ಫಿಯೆಟ್ ಲಿನಿಯಾ 125 ಎಸ್ ಭಾರತ ಪ್ರವೇಶ

By Nagaraja

ಇಟಲಿಯ ಪ್ರತಿಷ್ಠಿತ ಸಂಸ್ಥೆಯಾಗಿರುವ ಫಿಯೆಟ್, ಭಾರತದಲ್ಲಿ ಅತಿ ನೂತನ ಲಿನಿಯಾ 125 ಎಸ್ ಕಾರನ್ನು ಬಿಡುಗಡೆಗೊಳಿಸಿದೆ. ಇದರ ದೆಹಲಿ ಎಕ್ಸ್ ಶೋ ರೂಂ ಬೆಲೆ 7.82 ಲಕ್ಷ ರು.ಗಳಾಗಿರಲಿದೆ.

ಲಿನಿಯಾ ಸೆಡಾನ್ ಕಾರಿನ ಶಕ್ತಿಶಾಲಿ ಆವೃತ್ತಿಯಾಗಿರುವ ಫಿಯೆಟ್ ಲಿನಿಯಾ 125 ಎಸ್, 2016 ಆಟೋ ಎಕ್ಸ್ ಪೋದಲ್ಲಿ ಮೊದಲ ಬಾರಿಗೆ ಪ್ರದರ್ಶನ ಕಂಡಿತ್ತು. ತದಾ ಬಳಿಕವೀಗ ಬಿಡುಗಡೆ ಭಾಗ್ಯ ಕಂಡಿದೆ.

ಫಿಯೆಟ್ ಲಿನಿಯಾ 125 ಎಸ್ ಭಾರತ ಪ್ರವೇಶ

ನೂತನ ಲಿನಿಯಾ 125 ಎಸ್ ಮಾದರಿಯು ಲಿನಿಯಾ ಟಿ-ಜೆಟ್ ಮಾದರಿಯಲ್ಲಿರುವುದಕ್ಕೆ ಸಮಾನವಾದ 1.4 ಲೀಟ್ ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದೆ. ಹಾಗಿದ್ದರೂ 11 ಬಿಎಚ್ ಪಿ ಹೆಚ್ಚು ಉತ್ಪಾದಿಸಲಿದ್ದು, ಒಟ್ಟು 210 ಎನ್ ಎಂ ತಿರುಗುಬಲದಲ್ಲಿ 125 ಅಶ್ವಶಕ್ತಿ ನೀಡಲಿದೆ. ಹಾಗೆಯೇ 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಇರುತ್ತದೆ.

ಫಿಯೆಟ್ ಲಿನಿಯಾ 125 ಎಸ್ ಭಾರತ ಪ್ರವೇಶ

ಐದು ಇಂಚುಗಳ ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ ಜೊತೆ ನೇವಿಗೇಷನ್, ರಿಯರ್ ವ್ಯೂ ಕ್ಯಾಮೆರಾ, ಆಂಬಿಯಂಟ್ ಲೈಟಿಂಗ್, ಕ್ರೂಸ್ ಕಂಟ್ರೋಲ್, 16 ಇಂಚುಗಳ ಅಲಾಯ್ ವೀಲ್, ಡ್ಯುಯಲ್ ಸ್ಟೇಜ್ ಏರ್ ಬ್ಯಾಗ್, ರಿಯರ್ ಡಿಸ್ಕ್ ಬ್ರೇಕ್ ಇತ್ಯಾದಿ ವೈಶಿಷ್ಟ್ಯಗಳಿರಲಿದೆ.

ಫಿಯೆಟ್ ಲಿನಿಯಾ 125 ಎಸ್ ಭಾರತ ಪ್ರವೇಶ

ಇದೇ ವೇಳೆಯಲ್ಲಿ ಪುಂಟೊ ಇವೊ ಮತ್ತು ಅವೆಂಚ್ಯುರಾ ಮಾದರಿಗಳನ್ನು ಪರಿಷ್ಕೃತಗೊಳಿಸಲಾಗಿದೆ. ಪುಂಟೊ ಇವೊ ಪವರ್ ಟೆಕ್ ಆವೃತ್ತಿಯು 93 ಅಶ್ವಶಕ್ತಿಯ ಡೀಸೆಲ್ ಎಂಜಿನ್ ಪಡೆಯಲಿದೆ. ಇವೆರಡಲ್ಲೂ 5 ಇಂಚುಗಳ ಮಾಹಿತಿ ಮನರಂಜನಾ ವ್ಯವಸ್ಥೆ ಸಿಗಲಿದೆ.

ಫಿಯೆಟ್ ಲಿನಿಯಾ 125 ಎಸ್ ಭಾರತ ಪ್ರವೇಶ

ಫಿಯೆಟ್ ಪುಂಟೊ ಇವೊ ಮತ್ತು ಅವೆಂಚ್ಯುರಾ ಪವರ್ ಟೆಕ್ ಆವೃತ್ತಿಗಳು ಅನುಕ್ರಮವಾಗಿ 6.81 ಹಾಗೂ 7.87 ಲಕ್ಷ ರು.ಗಳಷ್ಟು (ಎಕ್ಸ್ ಶೋ ರೋ ದೆಹಲಿ) ದುಬಾರಿಯೆನಿಸಲಿದೆ.

ಫಿಯೆಟ್ ಲಿನಿಯಾ 125 ಎಸ್ ಭಾರತ ಪ್ರವೇಶ

ಇವೆಲ್ಲದರ ಹೊರತಾಗಿ ಪ್ರಸಕ್ತ ಸಾಲಿನಲ್ಲೇ ಜೀಪ್ ಬ್ರಾಂಡ್ ಭಾರತಕ್ಕೆ ಪರಿಚಯಿಸಲು ಫಿಯೆಟ್ ತಯಾರಾಗುತ್ತಿದೆ. ಜೀಪ್ ವ್ರ್ಯಾಂಗ್ಲರ್, ಚೆರೊಕೀ ಮತ್ತು ಚೆರೋಕಿ ಎಸ್ ಆರ್ ಟಿ ಕ್ರೀಡಾ ಬಳಕೆಯ ವಾಹನಗಳು ಒಂದರ ಬಳಿಕ ಒಂದರಂತೆ ದೇಶಕ್ಕೆ ತಲುಪಲಿದೆ.

ಫಿಯೆಟ್ ಲಿನಿಯಾ 125 ಎಸ್ ಭಾರತ ಪ್ರವೇಶ

ಅಂದ ಹಾಗೆ ನೂತನ ಫಿಯೆಟ್ ಲಿನಿಯಾ 125 ಎಸ್ ಮಾದರಿಯು ಹ್ಯುಂಡೈ ವೆರ್ನಾ ಮತ್ತು ಹೋಂಡಾ ಸಿಟಿ ಮಾದರಿಗಳಿಗೆ ಪೈಪೋಟಿಯನ್ನು ಒಡ್ಡಲಿದೆ.

Most Read Articles

Kannada
Read more on ಫಿಯೆಟ್ fiat
English summary
Fiat Linea 125 S Launched in India, Prices Start At Rs. 7.82 Lakh
Story first published: Friday, July 8, 2016, 11:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X