ಅತಿ ಶೀಘ್ರದಲ್ಲೇ ಆಡಿ ಕ್ಯೂ2 ಮಿನಿ ಎಸ್‌ಯುವಿ ಬಿಡುಗಡೆ

By Nagaraja

ಜರ್ಮನಿಯ ಐಷಾರಾಮಿ ವಾಹನ ಸಂಸ್ಥೆ ಆಡಿ, ಅತಿ ಶೀಘ್ರದಲ್ಲೇ ಕ್ಯೂ2 ಮಿನಿ ಕ್ರೀಡಾ ಬಳಕೆಯ ವಾಹನವನ್ನು (ಎಸ್‌ಯುವಿ) ಭಾರತದಲ್ಲಿ ಬಿಡುಗಡೆ ಮಾಡಲಿದೆ. ಮುಂದಿನ ವರ್ಷದ ವೇಳೆಯಾಗುವಾಗ ದೇಶದಲ್ಲಿನ ಶೇಕಡಾ 30ರಿಂದ 40ರಷ್ಟು ಮಾರಾಟವನ್ನು ಪೆಟ್ರೋಲ್ ಆವೃತ್ತಿಯಿಂದ ಆಡಿ ನಿರೀಕ್ಷೆ ಮಾಡುತ್ತಿದೆ. ಈ ನಿಟ್ಟಿನಲ್ಲಿ ಕ್ಯೂ ಸೇರಿದಂತೆ ಎಲ್ಲ ಶ್ರೇಣಿಗಳೂ ಪೆಟ್ರೋಲ್ ಆವೃತ್ತಿಗಳನ್ನು ಬಿಡುಗಡೆ ಮಾಡಲಿದೆ.

ಈ ಹಿಂದೆ ದೆಹಲಿಯಲ್ಲಿ ಡೀಸೆಲ್ ಕಾರುಗಳ ಮೇಲಿನ ನಿಷೇಧ ಹೇರಿರುವ ಬೆನ್ನಲ್ಲೇ ಆಡಿಯಿಂದ ಇಂತಹದೊಂದು ಆಕ್ರಮಣಕಾರಿ ನಿಲುವು ಕಂಡುಬಂದಿದೆ. ಏಕೆಂದರೆ ಆಡಿ ಪಾಲಿಗೆ ದೆಹಲಿ ಮಾರುಕಟ್ಟೆಯು ಅತ್ಯಂತ ನಿರ್ಣಾಯಕವೆನಿಸಿತ್ತು. ಸದ್ಯ 2000 ಸಿಸಿ ಗಿಂತಲೂ ಮೇಲಿನ ಡೀಸೆಲ್ ಎಂಜಿನ್ ಕಾರುಗಳ ನಿಷೇಧವನ್ನು ಹಿಂಪಡೆದರೂ ಆಡಿ ಪೆಟ್ರೋಲ್ ಕಾರುಗಳತ್ತ ಹೆಚ್ಚಿನ ಒಲವು ತೋರಿದೆ.

ಅತಿ ಶೀಘ್ರದಲ್ಲೇ ಆಡಿ ಕ್ಯೂ2 ಮಿನಿ ಎಸ್‌ಯುವಿ ಬಿಡುಗಡೆ

ಮುಂದಿನ ವರ್ಷದ ಮೊದಲಾರ್ಧದೊಳಗೆ ತನ್ನೆಲ್ಲ ಶ್ರೇಣಿಯ ಪೆಟ್ರೋಲ್ ಕಾರುಗಳನ್ನು ಬಿಡುಗಡೆ ಮಾಡುವುದು ಯೋಜನೆಯಾಗಿದೆ. ಸದ್ಯಕ್ಕೆ ಎಸ್ ಯುವಿ ವಿಭಾಗದಲ್ಲಿ ಪೆಟ್ರೋಲ್ ಕಾರುಗಳಿಲ್ಲದಿರುವುದು ಹಿನ್ನಡೆಯಾಗಿದೆ.

ಅತಿ ಶೀಘ್ರದಲ್ಲೇ ಆಡಿ ಕ್ಯೂ2 ಮಿನಿ ಎಸ್‌ಯುವಿ ಬಿಡುಗಡೆ

ಮೊದಲ ಹಂತವಾಗಿ ಆಡಿ ಕ್ಯೂ2 ಮಿನಿ ಎಸ್ ಯುವಿ ಕಾರನ್ನು ಬಿಡುಗಡೆ ಮಾಡಲಿದೆ. ಇದು ಈಗಿರುವ ಕ್ಯೂ3 ಎಸ್ ಯುವಿ ಕೆಳಗಡೆ ಗುರುತಿಸಿಕೊಳ್ಳಲಿದ್ದು, ಯುವ ಗ್ರಾಹಕರನ್ನು ಗುರಿ ಮಾಡಲಿದೆ.

ಅತಿ ಶೀಘ್ರದಲ್ಲೇ ಆಡಿ ಕ್ಯೂ2 ಮಿನಿ ಎಸ್‌ಯುವಿ ಬಿಡುಗಡೆ

ಇದೇ ಸಂದರ್ಭದಲ್ಲಿ ಹ್ಯಾಚ್ ಬ್ಯಾಕ್ ಕಾರೊಂದನ್ನು ಬಿಡುಗಡೆ ಮಾಡುವ ಬಗ್ಗೆಯೂ ಆಡಿ ಯೋಚನೆಯಲ್ಲಿದೆ. ಆದರೆ ಈ ಸಂಬಂಧ ಯಾವುದೇ ಅಧಿಕೃತ ಮಾಹಿತಿಗಳು ಬಹಿರಂಗವಾಗಿಲ್ಲ.

ಅತಿ ಶೀಘ್ರದಲ್ಲೇ ಆಡಿ ಕ್ಯೂ2 ಮಿನಿ ಎಸ್‌ಯುವಿ ಬಿಡುಗಡೆ

ಅಂತೆಯೇ ಭಾರತದಲ್ಲಿರುವ ಆಡಿ ಘಟಕದಲ್ಲಿಯೇ ಕ್ಯೂ2 ಸಣ್ಣ ಎಸ್ ಯುವಿ ಸ್ಥಳೀಯವಾಗಿ ನಿರ್ಮಾಣವಾಗಲಿದೆಯೇ ಎಂಬುದು ಸಹ ತಿಳಿದು ಬಂದಿಲ್ಲ. ಇಂತಹದೊಂದು ನೀತಿ ಅನುಸರಿಸಿದ್ದಲ್ಲಿ ಸ್ಪರ್ಧಾತ್ಮಕ ಬೆಲೆ ಕಾಪಾಡಿಕೊಳ್ಳಲು ನೆರವಾಗಲಿದೆ.

ಅತಿ ಶೀಘ್ರದಲ್ಲೇ ಆಡಿ ಕ್ಯೂ2 ಮಿನಿ ಎಸ್‌ಯುವಿ ಬಿಡುಗಡೆ

ಸದ್ಯಕ್ಕೆ ಎ3, ಎ8 ಗಳಂತಹ ಆಯ್ದ ನಿರ್ವಹಣಾ ಕಾರುಗಳಲ್ಲಿ ಮಾತ್ರ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಲಾಗಿದೆ. ಇನ್ನೊಂದೆಡೆ ಇನ್ನಷ್ಟೇ ಆಗಮನವಾಗಲಿರುವ ಎ4 ಸೆಡಾನ್ ಕಾರಿನಲ್ಲಿ 1.4 ಲೀಟರ್ ಪೆಟ್ರೋಲ್ ಎಂಜಿನ್ ಇರಲಿದೆ.

ಅತಿ ಶೀಘ್ರದಲ್ಲೇ ಆಡಿ ಕ್ಯೂ2 ಮಿನಿ ಎಸ್‌ಯುವಿ ಬಿಡುಗಡೆ

ಅತ್ತ ಡೀಸೆಲ್ ಕಾರುಗಳ ಮೇಲಿನ ನಿಷೇಧವನ್ನು ತೆರವುಗಳೊಳಿಸಿದ್ದ ಸುಪ್ರೀಂ ಕೋರ್ಟ್, ವಾಹನದ ಎಕ್ಸ್ ಶೋ ರೂಂ ಬೆಲೆಯ ಶೇಕಡಾ 1ರಷ್ಟು ಹಸಿರು ತೆರಿಗೆಯನ್ನು ವಿಧಿಸಿತ್ತು.

Most Read Articles

Kannada
Read more on ಆಡಿ audi
English summary
Audi Q2 Mini SUV To Be Launched In The Indian Market Soon
Story first published: Thursday, August 25, 2016, 16:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X