2017 ವರ್ಷಾರಂಭದಲ್ಲಿ ಹೊಸ ಷೆವರ್ಲೆ ಟ್ರೈಲ್ ಬ್ಲೇಜರ್ ಭಾರತಕ್ಕೆ

Written By:

ಅಮೆರಿಕದ ಪ್ರತಿಷ್ಠಿತ ವಾಹನ ಸಂಸ್ಥೆ ಜನರಲ್ ಮೋಟಾರ್ಸ್, ತನ್ನ ಜನಪ್ರಿಯ ಟ್ರೈಲ್ ಬ್ಲೇಜರ್ ಕ್ರೀಡಾ ಬಳಕೆಯ ವಾಹನದ (ಎಸ್ ಯುವಿ) ಹೊಸ ಅವತಾರವನ್ನು 2017 ವರ್ಷಾರಂಭದಲ್ಲಿ ಬಿಡುಗಡೆ ಮಾಡಲಿದೆ.

2016 ಮಾರ್ಚ್ ನಲ್ಲಿ ನಡೆದ ಬ್ಯಾಂಕಾಕ್ ಮೋಟಾರು ಶೋದಲ್ಲಿ ಪ್ರದರ್ಶನ ಕಂಡಿರುವ ಷೆವರ್ಲೆ ಟ್ರೈಲ್ ಬ್ಲೇಜರ್ ಪರಿಷ್ಕೃತ ಕಾರು ಸ್ವಲ್ಪ ತಡವಾಗಿಯಾದರೂ ದೇಶದ ಮಾರುಕಟ್ಟೆಯನ್ನು ತಲುಪುತ್ತಿದೆ.

ಆಕ್ರಮಣಕಾರಿ ಹಾಗೂ ಪ್ರಭಾವಶಾಲಿ ವಿನ್ಯಾಸ ನೀತಿಯು 2017 ಷೆವರ್ಲೆ ಟ್ರೈಲ್ ಬ್ಲೇಜರ್ ಕಾರಿಗೆ ವರದಾನವಾಗುವ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ.

ಮುಂಭಾಗದಲ್ಲಿ ಪರಿಷ್ಕೃತ ಗ್ರಿಲ್, ಹೆಡ್ ಲ್ಯಾಂಪ್ ಜೊತೆ ಡೇಟೈಮ್ ರನ್ನಿಂಗ್ ಎಲ್ ಇಡಿ ಲೈಟ್ಸ್, ಫ್ರಂಟ್ ಬಂಪರ್ ಜೊತೆಗೆ ದೊಡ್ಡದಾದ ಏರ್ ವೆಂಟ್ಸ್, ಸ್ಟ್ರೀಮ್ ಲೈನ್ಡ್ ಬೊನೆಟ್ ಮತ್ತು ದೊಡ್ಡದಾದ ಫಾಗ್ ಲ್ಯಾಂಪ್ ವ್ಯವಸ್ಥೆಯಿರಲಿದೆ.

ಪರಿಷ್ಕೃತ ಟ್ರೈಲ್ ಬ್ಲೇಜರ್ ಕಾರಿನಲ್ಲಿ ಕ್ರೋಮ್ ಸ್ಪರ್ಶದ ಜೊತೆಗೆ ಹೊಸತಾದ ಅಲಾಯ್ ಚಕ್ರಗಳು ಜೋಡಣೆಯಾಗಲಿದೆ. ಇನ್ನು ಕಾರಿನ ಒಟ್ಟಾರೆ ಉದ್ದ ಒಂಬತ್ತು ಎಂಎಂಗಳಷ್ಟು ವರ್ಧಿಸಿದೆ.

ಕಾರಿನೊಳಗೆ ಹೊಸ ಹೊಸ ವೈಶಿಷ್ಟ್ಯಗಳೊಂದಿಗೆ ತುಂಬಿ ತುಳುಕಲಿದೆ. ಹೊಸತಾದ ಡ್ಯಾಶ್ ಬೋರ್ಡ್, ಮೈ ಲಿಂಕ್ ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ ಜೊತೆ ಆಂಡ್ರಾಯ್ಡ್ ಆಟೋ ಹಾಗೂ ಆಪಲ್ ಕಾರ್ ಪ್ಲೇ ವ್ಯವಸ್ಥೆಗಳಿರಲಿದೆ.

ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಏರು ಏರ್ ಬ್ಯಾಗ್, ಹಿಲ್ ಸ್ಟ್ಯಾರ್ಟ್ ಅಸಿಸ್ಟ್, ಹಿಲ್ ಡಿಸೆಂಟ್ ಕಂಟ್ರೋಲ್, ಬ್ಲೈಂಡ್ ವಾರ್ನಿಂಗ್ ಅಸಿಸ್ಟ್, ಢಿಕ್ಕಿ ಎಚ್ಚರಿಕೆ, ಲೇನ್ ಬದಲಾವಣೆ ಮಾರ್ಗದರ್ಶಿ, ರಿವರ್ಸ್ ಕ್ಯಾಮೆರಾ ಹಾಗೂ ಕ್ರಾಸ್ ಟ್ರಾಫಿಕ್ ಅಲರ್ಟ್ ವೈಶಿಷ್ಟ್ಯಗಳಿರಲಿದೆ.

ನೂತನ 2017 ಷೆವರ್ಲೆ ಟ್ರೈಲ್ ಬ್ಲೇಜರ್ ಕಾರು 2.8 ಲೀಟರ್ 4 ಸಿಲಿಂಡರ್ ಡ್ಯುರಾಮ್ಯಾಕ್ಸ್ ಡೀಸೆಲ್ ಎಂಜಿನ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 500 ಎನ್ ಎಂ ತಿರುಗುಬಲದಲ್ಲಿ 200 ಅಶ್ವಶಕ್ತಿ ಉತ್ಪಾದಿಸಲಿದೆ. ಹಾಗೆಯೇ ಆರು ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

ಸದ್ಯ ಮಾರಾಟದಲ್ಲಿರುವ ಟ್ರೈಲ್ ಬ್ಲೇಜರ್ ಕಾರಿನಲ್ಲಿ 4x4 ಚಾಲನಾ ವ್ಯವಸ್ಥೆ ಲಭ್ಯವಿಲ್ಲ. ಈ ಕೊರತೆಯನ್ನು 2017 ಆವೃತ್ತಿಯು ನೀಗಿಸಲಿದ್ದು, ಫೋರ್ ವೀಲ್ ಡ್ರೈವ್ ಚಾಲನಾ ವ್ಯವಸ್ಥೆಯನ್ನು ಪಡೆಯಲಿದೆ.

ಭಾರತದಲ್ಲಿ ಟ್ರೈಲ್ ಬ್ಲೇಜರ್ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 23.95 ಲಕ್ಷ ರು.ಗಳಷ್ಟು ದುಬಾರಿಯೆನಿಸುತ್ತಿದ್ದು, ನೂತನ ಆವೃತ್ತಿಯು ಇದೇ ಬೆಲೆ ಪರಿಧಿಯನ್ನು ಕಾಪಾಡಿಕೊಳ್ಳುವ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ.


 

Story first published: Saturday, December 24, 2016, 12:14 [IST]
English summary
Chevrolet Trailblazer Facelift To Be Launched In India By Early 2017
Please Wait while comments are loading...

Latest Photos