ಶಕ್ತಿಶಾಲಿ ಜೀಪ್ ಗ್ರಾಂಡ್ ಚೆರೋಕೀ ಎಸ್‌ಆರ್‌ಟಿ ಭಾರತ ಪ್ರವೇಶಕ್ಕೆ ಸಜ್ಜು

By Nagaraja

ಜೀಪ್ ವ್ರ್ಯಾಂಗ್ಲರ್ ಜೊತೆ ಜೊತೆಗೆ ಐಕಾನಿಕ್ ಜೀಪ್ ಗ್ರಾಂಡ್ ಚೆರೋಕೀ ಭಾರತಕ್ಕೆ ಭರ್ಜರಿ ಪ್ರವೇಶ ಪಡೆದಿದೆ. ಇತ್ತೀಚೆಗಷ್ಟೇ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದ 13ನೇ ಆಟೋ ಎಕ್ಸ್ ಪೋದಲ್ಲಿ ಜೀಪ್ ಚೆರೋಕೀ ಭರ್ಜರಿ ಪ್ರದರ್ಶನ ಕಂಡಿದೆ.

ಕೊನೆಗೂ ಬಹಳ ವರ್ಷಗಳ ಕಾಯುವಿಕೆಗೆ ವಿರಾಮ ಹಾಡಿರುವ ಫಿಯೆಟ್ ಕ್ರೈಸ್ಲರ್ ಆಟೋಮೊಬೈಲ್ಸ್ ಸಂಸ್ಥೆಯ ಒಡೆತನದಲ್ಲಿರುವ ಅಮೆರಿಕದ ಐಕಾನಿಕ್ ಜೀಪ್ ಭಾರತಕ್ಕೆ ಎಂಟ್ರಿ ಕೊಡಲು ಸಜ್ಜಾಗ್ಗುತ್ತಿದೆ.

ಜೀಪ್ ಗ್ರಾಂಡ್ ಚೆರೋಕೀ ಎಸ್‌ಆರ್‌ಟಿ


ಎಂಜಿನ್ ತಾಂತ್ರಿಕತೆ
6.4 ಲೀಟರ್ ಎಚ್‌ಇಎಂಐ ವಿ8,
475 ಅಶ್ವಶಕ್ತಿ (6000 ಆರ್‌ಪಿಎಂ)
637 ಎನ್‌ಎಂ ತಿರುಗುಬಲ (4300 ಆರ್‌ಪಿಎಂ)
4.8 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ.
ಗರಿಷ್ಠ ವೇಗ ಗಂಟೆಗೆ 257 ಕೀ.ಮೀ.

ಗೇರ್ ಬಾಕ್ಸ್: 8 ಸ್ಪೀಡ್ ಆಟೋಮ್ಯಾಟಿಕ್.

ಶೈಲಿ
ಎಸ್ ಯುವಿ ಶೈಲಿಯ ವಿನ್ಯಾಸ ಮೈಗೂಡಿಸಿ ಬಂದಿರುವ ಜೀಪ್ ಗ್ರಾಂಡ್ ಚೆರೋಕೀ ಎಸ್‌ಆರ್‌ಟಿ, ಮುಂಭಾಗದಲ್ಲಿ ಶಕ್ತಿಯುತ ಹಾಗೂ ದೃಢಕಾಯದ ಫ್ರಂಟ್ ಗ್ರಿಲ್ ಪಡೆದುಕೊಂಡಿದೆ. ಹಾಗೆಯೇ ಹಿಂಭಾಗದಲ್ಲಿ ಟೈಲ್ ಲ್ಯಾಂಪ್ ವಿಶಿಷ್ಟತೆ ಕಾಪಾಡಿಕೊಂಡಿದೆ.

ಕಾರಿನೊಳಗೆ ಮನರಂಜನೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, 7 ಇಂಚುಗಳ ಮಾಹಿತಿ ಮನರಂಜನಾ ವ್ಯವಸ್ಥೆಯು ಇದರಲ್ಲಿರಲಿದೆ.


ಸುರಕ್ಷತೆ
ಇನ್ನು ಕಾರಿನ ಭದ್ರತೆಗಾಗಿ ಏಳು ಏರ್ ಬ್ಯಾಗ್, ಇಎಸ್ ಸಿ, ಎಬಿಎಸ್, ಎಲೆಕ್ಟ್ರಾನಿಕ್ ರಾಲ್ ಮಿಟಿಗೇಷನ್ (ಇಆರ್ ಎಂ), ಆಲ್ ಸ್ಪೀಡ್ ಟ್ರಾಕ್ಷನ್ ಕಂಟ್ರೋಲ್ ಮತ್ತು ಟ್ರೈಲರ್ ಸ್ವೇ ಕಂಟ್ರೋಲ್ (ಟಿಎಸ್ ಸಿ) ಇದರಲ್ಲಿರಲಿದೆ.

ಪ್ರತಿಸ್ಪರ್ಧಿಗಳು
ಪ್ರಮುಖವಾಗಿಯೂ ದೇಶದ ಮಾರುಕಟ್ಟೆಯಲ್ಲಿ ಜೀಪ್ ಎಸ್‌ಆರ್‌ಟಿ, ಮರ್ಸಿಡಿಸ್ ಬೆಝ್ ಜಿಎಲ್‌ಇ, ಬಿಎಂಡಬ್ಲ್ಯು ಎಕ್ಸ್3 ಮತ್ತು ಆಡಿ ಕ್ಯೂ5 ಮಾದರಿಗಳಿಗೆ ಪೈಪೋಟಿಯನ್ನು ಒಡ್ಡಲಿದೆ.

Most Read Articles

Kannada
English summary
Auto Expo 2016: Jeep Thunders Into India Astride The Grand Cherokee SRT
Story first published: Saturday, February 13, 2016, 10:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X