ಸಂಗೀತದ ತಾಳಗತಿಯಂತೆ ಷೆವರ್ಲೆ ಬೀಟ್ ಆಕ್ಟಿವ್ ಸ್ಪಂದನ

By Nagaraja

ಬೀಟ್ ಮೂಲಕ ಸಣ್ಣ ಕಾರು ವಿಭಾಗಕ್ಕೆ ಎಂಟ್ರಿ ಕೊಟ್ಟಿರುವ ಷೆವರ್ಲೆ ಅಷ್ಟೇನೂ ಯಶ ಕಂಡಿರಲಿಲ್ಲ. ಇಲ್ಲಿಗೂ ಸೋಲೊಪ್ಪಿಕೊಳ್ಳಲು ತಯಾರಾಗದ ಅಮೆರಿಕದ ಐಕಾನಿಕ್ ಜನರಲ್ ಮೋಟಾರ್ಸ್ ಸಂಸ್ಥೆಯೀಗ, 2016 ಆಟೋ ಎಕ್ಸ್ ಪೋದಲ್ಲಿ ಅತಿ ನೂತನ ಬೀಟ್ ಆಕ್ಟಿವ್ ಕಾನ್ಸೆಪ್ಟ್ ಕಾರನ್ನು ಅನಾವರಣಗೊಳಿಸಿದೆ.

ಸಂಗತೀದ ತಾಳಗತಿಯಂತೆ ಷೆವರ್ಲೆ ಬೀಟ್ ಆಕ್ಟಿವ್ ಕಾರು ಸ್ಪಂದಿಸಿದ್ದು, ಮುಂಬರುವ ದಿನಗಳಲ್ಲಿ ಮಾರುಕಟ್ಟೆ ಪ್ರವೇಶಿಸಿದ್ದಲ್ಲಿ ಅಚ್ಚರಿಪಡಬೇಕಾಗಿಲ್ಲ.

ಷೆವರ್ಲೆ ಬೀಟ್ ಆಕ್ಟಿವ್


ಎಂಜಿನ್ ತಾಂತ್ರಿಕತೆ
ಬೀಟ್ ಹ್ಯಾಚ್ ಬ್ಯಾಕ್ ಕಾರಿನಲ್ಲಿರುವುದಕ್ಕೆ ಸಮಾನವಾದ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಗಳು ಬಳಕೆಯಾಗುವ ಸಾಧ್ಯತೆಯಿದೆ. ಇದರ 1.2 ಲೀಟರ್ ಪೆಟ್ರೋಲ್ ಎಂಜಿನ್ 107 ಎನ್‌ಎಂ ತಿರುಗುಬಲದಲ್ಲಿ 77 ಅಶ್ವಶಕ್ತಿಯನ್ನು ಮತ್ತು 1 ಲೀಟರ್ ಡೀಸೆಲ್ ಎಂಜಿನ್ 142.5 ಎನ್‌ಎಂ ತಿರುಗುಬಲದಲ್ಲಿ 56 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಅಲ್ಲದೆ 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ ಇರಲಿದೆ.

ಶೈಲಿ
ಬೀಟ್ ಆಕ್ಟಿವ್ ಕಾರಿನ ಒಟ್ಟಾರೆ ವಿನ್ಯಾಸದಲ್ಲಿ ಷೆವರ್ಲೆ ಹೆಚ್ಚಿನ ಗಮನ ಹರಿಸಿದೆ. ಇದು ಸಾಮಾನ್ಯ ಆವೃತ್ತಿಗಿಂತಲೂ ಹೆಚ್ಚು ಪರಿಣಾಮಕಾರಿ ವಿನ್ಯಾಸವನ್ನು ಕಾಪಾಡಿಕೊಂಡಿದ್ದು ಹೆಚ್ಚು ಪ್ರೀಮಿಯಂ ಎನಿಸಿಕೊಳ್ಳಲಿದೆ. ಮುಂಭಾಗ ಹಾಗೂ ಹಿಂಭಾಗದಲ್ಲೂ ಸ್ಕಿಡ್ ಪ್ಲೇಟ್ ಕಂಡುಬರಲಿದೆ. ಇನ್ನು ಮುಂಭಾಗದಲ್ಲಿ ಡೇಟೈಮ್ ರನ್ನಿಂಗ್ ಎಲ್‌ಇಡಿ ಲೈಟ್ಸ್ ಮತ್ತು ಹಿಂಭಾಗದಲ್ಲಿ ವಿಭಜಿತ ಟೈಲ್ ಲ್ಯಾಂಪ್ ಗಳಿರಲಿದೆ.


ಬೆಲೆ, ಲಭ್ಯತೆ ಮತ್ತು ಪ್ರತಿಸ್ಪರ್ಧಿಗಳು
ಸದ್ಯಕ್ಕೆ ಬೀಟ್ ಆಕ್ಟಿವ್ ಬಿಡುಗಡೆಗೆ ಸಂಬಂಧಪಟ್ಟಂತೆ ಯಾವುದೇ ಖಚಿತ ಮಾಹಿತಿಗಳು ಲಭ್ಯವಾಗಿಲ್ಲ. ಹಾಗಿದ್ದರೂ ಒಮ್ಮೆ ದೇಶದ ಮಾರುಕಟ್ಟೆಗೆ ಎಂಟ್ರಿ ಕೊಟ್ಟರೆ, ಟೊಯೊಟಾ ಎಟಿಯೋಸ್ ಕ್ರಾಸ್, ಫೋಕ್ಸ್ ವ್ಯಾಗನ್ ಪೊಲೊ ಕ್ರಾಸ್ ಮತ್ತು ಫಿಯೆಟ್ ಅವೆಂಚ್ಯುರಾ ಮಾದರಿಗಳಿಗೆ ಪ್ರತಿಸ್ಪರ್ಧಿಯನ್ನು ಒಡ್ಡಲಿದೆ.

Most Read Articles

Kannada
English summary
2016 Auto Expo: Chevrolet Beat Activ Concept Makes Debut
Story first published: Monday, February 8, 2016, 17:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X