10 ಲಕ್ಷ ಬಜೆಟ್‌ನೊಳಗೆ ಐದು ಅತ್ಯುತ್ತಮ ಡೀಸೆಲ್ ಕಾರುಗಳು

By Nagaraja

ಪೆಟ್ರೋಲ್ ಕಾರುಗಳಿಗೆ ಹೋಲಿಸಿದಾಗ ಡೀಸೆಲ್ ಕಾರುಗಳು ಜಾಸ್ತಿ ಇಂಧನ ಕ್ಷಮತೆಯನ್ನು ನೀಡುತ್ತದೆ. ಇದೇ ಕಾರಣಕ್ಕಾಗಿ ಹಲವಾರು ಮಂದಿ ಡೀಸೆಲ್ ಕಾರುಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಅದೇ ಹೊತ್ತಿಗೆ ಪೆಟ್ರೋಲ್ ಗಿಂತ ಡೀಸೆಲ್ ಕಾರುಗಳು ಹೆಚ್ಚು ದುಬಾರಿಯೆನಿಸಿಕೊಂಡಿದೆ.

ನಂ.1 ಸ್ಥಾನಕ್ಕೆ ರೇಸ್; ಆಲ್ಟೊ vs ಕ್ವಿಡ್ ವಿಜೇತರು ಯಾರು? ಇಲ್ಲಿ ಕ್ಕಿಕ್ಕಿಸಿ

ಭಾರತ ಮಾರುಕಟ್ಟೆಯಲ್ಲಿ ಮಧ್ಯಮ ವರ್ಗದ ಸೆಡಾನ್ ಕಾರುಗಳು ಹೆಚ್ಚು ಬೇಡಿಕೆಯನ್ನು ಕಾಯ್ದುಕೊಂಡಿದೆ. ಇದರಂತೆ ದೇಶದ ಮುಂಚೂಣಿಯ ಸಂಸ್ಥೆಗಳು ಈ ವಿಭಾಗದಲ್ಲಿ ಅತ್ಯುತ್ತಮ ಕಾರುಗಳನ್ನು ಒದಗಿಸುತ್ತಿದೆ. ಪ್ರಸ್ತುತ ಲೇಖನದಲ್ಲಿ 10 ಲಕ್ಷ ರು.ಗಳ ಬೆಲೆ ಪರಿಧಿಯೊಳಗೆ ಖರೀದಿಸಬಹುದಾದ ಐದು ಅತ್ಯುತ್ತಮ ಡೀಸೆಲ್ ಸೆಡಾನ್ ಕಾರುಗಳ ಬಗ್ಗೆ ಮಾಹಿತಿಯನ್ನು ಕೊಡಲಿದ್ದೇವೆ.

05. ಫೋಕ್ಸ್ ವ್ಯಾಗನ್ ವೆಂಟೊ

05. ಫೋಕ್ಸ್ ವ್ಯಾಗನ್ ವೆಂಟೊ

ಜರ್ಮನಿಯ ಪ್ರಖ್ಯಾತ ಫೋಕ್ಸ್ ವ್ಯಾಗನ್ ಒದಗಿಸುತ್ತಿರುವ ಅತ್ಯುತ್ತಮ ಸೆಡಾನ್ ಕಾರುಗಳಲ್ಲಿ ವೆಂಟೊ ಒಂದಾಗಿದೆ. ಇದು 10 ಲಕ್ಷಕ್ಕಿಂತಲೂ ಕೊಂಚ ದುಬಾರಿಯೆನಿಸುತ್ತದೆ. ಇದರ ಎಕ್ಸ್ ಶೋ ರೂಂ ಬೆಲೆ 10.30 ಲಕ್ಷ ರು.ಗಳಾಗಿದೆ.

ಫೋಕ್ಸ್ ವ್ಯಾಗನ್ ವೆಂಟೊ

ಫೋಕ್ಸ್ ವ್ಯಾಗನ್ ವೆಂಟೊ

ಎಂಜಿನ್: 1498 ಸಿಸಿ, 103 ಅಶ್ವಶಕ್ತಿ, 250 ಎನ್‌ಎಂ ತಿರುಗುಬಲ

ಗೇರ್ ಬಾಕ್ಸ್: 5 ಸ್ಪೀಡ್ ಮ್ಯಾನುವಲ್ ಅಥವಾ 7 ಸ್ಪೀಡ್ ಡಿಎಸ್ ಜಿ ಗೇರ್ ಬಾಕ್ಸ್

ಮೈಲೇಜ್: 20.64 kmpl

04. ಸ್ಕೋಡಾ ರಾಪಿಡ್

04. ಸ್ಕೋಡಾ ರಾಪಿಡ್

ಬೆಲೆ ನಿಮಗೊಂದು ಸಮಸ್ಯೆ ಅಲ್ಲದಿದ್ದಲ್ಲಿ ದೇಶದಲ್ಲಿ ಲಭ್ಯವಿರುವ ಅತ್ಯುತ್ತಮ ಗುಣಮಟ್ಟದ ಕಾರುಗಳಲ್ಲಿ ಒಂದಾಗಿರುವ ಸ್ಕೋಡಾ ರಾಪಿಡ್ ಆಯ್ಕೆ ಮಾಡಬಹುದಾಗಿದೆ. ಇದರ ಎಕ್ಸ್ ಶೋ ರೂಂ ಬೆಲೆ 9 ಲಕ್ಷ ರು.ಗಳಿಂದ ಆರಂಭವಾಗುತ್ತದೆ.

10 ಲಕ್ಷ ಬಜೆಟ್‌ನೊಳಗೆ ಐದು ಅತ್ಯುತ್ತಮ ಡೀಸೆಲ್ ಕಾರುಗಳು

ಎಂಜಿನ್: 1498 ಸಿಸಿ, 104 ಅಶ್ವಶಕ್ತಿ, 250 ಎನ್‌ಎಂ ತಿರುಗುಬಲ

ಗೇರ್ ಬಾಕ್ಸ್: 5 ಸ್ಪೀಡ್ ಮ್ಯಾನುವಲ್ ಅಥವಾ 7 ಸ್ಪೀಡ್ ಆಟೋಮ್ಯಾಟಿಕ್ (ಡಿಎಸ್ ಜಿ)

ಮೈಲೇಜ್: 21.66 kmpl

03. ಹ್ಯುಂಡೈ ವೆರ್ನಾ

03. ಹ್ಯುಂಡೈ ವೆರ್ನಾ

ತನ್ನ ನಿಖರವಾದ ವಿನ್ಯಾಸದಿಂದ ಜನ ಮನ ಗೆದ್ದಿರುವ ಹ್ಯುಂಡೈ ವೆರ್ನಾ ಗರಿಷ್ಠ ಭದ್ರತೆಯನ್ನು ಪಡೆದಿದೆ. 9.14 ಲಕ್ಷ ರು.ಗಳಷ್ಟು ಎಕ್ಸ್ ಶೋ ರೂಂ ಬೆಲೆ ಹೊಂದಿರುವ ಹ್ಯುಂಡೈ ವೆರ್ನಾ, ಆರು ಏರ್ ಬ್ಯಾಗ್, ಎಬಿಎಸ್, ಇಬಿಡಿ ಮುಂತಾದ ಸುರಕ್ಷತೆಗಳನ್ನು ಪಡೆದಿದೆ.

ಹ್ಯುಂಡೈ ವೆರ್ನಾ

ಹ್ಯುಂಡೈ ವೆರ್ನಾ

ಎಂಜಿನ್: 1396 ಸಿಸಿ/1582ಸಿಸಿ, 89/126ಅಶ್ವಶಕ್ತಿ, 220/260 ಎನ್‌ಎಂ ತಿರುಗುಬಲ

ಗೇರ್ ಬಾಕ್ಸ್: 6 ಸ್ಪೀಡ್ ಮ್ಯಾನುವಲ್ ಅಥವಾ 7 ಸ್ಪೀಡ್ ಆಟೋಮ್ಯಾಟಿಕ್

ಮೈಲೇಜ್: 24.8/23.9 kmpl

02. ಹೋಂಡಾ ಸಿಟಿ

02. ಹೋಂಡಾ ಸಿಟಿ

ಜಪಾನ್ ಕಾರು ಸಂಸ್ಥೆ ಹೋಂಡಾ ಮಗದೊಮ್ಮೆ ಸಿಟಿ ಕಾರಿನ ಮೂಖಾಂತರ ದೇಶದಲ್ಲಿ ಅತ್ಯುತ್ತಮ ಮಾರಾಟವನ್ನು ದಾಖಲಿಸಿದೆ. ಅತ್ಯುತ್ತಮ ಎಂಜಿನ್, ಮೈಲೇಜ್, ನಿರ್ವಹಣೆಯು ಹೋಂಡಾ ಸಿಟಿ ಯಶಸ್ಸಿಗೆ ನೆರವಾಗಿದೆ. ಹೋಂಡಾ ಸಿಟಿ ಡೀಸೆಲ್ ಕಾರಿನ ಎಕ್ಸ್ ಶೋ ರೂಂ ಬೆಲೆ 9.28 ಲಕ್ಷ ರು.ಗಳಿಂದ ಆರಂಭವಾಗುತ್ತದೆ.

ಹೋಂಡಾ ಸಿಟಿ

ಹೋಂಡಾ ಸಿಟಿ

ಎಂಜಿನ್: 1498 ಸಿಸಿ, 99 ಅಶ್ವಶಕ್ತಿ, 200 ಎನ್‌ಎಂ ತಿರುಗುಬಲ

ಗೇರ್ ಬಾಕ್ಸ್: 6 ಸ್ಪೀಡ್ ಮ್ಯಾನುವಲ್

ಮೈಲೇಜ್: 26 kmpl

01. ಮಾರುತಿ ಸುಜುಕಿ ಸಿಯಾಝ್ ಹೈಬ್ರಿಡ್

01. ಮಾರುತಿ ಸುಜುಕಿ ಸಿಯಾಝ್ ಹೈಬ್ರಿಡ್

ಸುಜುಕಿ ಸ್ಮಾರ್ಟ್ ಹೈಬ್ರಿಡ್ ವೆಹಿಕಲ್ ತಂತ್ರಜ್ಞಾನವನ್ನು ಹೊಂದಿರುವ ಮಾರುತಿ ಸಿಯಾಝ್ ಸದ್ಯ ಮಾರುಕಟ್ಟೆಯಲ್ಲಿರುವ ದೇಶದ ಅತಿ ಹೆಚ್ಚು ಮೈಲೇಜ್ ನೀಡುವ ಕಾರಾಗಿದೆ. ಮಧ್ಯಮ ಗಾತ್ರದ ಸೆಡಾನ್ ವಿಭಾಗದಲ್ಲಿ ತನ್ನೆಲ್ಲ ಸ್ಪರ್ಧಿಗಳನ್ನು ಹಿಂದಿಕ್ಕಿರುವ ಸಿಯಾಝ್ ಎಕ್ಸ್ ಶೋ ರೂಂ ಬೆಲೆ 8.23 ಲಕ್ಷ ರು.ಗಳಾಗಿದೆ. ಅಲ್ಲದೆ ಟಾಪ್ ಝಡ್ ಡಿಐ ಎಸ್ ಎಚ್ ವಿಎಸ್ ಆರ್ ಎಸ್ ಮಾದರಿಯು ಏರ್ ಬ್ಯಾಗ್, ಎಬಿಎಸ್, ಇಬಿಡಿ ಮುಂತಾದ ಭದ್ರತಾ ವೈಶಿಷ್ಟ್ಯಗಳನ್ನು ಪಡೆದಿದೆ.

ಮಾರುತಿ ಸುಜುಕಿ ಸಿಯಾಝ್ ಹೈಬ್ರಿಡ್

ಮಾರುತಿ ಸುಜುಕಿ ಸಿಯಾಝ್ ಹೈಬ್ರಿಡ್

ಎಂಜಿನ್: 1248 ಸಿಸಿ, 89 ಅಶ್ವಶಕ್ತಿ, 200 ಎನ್‌ಎಂ ತಿರುಗುಬಲ

ಗೇರ್ ಬಾಕ್ಸ್: 5 ಸ್ಪೀಡ್ ಮ್ಯಾನುವಲ್

ಮೈಲೇಜ್: 28.09 kmpl

10 ಲಕ್ಷ ಬಜೆಟ್‌ನೊಳಗೆ ಐದು ಅತ್ಯುತ್ತಮ ಡೀಸೆಲ್ ಕಾರುಗಳು

ಈಗ ನಿಮ್ಮ ನೆಚ್ಚಿನ ಕಾರಿನ ಬಗ್ಗೆ ಅಭಿಪ್ರಾಯವನ್ನು ಹಂಚಿಕೊಳ್ಳಿರಿ.

ಇವನ್ನೂ ಓದಿ

ನಿಮಗೆ ಇಷ್ಟವಾದಿತೇ ಇನ್ನೋವಾ ಕ್ರೈಸ್ಟಾ; ಸಮಗ್ರ ಚಾಲನಾ ವಿಮರ್ಶೆ ಓದಿ

ಇವನ್ನೂ ಓದಿ

ದಟ್ಸನ್ ರೆಡಿ ಗೊ; ನಿಮ್ಮ ಅಂತಸ್ತಿಗೆ ತಕ್ಕ ಕಾರು ಹೌದೇ?

Most Read Articles

Kannada
Read more on ಡೀಸೆಲ್ diesel
English summary
Best Diesel Sedans To Buy In India Under Rs. 10 Lakh
Story first published: Wednesday, May 4, 2016, 13:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X