ಇಸುಝು ಸಾಹಸ ಉಪಯುಕ್ತ ವಾಹನ ಭಾರತಕ್ಕೆ

By Nagaraja

ಜಪಾನ್ ಮೂಲದ ಮುಂಚೂಣಿಯ ವಾಣಿಜ್ಯ ವಾಹನ ತಯಾರಕ ಸಂಸ್ಥೆಯಾಗಿರುವ ಇಸುಝು, 2016 ಆಟೋ ಎಕ್ಸ್ ಪೋದಲ್ಲಿ ಅತಿ ನೂತನ ಡಿ ಮ್ಯಾಕ್ಸ್ ವಿ ಕ್ರಾಸ್ ಸಾಹಸ ಉಪಯುಕ್ತ ವಾಹನವನ್ನು ಅನಾವರಣಗೊಳಿಸಿದೆ.

ಆಂಧ್ರ ಪ್ರದೇಶದಲ್ಲಿ ಸ್ಥಿತಗೊಂಡಿರುವ ಸಂಸ್ಥೆಯ ಘಟಕದಲ್ಲಿ ಎಪ್ರಿಲ್ ತಿಂಗಳಿಂದ ನಿರ್ಮಾಣ ಕಾರ್ಯ ಆರಂಭವಾಗಲಿರುವ ಇಸುಝು ಡಿ ಮ್ಯಾಕ್ಸ್ ವಿ ಕ್ರಾಸ್ ಅಡ್ವೆಂಚರ್ ಯುಟಿಲಿಟಿ ವೆಹಿಕಲ್ ಪ್ರಸಕ್ತ ಸಾಲಿನ ದ್ವಿತಿಯಾರ್ಧದಲ್ಲಿ ಮಾರುಕಟ್ಟೆಯನ್ನು ತಲುಪಲಿದೆ.

ಇಸುಝು ಸಾಹಸ ಉಪಯುಕ್ತ ವಾಹನ ಭಾರತಕ್ಕೆ

ಭಾರತವನ್ನು ಸಂಸ್ಥೆಯ ಜಾಗತಿಕ ಕೇಂದ್ರ ಬಿಂದುವಾಗಿ ಪರಿವರ್ತಿಸುವ ಇರಾದೆಯಲ್ಲಿರುವ ಇಸುಝು, ತನ್ನ ಎರಡನೇ ತಲೆಮಾರಿನ ಡಿ ಮ್ಯಾಕ್ಸ್ ವಿ ಕ್ರಾಸ್ ವಾಹನವನ್ನು ಪರಿಚಯಿಸಿದೆ. ಇದು ಈಗಗಾಲೇ ಯುರೋಪ್, ಆಸ್ಟ್ರೇಲಿಯಾ, ಥಾಯ್ಲೆಂಡ್ ಮತ್ತು ದಕ್ಷಿಣ ಅಮೆರಿಕ ಮಾರುಕಟ್ಟೆಯನ್ನು ತಲುಪಿದೆ.

ಇಸುಝು ಸಾಹಸ ಉಪಯುಕ್ತ ವಾಹನ ಭಾರತಕ್ಕೆ

ನೂತನ ಇಸುಝು ಡಿ ಮ್ಯಾಕ್ಸ್ ವಿ ಕ್ರಾಸ್ 134 ಅಶ್ವಶಕ್ತಿ ಉತ್ಪಾದಿಸಬಲ್ಲ ಹೈ ಪ್ರಿಶರ್ ಕಾಮನ್ ರೈಲ್ ಫ್ಯೂಯಲ್ ಇಂಜೆಕ್ಷನ್ ಡೀಸೆಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದೆ.

ಇಸುಝು ಸಾಹಸ ಉಪಯುಕ್ತ ವಾಹನ ಭಾರತಕ್ಕೆ

15 ಲಕ್ಷ ರು.ಗಳ ಅಸುಪಾಸಿನಲ್ಲಿ ಮಾರುಕಟ್ಟೆ ತಲುಪುವ ನಿರೀಕ್ಷೆಯಲ್ಲಿರುವ ಇ ಡಿ ಮ್ಯಾಕ್ಸ್ ವಿ ಕ್ರಾಸ್, ಜೀವನಶೈಲಿ ವಾಹನ ಇಷ್ಟಪಡುವ ಗ್ರಾಹಕರಿಗೆ ಪರಿಪೂರ್ಣ ಆಯ್ಕೆಯಾಗಿರಲಿದೆ.

ಇಸುಝು ಸಾಹಸ ಉಪಯುಕ್ತ ವಾಹನ ಭಾರತಕ್ಕೆ

ವಾಹನ ವಿಶ್ಲೇಷಕರ ಪ್ರಕಾರ ಪಿಕಪ್ ವಿಭಾಗವು ಭಾರತದಲ್ಲಿ ಶಿಪ್ರ ಗತಿಯಲ್ಲಿ ಬೆಳವಣಿಗೆ ಸಾಧಿಸಲಿದ್ದು, ಈ ನಿಟ್ಟಿನಲ್ಲಿ ಗ್ರಾಹಕರನ್ನು ತನ್ನತ್ತ ಸೆಳೆಯುವ ಇರಾದೆಯನ್ನು ಇಸುಝು ಹೊಂದಿದೆ.

ಇಸುಝು ಸಾಹಸ ಉಪಯುಕ್ತ ವಾಹನ ಭಾರತಕ್ಕೆ

ಭಾರತದಲ್ಲಿ ಮಹತ್ತರ ಯೋಜನೆ ಹೊಂದಿರುವ ಇಸುಝು, ಬರೋಬ್ಬರಿ 3,000 ಕೋಟಿ ರುಪಾಯಿಗಳನ್ನು ಹೂಡಿಕೆ ಮಾಡಲಿದೆ. ಅಲ್ಲದೆ ಶಿಪ್ರ ಗತಿಯಲ್ಲಿ ಬೆಳೆದು ಬರುತ್ತಿರುವ ಭಾರತವನ್ನು ಜಾಗತಿಕ ಕೇಂದ್ರ ಬಿಂದುವನ್ನಾಗಿ ಪರಿವರ್ತಿಸುವ ಗುರಿ ಹೊಂದಿದೆ.

ಇಸುಝು ಸಾಹಸ ಉಪಯುಕ್ತ ವಾಹನ ಭಾರತಕ್ಕೆ

ತನ್ನ ಯೋಜನೆಯನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ 100ರಷ್ಟು ವಿತರಕರೊಂದಿಗೆ ಒಡಂಬಡಿಕೆ ಮಾಡಿಕೊಂಡಿರುವ ಇಸುಝು, ಪ್ರಾರಂಭದಲ್ಲಿ 50,000 ಯುನಿಟ್ ಗಳನ್ನು ನಿರ್ಮಿಸುವ ಗುರಿ ಹೊಂದಿದ್ದು, 27 ಡೀಲರ್ ಶಿಪ್ ಗಳ ಮುಖಾಂತರ ಮಾರಾಟ ಹಮ್ಮಿಕೊಳ್ಳಲಿದೆ.

Most Read Articles

Kannada
English summary
Isuzu unveils D-MAX V-Cross at Auto Expo 2016
Story first published: Friday, February 12, 2016, 17:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X