ಲಕಲಕ ಹೊಳೆಯುವ ಜಾಗ್ವಾರ್ ಕಾರಲ್ಲಿ ಕತ್ರಿನಾ ಫುಲ್ ಮಿಂಚಿಂಗ್!

By Nagaraja

ದೇಶದ ಅತಿ ದೊಡ್ಡ ವಾಹನ ಸಂಸ್ಥೆ ಟಾಟಾ ಮೋಟಾರ್ಸ್ ಅಧೀನತೆಯಲ್ಲಿರುವ ಬ್ರಿಟನ್‌ನ ಐಕಾನಿಕ್ ಜಾಗ್ವಾರ್, ಮಗದೊಂದು ಐಕಾನಿಕ್ ಕಾರನ್ನು 2016 ಆಟೋ ಎಕ್ಸ್ ಪೋದಲ್ಲಿ ಬಿಡುಗಡೆಗೊಳಿಸಿದೆ. ಅದುವೇ, ಜಾಗ್ವಾರ್ ಎಕ್ಸ್‌ಇ ಐಷಾರಾಮಿ ಸೆಡಾನ್ ಕಾರು.

ಲಕಲಕ ಹೊಳೆಯುವ ಜಾಗ್ವಾರ್ ಎಕ್ಸ್‌ಇ ಕಾರನ್ನು ಬಾಲಿವುಡ್ ಬೆಡಗಿ ಕತ್ರಿನಾ ಕೈಫ್ ಅನಾವರಣಗೊಳಿಸಿರುವುದು ಈ ಐಷಾರಾಮಿ ಕಾರಿಗೆ ಮತ್ತಷ್ಟು ಮೆರಗು ತುಂಬುವಂತಾಗಿತ್ತು.

ಜಾಗ್ವಾರ್ ಎಕ್ಸ್‌ಇ


ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)
ಜಾಗ್ವಾರ್ ಎಕ್ಸ್‌ಇ 2.0 ಲೀಟರ್ ಪೆಟ್ರೋಲ್ ಪ್ಯೂರ್: 39.90 ಲಕ್ಷ ರು.
ಜಾಗ್ವಾರ್ ಎಕ್ಸ್‌ಇ 2.0 ಲೀಟರ್ ಪೆಟ್ರೋಲ್ ಪೋರ್ಟ್ ಫೋಲಿಯೊ: 46.90 ಲಕ್ಷ ರು.

ಎಂಜಿನ್ ತಾಂತ್ರಿಕತೆ

ಜಾಗ್ವಾರ್ ಎಕ್ಸ್‌ಇ ಪ್ಯೂರ್
1999 ಸಿಸಿ
197 ಅಶ್ವಶಕ್ತಿ (5500 ಆರ್‌ಪಿಎಂ)
320 ಎನ್‌ಎಂ ತಿರುಗುಬಲ (1750 ಆರ್‌ಪಿಎಂ)

ವೇಗವರ್ಧನೆ
ಗಂಟೆಗೆ 0-100 ಕೀ.ಮೀ.: 7.7 ಸೆಕೆಂಡುಗಳಲ್ಲಿ
ಗರಿಷ್ಠ ವೇಗ: ಗಂಟೆಗೆ 237 ಕೀ.ಮೀ.
ಮೈಲೇಜ್: 13.06

ಜಾಗ್ವಾರ್ ಎಕ್ಸ್‌ಇ ಪೋರ್ಟ್ ಫೋಲಿಯೊ
1999 ಸಿಸಿ
237 ಅಶ್ವಶಕ್ತಿ (5500 ಆರ್‌ಪಿಎಂ)
340 ಎನ್‌ಎಂ ತಿರುಗುಬಲ (2000-4000 ಆರ್‌ಪಿಎಂ)

ವೇಗವರ್ಧನೆ
ಗಂಟೆಗೆ 0-100 ಕೀ.ಮೀ.: 6.8 ಸೆಕೆಂಡುಗಳಲ್ಲಿ
ಗರಿಷ್ಠ ವೇಗ: ಗಂಟೆಗೆ 250 ಕೀ.ಮೀ.
ಮೈಲೇಜ್: 13.05

ಗೇರ್ ಬಾಕ್ಸ್: 8 ಸ್ಪೀಡ್ ಆಟೋಮ್ಯಾಟಿಕ್.

ಜಾಗ್ವಾರ್ ಎಕ್ಸ್‌ಇ


ಶೈಲಿ,
ಜಾಗ್ವಾರ್ ಎಕ್ಸ್‌ಎಫ್ ಹಾಗೂ ಎಕ್ಸ್‌ಜೆ ಮಾದರಿಗಳಿಂದ ಪ್ರೇರಣೆ ಪಡೆದುಕೊಂಡು ಎಕ್ಸ್‌ಇ ವಿನ್ಯಾಸ ರಚಿಸಲಾಗಿದೆ. ಮುಂಭಾಗದಲ್ಲಿ ದೊಡ್ಡದಾದ ಗ್ರಿಲ್ ಹಾಗೂ ನಿಖರ ರೇಖೆಗಳನ್ನು ಇದು ಪಡೆದಿದೆ.

ವಿಶಿಷ್ಟತೆಗಳು
ಫಸ್ಟ್ ಇನ್ ಕ್ಲಾಸ್ ಅಲ್ಯೂಮಿನಿಯಂ ಇಂಟೆನ್ಸಿವ್ ಮೊನೊಕಾಕ್ ಡಿಸೈನ್,
ಐಷಾರಾಮಿ ಲೆಥರ್ ಇಂಟಿರಿಯರ್,
ಎಂಟು ಇಂಚುಗಳ ಮಾಹಿತಿ ಮನರಂಜನಾ ವ್ಯವಸ್ಥೆ,
ಮೆರಿಡಿಯನ್ ಆಡಿಯೋ ಸೌಂಡ್ ಸಿಸ್ಟಂ,
ಆಲ್ ಸರ್ಫೆಸ್ ಪ್ರೊಗ್ರೆಸ್ ಕಂಟ್ರೋಲ್ (ಎಎಸ್‌ಪಿಸಿ),
ಲೊ ಸ್ಪೀಡ್ ಕ್ರೂಸ್ ಕಂಟ್ರೋಲ್,
ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್ (ಡಿಎಸ್‌ಸಿ) ಮತ್ತು
ಎಲೆಕ್ಟ್ರಿಕ್ ನಿಯಂತ್ರಿತ ಅಸಿಸ್ಟಡ್ ಸ್ಟೀರಿಂಗ್

ಲಭ್ಯತೆ, ಪ್ರತಿಸ್ಪರ್ಧಿಗಳು
ಜಾಗ್ವಾರ್ ಎಕ್ಸ್‌ಇ ದೇಶದ ಅಧಿಕೃತ ಡೀಲರುಗಳಲ್ಲಿ ಲಭ್ಯವಾಗಿದ್ದು, ಮರ್ಸಿಡಿಸ್ ಬೆಂಝ್ ಸಿ ಕ್ಲಾಸ್, ಆಡಿ ಎ4 ಮತ್ತು ಬಿಎಂಡಬ್ಲ್ಯು 3 ಸಿರೀಸ್ ಮುಂತಾದ ಮಾದರಿಗಳಿಗೆ ಪ್ರತಿಸ್ಪರ್ಧೆಯನ್ನು ಒಡ್ಡಲಿದೆ.

Most Read Articles

Kannada
English summary
2016 Auto Expo: Jaguar XE Prowls Into India
Story first published: Wednesday, February 10, 2016, 14:32 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X