ಭಾರತಕ್ಕೆ ಕಾಲಿಟ್ಟ ಷೆವರ್ಲೆ ಎಸ್ಸೆನ್ಷಿಯಾ ಕಾಂಪಾಕ್ಟ್ ಸೆಡಾನ್ ಕಾರು

By Nagaraja

ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಕಾಂಪಾಕ್ಟ್ ಸೆಡಾನ್ ಕಾರುಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಮನಗಂಡಿರುವ ಅಮೆರಿಕ ಮೂಲದ ದೈತ್ಯ ವಾಹನ ಸಂಸ್ಥೆ ಜನರಲ್ ಮೋಟಾರ್ಸ್ ಭಾಗವಾಗಿರುವ ಷೆವರ್ಲೆ, ಅತಿ ನೂತನ ಎಸ್ಸೆನ್ಷಿಯಾ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಇದರಂತೆ ಪುಣೆಯ ರಸ್ತೆಗಳಲ್ಲಿ ಟೆಸ್ಟಿಂಗ್ ಪ್ರಕ್ರಿಯೆ ಭರದಿಂದ ಸಾಗುತ್ತಿರುವ ವೇಳೆಯಲ್ಲಿ ರಹಸ್ಯ ಚಿತ್ರಗಳನ್ನು ಸೆರೆ ಹಿಡಿಯಲಾಗಿದೆ.

ಭಾರತಕ್ಕೆ ಕಾಲಿಟ್ಟ ಷೆವರ್ಲೆ ಎಸ್ಸೆನ್ಷಿಯಾ ಕಾಂಪಾಕ್ಟ್ ಸೆಡಾನ್ ಕಾರು

ಇದೇ ಮೊದಲ ಬಾರಿಗೆ ಭಾರತೀಯ ರಸ್ತೆಗಳಲ್ಲಿ ಷೆವರ್ಲೆ ಎಸ್ಸೆನ್ಷಿಯಾ ಪ್ರತ್ಯಕ್ಷವಾಗುತ್ತಿದೆ. ಇನ್ನೊಂದೆಡೆ ಮುಂದಿನ ತಲೆಮಾರಿನ ಷೆವರ್ಲೆ ಬೀಟ್ ಸಹ ಹಲವಾರು ಬಾರಿ ಕ್ಯಾಮೆರಾದ ರಹಸ್ಯ ಕಣ್ಣುಗಳಿಗೆ ಸೆರೆ ಸಕ್ಕಿವೆ.

ಭಾರತಕ್ಕೆ ಕಾಲಿಟ್ಟ ಷೆವರ್ಲೆ ಎಸ್ಸೆನ್ಷಿಯಾ ಕಾಂಪಾಕ್ಟ್ ಸೆಡಾನ್ ಕಾರು

ಷೆವರ್ಲೆ ಬೀಟ್ ತಳಹದಿಯಲ್ಲಿ ನಿರ್ಮಾಣಗೊಂಡಿರುವ ಎಸ್ಸೆನ್ಷಿಯಾ ಮುಂದಿನ ವರ್ಷದಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿದೆ.

ಭಾರತಕ್ಕೆ ಕಾಲಿಟ್ಟ ಷೆವರ್ಲೆ ಎಸ್ಸೆನ್ಷಿಯಾ ಕಾಂಪಾಕ್ಟ್ ಸೆಡಾನ್ ಕಾರು

ಷೆವರ್ಲೆ ಬೀಟ್ 2010ರಿಂದಲೇ ಮಾರಾಟದಲ್ಲಿದ್ದು, ಹೊಸ ತಲೆಮಾರಿನ ಆವೃತ್ತಿಯ ತಳಹದಿಯಲ್ಲಿ ಎಸ್ಸೆನ್ಷಿಯಾ ಬಿಡುಗಡೆಯಾಗಲಿದೆ.

ಭಾರತಕ್ಕೆ ಕಾಲಿಟ್ಟ ಷೆವರ್ಲೆ ಎಸ್ಸೆನ್ಷಿಯಾ ಕಾಂಪಾಕ್ಟ್ ಸೆಡಾನ್ ಕಾರು

ತಾಂತ್ರಿಕತೆ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲವಾದರೂ ಶೈಲಿಯಲ್ಲಿ ಯಾವುದೇ ರಾಜಿಗೂ ತಯಾರಾಗದ ಷೆವರ್ಲೆ, ಐದು ಮಂದಿ ಪ್ರಯಾಣಿಕರಿಗೆ ಆರಾಮದಾಯಕ ಸಂಚಾರಕ್ಕೆ ಆದ್ಯತೆ ಕೊಡುತ್ತಿದೆ.

ಭಾರತಕ್ಕೆ ಕಾಲಿಟ್ಟ ಷೆವರ್ಲೆ ಎಸ್ಸೆನ್ಷಿಯಾ ಕಾಂಪಾಕ್ಟ್ ಸೆಡಾನ್ ಕಾರು

ಕಾರಿನೊಳಗೆ ಮೋಟಾರ್ ಸೈಕಲ್ ಗಳಿಂದ ಪ್ರೇರಣೆ ಪಡೆದ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇವೆಯನ್ನು ಕೊಡಲಾಗಿದೆ. ಇದು ಅನಲಾಗ್ ಸ್ಪೀಡೋಮೀಟರ್, ವೇಗಮಾಪಕಕ್ಕಾಗಿ ಎಲ್ ಸಿಡಿ/ಎಲ್ ಇಡಿ ಪರದೆ, ಟ್ರಿಪ್ ಮೀಟರ್, ಓಡೋಮೀಟರ್ ಮತ್ತು ಇತರೆ ಚಾಲಕ ಮಾಹಿತಿ ವ್ಯವಸ್ಥೆಗಳನ್ನು ಒಳಗೊಂಡಿರಲಿದೆ.

ಭಾರತಕ್ಕೆ ಕಾಲಿಟ್ಟ ಷೆವರ್ಲೆ ಎಸ್ಸೆನ್ಷಿಯಾ ಕಾಂಪಾಕ್ಟ್ ಸೆಡಾನ್ ಕಾರು

ಷೆವರ್ಲೆ ಮೈ ಲಿಂಕ್ 2 ಇನ್ಪೋಟೈನ್ಮೆಂಟ್ ಸಿಸ್ಟಂ ಜೊತೆ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ತಂತ್ರಗಾರಿಕೆಗಳನ್ನು ನೂತನ ಷೆವರ್ಲೆ ಎಸ್ಸೆನ್ಷಿಯಾ ಗಿಟ್ಟಿಸಿಕೊಳ್ಳಲಿದೆ.

ಭಾರತಕ್ಕೆ ಕಾಲಿಟ್ಟ ಷೆವರ್ಲೆ ಎಸ್ಸೆನ್ಷಿಯಾ ಕಾಂಪಾಕ್ಟ್ ಸೆಡಾನ್ ಕಾರು

ಸುರಕ್ಷತೆಯತ್ತ ಗಮನ ಹಾಯಿಸಿದಾದ ಡ್ಯುಯಲ್ ಏರ್ ಬ್ಯಾಗ್, ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ, ರಿವರ್ಸ್ ಕ್ಯಾಮೆರಾ ಇತ್ಯಾದಿ ವೈಶಿಷ್ಟ್ಯಗಳು ಕಂಡುಬರಲಿದೆ.

ಭಾರತಕ್ಕೆ ಕಾಲಿಟ್ಟ ಷೆವರ್ಲೆ ಎಸ್ಸೆನ್ಷಿಯಾ ಕಾಂಪಾಕ್ಟ್ ಸೆಡಾನ್ ಕಾರು

ಎಂಜಿನ್ ಬಗ್ಗೆ ಚರ್ಚಿಸುವುದಾದ್ದಲ್ಲಿ 1.2 ಲೀಟರ್ ಪೆಟ್ರೋಲ್ (77 ಅಶ್ವಶಕ್ತಿ, 107 ಎನ್ ಎಂ ತಿರುಗುಬಲ) ಹಾಗೂ 1.0 ಲೀಟರ್ ಡೀಸೆಲ್ ಎಂಜಿನ್ (56 ಅಶ್ವಶಕ್ತಿ, 142.5 ಎನ್ ಎಂ ತಿರುಗುಬಲ) ಜೋಡಣೆಯಾಗುವ ಸಾಧ್ಯತೆಯಿದೆ.

ಭಾರತಕ್ಕೆ ಕಾಲಿಟ್ಟ ಷೆವರ್ಲೆ ಎಸ್ಸೆನ್ಷಿಯಾ ಕಾಂಪಾಕ್ಟ್ ಸೆಡಾನ್ ಕಾರು

ಇವೆರಡು ಎಂಜಿನ್ ಗಳು ಐದು ಸ್ಪೀಡ್ ಗೇರ್ ಬಾಕ್ಸ್ ಪಡೆಯಲಿದೆ. ಇನ್ನು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಬಗ್ಗೆ ಯಾವುದೇ ಮಾಹಿತಿಗಳಿಲ್ಲ.

ಭಾರತಕ್ಕೆ ಕಾಲಿಟ್ಟ ಷೆವರ್ಲೆ ಎಸ್ಸೆನ್ಷಿಯಾ ಕಾಂಪಾಕ್ಟ್ ಸೆಡಾನ್ ಕಾರು

ಸ್ಪರ್ಧಾತ್ಮಕ ಬೆಲೆ ಕಾಪಾಡುವ ನಿಟ್ಟಿನಲ್ಲಿ ಭಾರತದಲ್ಲೇ ಸ್ಥಳೀಯವಾಗಿ ನಿರ್ಮಾಣ ಕಾರ್ಯಕ್ಕೆ ಷೆವರ್ಲೆ ಉತ್ತೇಜನ ನೀಡಲಿದೆ.

ಪ್ರತಿಸ್ಪರ್ಧಿಗಳು

ಪ್ರತಿಸ್ಪರ್ಧಿಗಳು

ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್,

ಹ್ಯುಂಡೈ ಎಕ್ಸ್ ಸೆಂಟ್,

ಹೋಂಡಾ ಅಮೇಜ್,

ಫೋರ್ಡ್ ಫಿಗೊ ಆಸ್ಪೈರ್,

ಟಾಟಾ ಜೆಸ್ಟ್,

ಫೋಕ್ಸ್ ವ್ಯಾಗನ್ ಎಮಿಯೊ

Most Read Articles

Kannada
English summary
Chevrolet Essentia Compact Sedan Spied Testing In India
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X