಚಿನ ಮಾಹಿತಿಗಳು ದೊರಕಲಿದೆ.

Most Read Articles

Kannada
English summary
W Motors, the company that made the Lykan Hypersport have gone back to the drawing boards again to develop a faster version of the Lykan, Eco-Friendly Sports Car Lykan Supersport. 
Story first published: Wednesday, January 28, 2015, 9:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X