ವಾಹನ ಪ್ರೇಮಿಗಳನ್ನು ಮಂತ್ರ ಮುಗ್ಧಗೊಳಿಸಿದ ಮಹೀಂದ್ರ ಏರೋ ಕಾನ್ಸೆಪ್ಟ್

By Nagaraja

2016 ಆಟೋ ಎಕ್ಸ್ ಪೋವನ್ನು ಪ್ರತಿಯೊಂದು ವಾಹನ ತಯಾರಿಕ ಸಂಸ್ಥೆಗಳು ಹೊಸತನದೊಂದಿಗೆ ಬರ ಮಾಡಿಕೊಂಡಿದ್ದವು. ಇದರಿಂದ ದೇಶದ ಎಸ್‌ಯುವಿ ದೈತ್ಯ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆ ಕೂಡಾ ಹೊರತಾಗಿರಲಿಲ್ಲ.

ಭಾರತದಲ್ಲಿ ಇದುವರೆಗೆ ಕ್ರೀಡಾ ಬಳಕೆಯ ವಾಹನದಲ್ಲಿ ಮಾತ್ರ ಯಶ ಕಂಡಿರುವ ಮಹೀಂದ್ರ ಈ ಬಾರಿಯ ವಾಹನ ಪ್ರದರ್ಶನ ಮೇಳದಲ್ಲಿ ಹೊಸ ಯೋಜನೆಗೆ ಮುಂದಾಗಿತ್ತು. ಇದರ ಫಲಶ್ರುತಿಯೆಂಬಂತೆ ಆಕರ್ಷಕ ಎಕ್ಸ್‌ಯುವಿ ಏರೋ ಕಾನ್ಸೆಪ್ಟ್ ಭರ್ಜರಿ ಪ್ರದರ್ಶನಗೊಂಡಿದೆ.

ಮಹೀಂದ್ರ ಎಕ್ಸ್‌ಯುವಿ ಏರೋ ಕಾನ್ಸೆಪ್ಟ್


ವಾಹನ ಪ್ರೇಮಿಗಳನ್ನು ಅಕ್ಷರಶ: ಮಂತ್ರ ಮುಗ್ಧಗೊಳಿಸಿರುವ ಮಹೀಂದ್ರ ಎಕ್ಸ್‌ಯುವಿ ಏರೋ ಕಾನ್ಸೆಪ್ಟ್ ಕಾರು ಯಾವಾಗ ನಿರ್ಮಾಣ ಆವೃತಿಗೆ ಪರಿವರ್ತನೆಯಾಗಲಿದೆ ಎಂಬುದಕ್ಕೆ ಸಂಬಂಧಿಸಿದಂತೆ ಸದ್ಯಕ್ಕೆ ಹೆಚ್ಚಿನ ಮಾಹಿತಿಗಳು ಲಭ್ಯವಾಗಿಲ್ಲ.

ಸಂಪೂರ್ಣವಾಗಿ ಸ್ವದೇಶವಾಗಿ ನಿರ್ಮಿತ ಎಕ್ಸ್ ಯುವಿ ಏರೋ ಕಾನ್ಸೆಪ್ಟ್ ಕಾರಿನಲ್ಲಿ 210 ಅಶ್ವಶಕ್ತಿ ಉತ್ಪಾದಿಸಬಲ್ಲ ಶಕ್ತಿಶಾಲಿ ಎಂಹಾಕ್ ಎಂಜಿನ್ ಆಳವಡಿಸಲಾಗಿದೆ. ಇದು ಕೇವಲ ಆರು ಸೆಕೆಂಡುಗಳಲ್ಲೇ ಗಂಟೆಗೆ 100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ.


ವಿನ್ಯಾಸ
ಮೂಲತ: ಕೂಪೆ ಕಾರಿನ ವಿನ್ಯಾಸವನ್ನು ಕಾಪಾಡಿಕೊಳ್ಳಲಾಗಿದ್ದು, ಇಲ್ಲಿಯೂ ಸಂಸ್ಥೆಗೆ ಚಿರತೆಯು ಸ್ಪೂರ್ತಿಯಾಗಿದೆ. ಮಹೀಂದ್ರದ ಜನಪ್ರಿಯ ಎಕ್ಸ್‌ಯುವಿ500 ಕಾರನ್ನು ನೀವಿಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

ಇದನ್ನು ಕೂಪೆ, ಎಸ್‌ಯುವಿ ಹಾಗೂ ಕ್ರಾಸೋವರ್ ಶೈಲಿ ಮಿಶ್ರಿತ ವಾಹನ ಎಂದೂ ಸಹ ವಿಶ್ಲೇಷಿಸಬಹುದಾಗಿದೆ. ಮುಂಭಾಗದಲ್ಲಿ ಎಕ್ಸ್‌ಯುವಿ500 ವಿನ್ಯಾಸಕ್ಕೆ ಸಾಮತ್ಯೆಯನ್ನು ಪಡೆದುಕೊಂಡರೂ ಹಿಂಭಾಗಕ್ಕೆ ಬಾಗಿದಂತೆ ಕೂಪೆ ಶೈಲಿಯ ನೈಜ ದರ್ಶನವಾಗುತ್ತದೆ.

ಏನೇ ಆದರೂ ನಿಕಟ ಭವಿಷ್ಯದಲ್ಲೇ ಮಹೀಂದ್ರ ಎಕ್ಸ್‌ಯುವಿ ಏರೋ ಕೂಪೆ ಕಾನ್ಸೆಪ್ಟ್ ಕಾರಿನ ವಿಶ್ವ ದರ್ಶನವಾಗಲಿದೆ ಎಂಬುದನ್ನಂತೂ ಸಂಸ್ಥೆ ಸ್ಪಷ್ಟಪಡಿಸಿದೆ.

Most Read Articles

Kannada
English summary
Mahindra Unveils Stunning XUV Aero Concept Coupe At Auto Expo
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X