ಬಿಡುಗಡೆಗೆ ಮುನ್ನಟೊಯೊಟಾ ಇನ್ನೋವಾ ಕ್ರೈಸ್ಟಾ ಬಗ್ಗೆ ಅರಿಯಿರಿ

By Nagaraja

ಜಪಾನ್ ಮೂಲದ ದೈತ್ಯ ವಾಹನ ಸಂಸ್ಥೆ ಟೊಯೊಟಾ, ಮುಂದಿನ ತಲೆಮಾರಿನ ಇನ್ನೋವಾ ಕ್ರೈಸ್ಟಾ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಲಿದೆ. ಇದೀಗ ಎಲ್ಲವೂ ಅಂತಿಮಗೊಂಡಿದ್ದು, ನೂತನ ಟೊಯೊಟಾ ಇನ್ನೋವಾ ಕ್ರೈಸ್ಟಾ 2016 ಮೇ 03ರಂದು ಮಾರುಕಟ್ಟೆ ಪ್ರವೇಶಿಸಲಿದೆ.

ಬಹು ಬಳಕೆಯ ವಾಹನ ವಿಭಾಗದಲ್ಲಿ ಸೆಗ್ಮೆಂಟ್ ಲೀಡರ್ ಎನಿಸಿಕೊಂಡಿರುವ ಇನ್ನೋವಾ ಮತ್ತೆ ಮೋಡಿ ಮಾಡುವ ನಿರೀಕ್ಷೆಯನ್ನಿಟ್ಟುಕೊಂಡಿದ್ದು, 12ರಿಂದ 18 ಲಕ್ಷ ರು.ಗಳ ಬೆಲೆ ಪರಿಧಿಯಲ್ಲಿ ಬಿಡುಗಡೆಯಾಗಲಿದೆ.

ಹೊಸ ನಾಮಕರಣ

ಹೊಸ ನಾಮಕರಣ

ನೂತನ ತಲೆಮಾರಿನ ಟೊಯೊಟಾ ಕಾರು ಇನ್ನೋವಾ ಕ್ರೈಸ್ಟಾ ಎನಿಸಿಕೊಳ್ಳಲಿದೆ. ಇದು ಹಿಂದಿನ ಮಾದರಿಗಿಂತಲೂ ಹೆಚ್ಚಿನ ಸುಧಾರಣೆಗಳನ್ನು ಪಡೆದಿದೆ.

2016 ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ

2016 ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ

2016 ಆಟೋ ಎಕ್ಸ್ ಪೋದಲ್ಲಿ ಮೊದಲ ಬಾರಿಗೆ ಪ್ರದರ್ಶನ ಕಂಡಿರುವ ಇನ್ನೋವಾ ಕ್ರೈಸ್ಟಾ ಈಗ ಬಿಡುಗಡೆಗೆ ಸಜ್ಜಾಗುತ್ತಿದೆ.

ಹೊಸ ಡ್ಯಾಶ್ ಬೋರ್ಡ್

ಹೊಸ ಡ್ಯಾಶ್ ಬೋರ್ಡ್

ನೂತನ ಇನ್ನೋವಾ ಕ್ರೈಸ್ಟಾ ಹೊಸತಾದ ಡ್ಯಾಶ್ ಬೋರ್ಡ್ ಪಡೆಯಲಿದ್ದು, ಮಾಹಿತಿ ಮರರಂಜನಾ ವ್ಯವಸ್ಥೆಯ ಜೊತೆಗೆ ಕ್ಲೈಮೇಟ್ ಕಂಟ್ರೋಲ್ ವ್ಯವಸ್ಥೆಯೂ ಇದರಲ್ಲಿರುತ್ತದೆ.

ಹೆಚ್ಚು ಸ್ಥಳಾವಕಾಶ

ಹೆಚ್ಚು ಸ್ಥಳಾವಕಾಶ

ಹಿಂದಿನ ಮಾದರಿಗಿಂತಲೂ ಹೆಚ್ಚು ಸ್ಥಳಾವಕಾಶವನ್ನು ಪಡೆಯಲಿರುವ ಇನ್ನೋವಾ ಕ್ರೈಸ್ಟಾ ಏಳು ಸೀಟುಗಳ ಆಯ್ಕೆಗಳಲ್ಲಿ ಲಭ್ಯವಾಗಲಿದೆ.

ಎಂಜಿನ್ ತಾಂತ್ರಿಕತೆ

ಎಂಜಿನ್ ತಾಂತ್ರಿಕತೆ

ನೂತನ ಇನ್ನೋವಾ ಕ್ರೈಸ್ಟಾ 2.8 ಲೀಟರ್ ಮತ್ತು 2.4 ಲೀಟರ್ ಡೀಸೆಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಸಾಧ್ಯತೆಯಿದೆ. ಇವೆರಡು ಅನುಕ್ರಮವಾಗಿ 172 (360 ಎನ್ ಎಂ ತಿರುಗುಬಲ) ಮತ್ತು 147 ಅಶ್ವಶಕ್ತಿಯನ್ನು (243ಎನ್‌ಎಂ ತಿರುಗುಬಲ )ಉತ್ಪಾದಿಸಲಿದೆ.

ಗೇರ್ ಬಾಕ್ಸ್

ಗೇರ್ ಬಾಕ್ಸ್

ಅಲ್ಲದೆ ಐದು ಸ್ಪೀಡ್ ಮ್ಯಾನುವಲ್ ಹಾಗೂ ಆರು ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇದರಲ್ಲಿರಲಿದೆ.

ಎಂಜಿನ್

ಎಂಜಿನ್

ಇನ್ನು ಪೆಟ್ರೋಲ್ ಆವೃತ್ತಿಯೂ ಭಾರತಕ್ಕೆ ಲಗ್ಗೆಯಿಡುವ ಸಾಧ್ಯಯಿದ್ದು, ಇದರ ಫೋರ್ಡ ಸಿಲಿಂಡರ್ 2000 ಸಿಸಿ ವಿವಿಟಿ-ಐ ಪೆಟ್ರೋಲ್ ಎಂಜಿನ್ 183 ಎನ್ ಎಂ ತಿರುಗುಬಲದಲ್ಲಿ 137 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ವೆರಿಯಂಟ್

ವೆರಿಯಂಟ್

ಜಿಎಕ್ಸ್, ವಿಎಕ್ಸ್ ಮತ್ತು ಝಡ್‌ಎಕ್ಸ್ ಗಳೆಂಬ ಮೂರು ವೆರಿಯಂಟ್ ಗಳಲ್ಲಿ ಇನ್ನೋವಾ ಕ್ರೈಸ್ಟಾ ಲಭ್ಯವಾಗಲಿದೆ. ಈ ಪೈಕಿ ಝಡ್ ಎಕ್ಸ್ ಬೇಸ್ ಮತ್ತು ಟಾಪ್ ಎಂಡ್ ವೆರಿಯಂಟ್ ಗಳಲ್ಲಿ ಆಟೋಮ್ಯಾಟಿಕ್ ತಂತ್ರಗಾರಿಕೆಯು ಸಿಗಲಿದೆ.

ವಿಶಿಷ್ಟತೆಗಳು

ವಿಶಿಷ್ಟತೆಗಳು

  • ಹೊಸ ಡೀಸೆಲ್ ಎಂಜಿನ್,
  • 6 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್,
  • ಹೊಸ ಚಾಸೀ,
  • ಎಬಿಎಸ್ ಜೊತೆ ಇಬಿಡಿ,
  • ಹಿಲ್ ಸ್ಟ್ಯಾರ್ಟ್ ಅಸಿಸ್ಟ್,
  • ಕೀಲೆಸ್ ಎಂಟ್ರಿ ಮತ್ತು ಪುಶ್ ಬಟನ್
  • ವಿಶಿಷ್ಟತೆಗಳು

    ವಿಶಿಷ್ಟತೆಗಳು

    • ಎಂಜಿನ್ ಸ್ಟ್ಯಾರ್ಟ್/ಸ್ಟಾಪ್,
    • ಚಾಲಕ ಮತ್ತು ಪ್ರಯಾಣಿಕ ಬದಿಯ ಏರ್ ಬ್ಯಾಗ್ (ಸ್ಟ್ಯಾಂಡರ್ಡ್),
    • ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಜೊತೆ ರಿಯರ್ ಆಟೋ ಕೂಲರ್,
    • 8 ಇಂಚುಗಳ ಟಚ್ ಸ್ಕ್ರೀನ್ ನಿಯಂತ್ರಿತ ಇನ್ಪೋಟೈನ್ಮೆಂಟ್ ಸಿಸ್ಟಂ ಜೊತೆ ಏರ್ ಗೆಸ್ಟರ್,
    • ಡ್ಯಾಶ್ ಬೋರ್ಡ್ ನಲ್ಲಿ ಮರದ ಸ್ಪರ್ಶ
    • ಪ್ರತಿಸ್ಪರ್ಧಿಗಳು

      ಪ್ರತಿಸ್ಪರ್ಧಿಗಳು

      ಬೆಲೆಯ ವಿಚಾರವನ್ನು ಗಮನಿಸಿದಾಗ ಮಾರುಕಟ್ಟೆಯಲ್ಲಿ ಹ್ಯುಂಡೈ ಕ್ರೆಟಾದಿಂದ ಆರಂಭಿಸಿ ಮಹೀಂದ್ರ ಎಕ್ಸ್ ಯುವಿ500 ಮುಂತಾದ ಮಾದರಿಗಳಿಗೆ ಇನ್ನೋವಾ ಪ್ರತಿಸ್ಪರ್ಧಿಯಾಗಲಿದೆ.

Most Read Articles

Kannada
English summary
All you want to know about Toyota Innova Crysta
Story first published: Saturday, April 16, 2016, 10:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X