ನಮ್ಮ ಬೆಂಗಳೂರಿನಲ್ಲಿ ಮಾಲಿನ್ಯ ಮಟ್ಟ ಜಾಸ್ತಿ ಯಾಕೆ?

By Nagaraja

ವಾಹನಗಳಿಂದ ತುಂಬಿಕೊಂಡಿರುವ ನಮ್ಮ ಬೆಂಗಳೂರಿನಲ್ಲಿ ಮಾಲಿನ್ಯ ಮಟ್ಟ ಎಷ್ಟಿದೆ ಎಂಬುದು ಗೊತ್ತೇ? ತಾಜಾ ಅಧ್ಯಯನ ವರದಿಗಳ ಪ್ರಕಾರ ನಮ್ಮ ಬೆಂಗಳೂರಿನಲ್ಲಿ ಶೇಕಡಾ 36.3ರಷ್ಟು ಡೀಸೆಲ್ ವಾಹನಗಳು ಹಾಗೂ ಶೇಕಡಾ 12.6 ರಷ್ಟು ಪೆಟ್ರೋಲ್ ವಾಹನಗಳು ಹೊಗೆ ವಿಸರ್ಜನಾ ಮಟ್ಟದ ರಾಷ್ಟ್ರೀಯ ಮಟ್ಟವನ್ನು ಮೀರಿದೆ ಎಂಬ ಆಘಾತಕಾರಿ ವಿವರಗಳನ್ನು ಬಹಿರಂಗ ಮಾಡಿದೆ.

ನಗರದಲ್ಲಿ ಓಡಾಡುತ್ತಿರುವ 15 ವರ್ಷಕ್ಕಿಂತಲೂ ಹಳೆಯದಾದ ಪೆಟ್ರೋಲ್ ಹಾಗೂ ಡೀಸೆಲ್ ವಾಹನಗಳು ಅತಿ ಹೆಚ್ಚು ಮಾಲಿನ್ಯವನ್ನು ಉಂಟು ಮಾಡುತ್ತಿದೆ ಎಂಬುದನ್ನು ವರದಿ ಉಲ್ಲೇಖಿಸಿದೆ.

ನಮ್ಮ ಬೆಂಗಳೂರಿನಲ್ಲಿ ಮಾಲಿನ್ಯ ಮಟ್ಟ ಜಾಸ್ತಿ ಯಾಕೆ?

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್ ಪಿಸಿಬಿ), ಸಾರಿಗೆ ಮತ್ತು ರಸ್ತೆ ಸುರಕ್ಷತಾ ಇಲಾಖೆ, ಟ್ರಾಫಿಕ್ ಪೊಲೀಸ್, ಬಿಎಂಟಿಸಿ ಮತ್ತು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ (ಸಿಪಿಸಿಬಿ) ಪ್ರಾದೇಶಿಕ ಕಚೇರಿಯು ಸೇರಿಕೊಂಡು ಅಧ್ಯಯನವನ್ನು ಹಮ್ಮಿಕೊಂಡಿತ್ತು.

ನಮ್ಮ ಬೆಂಗಳೂರಿನಲ್ಲಿ ಮಾಲಿನ್ಯ ಮಟ್ಟ ಜಾಸ್ತಿ ಯಾಕೆ?

ಜೂನ್ ಹಾಗೂ ಜುಲೈ ತಿಂಗಳಲ್ಲಿ ಬೆಂಗಳೂರು ನಗರದಲ್ಲಿ ವಾಹನಗಳ ಮಾಲಿನ್ಯ ಹೊರಸೂಸುವಿಕೆಯನ್ನು ಜಂಟಿ ಪರಿಶೀಲನೆಯನ್ನು ನಡೆಸಲಾಗಿತ್ತು. ಇದರಲ್ಲಿ ಆಘಾತಕಾರಿ ಅಂಶಗಳು ಬಹಿರಂಗವಾಗಿದೆ.

ನಮ್ಮ ಬೆಂಗಳೂರಿನಲ್ಲಿ ಮಾಲಿನ್ಯ ಮಟ್ಟ ಜಾಸ್ತಿ ಯಾಕೆ?

1,279 ಪೆಟ್ರೋಲ್ ಹಾಗೂ 524 ಡೀಸೆಲ್ ಸೇರಿದಂತೆ ಒಟ್ಟು 1978 ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಗಿತ್ತು. ಈ ಪೈಕಿ 1118 ಪೆಟ್ರೋಲ್ ವಾಹನಗಳು (ಶೇಕಡಾ 87.5) ರಾಷ್ಟ್ರೀಯ ಮಾಲಿನ್ಯ ಮಿತಿಯನ್ನು ಕಾಪಾಡಿಕೊಂಡರೆ 161 ವಾಹನಗಳು (ಶೇಕಡಾ 12.6) ಮಾಲಿನ್ಯ ಮಟ್ಟವನ್ನು ಮಿತಿ ಮೀರಿದ್ದರು.

ನಮ್ಮ ಬೆಂಗಳೂರಿನಲ್ಲಿ ಮಾಲಿನ್ಯ ಮಟ್ಟ ಜಾಸ್ತಿ ಯಾಕೆ?

ಅಂತೆಯೇ 334 ಡೀಸೆಲ್ (ಶೇಕಡಾ 63.7) ವಾಹನಗಳು ರಾಷ್ಟ್ರೀಯ ಮಾಲಿನ್ಯ ಮಟ್ಟವನ್ನು ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾದರೆ 190ರಷ್ಟು ವಾಹನಗಳು (ಶೇಕಡಾ 36.3) ರಾಷ್ಟ್ರೀಯ ಮಟ್ಟವನ್ನು ಮಿತಿ ಮೀರಿದೆ.

ನಮ್ಮ ಬೆಂಗಳೂರಿನಲ್ಲಿ ಮಾಲಿನ್ಯ ಮಟ್ಟ ಜಾಸ್ತಿ ಯಾಕೆ?

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಬಿಡುಗಡೆ ಮಾಡಿರುವ ವಾರ್ಷಿಕ ಸರಾಸರಿ ಅಂಶಗಳ ಪ್ರಕಾರ, ಬೆಂಗಳೂರಿನ ಎಲ್ಲ 12 ಪರೀಶೀಲನಾ ಪ್ರದೇಶಗಳಲ್ಲಿ ಶೇಕಡಾ 20ರಿಂದ ಶೇಕಡಾ 215ರಷ್ಟು ರೇಂಜ್ ನಲ್ಲಿ ಪ್ರತಿ ಯೂನಿಟ್ ಕ್ಯೂಬ್ ಗೆ 60 ಮೈಕ್ರೋಗ್ರಾಂನಷ್ಟು ರಾಷ್ಟ್ರೀಯ ಮಟ್ಟವನ್ನು ಮಿತಿ ಮೀರಿದೆ.

ನಮ್ಮ ಬೆಂಗಳೂರಿನಲ್ಲಿ ಮಾಲಿನ್ಯ ಮಟ್ಟ ಜಾಸ್ತಿ ಯಾಕೆ?

ಇವೆಲ್ಲದರ ಮೂಲಕ ಬೆಂಗಳೂರು ನಗರದ ವಾಯು ಮಾಲಿನ್ಯದಲ್ಲಿ ವಾಹನಗಳು ದೊಡ್ಡ ಪಾತ್ರ ವಹಿಸುತ್ತಿದೆ ಎಂಬುದು ತಿಳಿದು ಬಂದಿದೆ. ಬೆಳೆದು ಬರುತ್ತಿರುವ ಜನಸಂಖ್ಯೆ (95,88,910) ಹಾಗೂ ವರ್ಧಿತ ವಾಹನ ಸಂಖ್ಯೆಗಳು (2016 ಮಾರ್ಚ್ 31 ವೇಳೆಗೆ ವಾಹನಗಳ ದಾಖಲಾತಿ 67,64,111) ಪ್ರಮುಖ ಕಾರಣವೆನಿಸಿಕೊಂಡಿದೆ.

ನಮ್ಮ ಬೆಂಗಳೂರಿನಲ್ಲಿ ಮಾಲಿನ್ಯ ಮಟ್ಟ ಜಾಸ್ತಿ ಯಾಕೆ?

ಪರಿಣಾಮಕಾರಿ, ದಕ್ಷತೆ ಮತ್ತು ಅತ್ಯುತ್ತಮ ಜಾಲಬಂಧ ಸಾರಿಗೆ ವ್ಯವಸ್ಥೆಯ ಅನುಪಸ್ಥಿತಿಯೂ ಬೆಂಗಳೂರಿಗರನ್ನು ಕಾಡುತ್ತಿದೆ.

ನಮ್ಮ ಬೆಂಗಳೂರಿನಲ್ಲಿ ಮಾಲಿನ್ಯ ಮಟ್ಟ ಜಾಸ್ತಿ ಯಾಕೆ?

ಕಳಪೆ ರಸ್ತೆ, ಗುಂಡಿಗಳು, ಇಂಧನ ಕಲಬೆರಕೆ ಹಾಗೂ 15 ವರ್ಷಗಿಂತಲೂ ಹಳೆಯದಾದ ಟು ಸ್ಟ್ರೋಕ್ ವಾಹನಗಳು ಓಡಾಡುತ್ತಿರುವುದು ಮಾಲಿನ್ಯ ಮಟ್ಟವನ್ನು ಮಿತಿ ಮಿರಿಸಿದೆ.

Most Read Articles

Kannada
English summary
Do You Know How Much Namma Bengaluru Is Polluted? Here’s The Latest Study
Story first published: Saturday, August 27, 2016, 12:22 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X