ಬಿಎಂಡಬ್ಲ್ಯು-ಟೊಯೊಟಾ ಜುಗಲ್‌ಬಂಧಿ; ಮುಂದಿನ ತಲೆಮಾರಿನ ಕರೊಲ್ಲಾ ಕಾರಿಗೆ ಬಿಎಂಡಬ್ಲ್ಯು ಎಂಜಿನ್!

Written By:

ಜಪಾನ್ ಮೂಲದ ದೈತ್ಯ ವಾಹನ ಸಂಸ್ಥೆ ಟೊಯೊಟಾ ಮತ್ತು ಜರ್ಮನಿಯ ಐಷಾರಾಮಿ ಕಾರು ಕಂಪನಿ ಬಿಎಂಡಬ್ಲ್ಯು ನಡುವಣ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಲಿದ್ದು, ಮುಂದಿನ ತಲೆಮಾರಿನ ಕರೊಲ್ಲಾ ಕಾರುಗಳಿಗೆ ಬಿಎಂಡಬ್ಲ್ಯು ಎಂಜಿನ್ ಜೋಡಣೆಯಾಗಲಿದೆ ಎಂಬುದು ತಿಳಿದು ಬಂದಿದೆ.

ಬಿಎಂಡಬ್ಲ್ಯು ಹಾಗೂ ಟೊಯೊಟಾ ಸಂಸ್ಥೆಗಳು ಪರಸ್ಪರ ತಂತ್ರಜ್ಞಾನವನ್ನು ಹಂಚಿಕೊಳ್ಳಲಿದ್ದು, ಇದರೊಂದಿಗೆ 2018ರಲ್ಲಿ ಬಿಡುಗಡೆಯಾಗಲಿರುವ ಕರೊಲ್ಲಾ ಕಾರುಗಳಿಗೆ ಬಿಎಂಡಬ್ಲ್ಯು ಎಂಜಿನ್ ಬಳಕೆಯಾಗಲಿದೆ.

ನೂತನ ಕರೊಲ್ಲಾ ಕಾರಿನಲ್ಲಿ 1.5 ಲೀಟರ್ 4 ಸಿಲಿಂಡರ್ ಪೆಟ್ರೋಲ್, 1.5 ಲೀಟರ್ ಹೈಬ್ರಿಡ್, 8ಎನ್ ಆರ್-ಟಿಎಫ್ ಎಸ್ 1.2 ಲೀಟರ್ ಟರ್ಬೊಚಾರ್ಜ್ಡ್ ಪೆಟ್ರೋಲ್ ಮತ್ತು 1.8 ಲೀಟರ್ ವಿವಿಟಿ-ಐ ಪೆಟ್ರೋಲ್ ಎಂಜಿನ್ ಜೋಡಣೆಯಾಗಲಿದೆ.

ಬಲ್ಲ ಮೂಲಗಳ ಪ್ರಕಾರ ಟೊಯೊಟಾ ಕರೊಲ್ಲಾ ಟಾಪ್ ಎಂಡ್ ವೆರಿಯಂಟ್ ಗಳಲ್ಲಿ ಬಿಎಂಡಬ್ಲ್ಯು 2.0 ಲೀಟರ್ ಟರ್ಬೊಚಾರ್ಜ್ಡ್ ಫೋರ್ ಸಿಲಿಂಡರ್ ಎಂಜಿನ್ ಜೋಡಿಸಲಾಗುವುದು. ಇದು ಹೆಚ್ಚಿನ ಮಾರಾಟ ಗಿಟ್ಟಿಸಿಕೊಳ್ಳಲು ನೆರವಾಗಲಿದೆ.

ಟೊಯೊಟಾ ನ್ಯೂ ಗ್ಲೋಬಲ್ ಆರ್ಕಿಟೇಕ್ಚರ್ ಅಥವಾ ಸಂಕ್ಷಿಪ್ತ ರೂಪದಲ್ಲಿ ಟಿಎನ್‌ಜಿಎ ತಳಹದಿಯಲ್ಲಿ ಹೊಸ ತಲೆಮಾರಿನ ಕರೊಲ್ಲಾ ಕಾರು ನಿರ್ಮಾಣವಾಗುತ್ತಿದೆ. ಇದು ವಾಹನ ಬಿಗಿತವನ್ನು ಮತ್ತಷ್ಟು ಹೆಚ್ಚಿಸಲಿದ್ದು, ಢಿಕ್ಕಿ ರಕ್ಷಣೆಯಲ್ಲಿ ರೇಟಿಂಗ್ ಉತ್ತಮಪಡಿಸಲು ನೆರವಾಗಲಿದೆ.

ನೂತನ ಕರೊಲ್ಲಾ ಕಾರು ಹಿಂದಿನ ಮಾದರಿಗಿಂತಲೂ ಹೆಚ್ಚು ಉದ್ದವಾಗಿರಲಿದ್ದು, ಕಾರಿನೊಳಗೆ ಹೆಚ್ಚು ಆರಾಮದಾಯಕ ಆಸನ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗುವುದು.

ಪ್ರಸ್ತುತ ಪ್ರಾಥಮಿಕ ಹಂತದಲ್ಲಿರುವ ನೂತನ ಟೊಯೊಟಾ ಕರೊಲ್ಲಾ ಕಾರಿನ ಬಗೆಗಿನ ಹೆಚ್ಚಿನ ಮಾಹಿತಿಗಳು ಇನ್ನಷ್ಟೇ ಹೊರ ಬರಬೇಕಿದೆ.

ಅಂದ ಹಾಗೆ 2018 ಕರೊಲ್ಲಾ ಬಿಎಂಡಬ್ಲ್ಯು ಎಂಜಿನ್ ಪಡೆಯುತ್ತಿರುವ ಮೊದಲ ಟೊಯೊಟಾ ಕಾರೇನಲ್ಲ. ಇದಕ್ಕೂ ಮೊದಲು ವೆರ್ಸೊ ಬಹು ಬಳಕೆಯ ವಾಹನ ಹಾಗೂ ಅವೆನ್ಸಿಸ್ ಸೆಡಾನ್ ಕಾರಿನಲ್ಲೂ ಬಿಎಂಡಬ್ಲ್ಯು ಎಂಜಿನ್ ಜೋಡಣೆಯಾಗಿತ್ತು.

ಇವೆಲ್ಲದರ ಹೊರತಾಗಿ ಈ ಎರಡು ಸಂಸ್ಥೆಗಳು ಟೊಯೊಟಾ ಸುಪ್ರಾ ಹಾಗೂ ಬಿಎಂಡಬ್ಲ್ಯು ಝಡ್4 ರೋಡ್ ಸ್ಟರ್ ಅಭಿವೃದ್ಧಿಯಲ್ಲೂ ತೊಡಗಿಸಿಕೊಂಡಿದೆ. ಇವೆರಡು ಹೊಸತಾದ ಚಾಸೀ ಹಾಗೂ ಹಗುರ ಭಾರದ ಕಾರ್ಬನ್ ಫೈಬರ್ ಮತ್ತು ಅಲ್ಯೂಮಿನಿಯಂ ಸಂರಚನೆಯನ್ನು ಗಿಟ್ಟಿಸಿಕೊಳ್ಳಲಿದೆ.

English summary
Next-Generation Toyota Corolla Could Get BMW Engines
Please Wait while comments are loading...

Latest Photos