ಬೆಂಗಳೂರಿಗೆ ಕಾಲಿರಿಸಿದ ಐಕಾನಿಕ್ ಫೋರ್ಡ್ ಮಸ್ಟಾಂಗ್

Written By:

ಐಕಾನಿಕ್ 2016 ಫೋರ್ಡ್ ಮಸ್ಟಾಂಗ್ ಕಾರು ಉದ್ಯಾನ ನಗರಿ ಬೆಂಗಳೂರಿಗೆ ಕಾಲಿರಿಸಿದೆ. ವಿಶ್ವದೆಲ್ಲೆಡೆ ಅತ್ಯಂತ ಹೆಚ್ಚು ಬೇಡಿಕೆ ಹಾಗೂ ಪ್ರತಿಷ್ಠೆಯನ್ನು ಗಿಟ್ಟಿಸಿಕೊಂಡಿರುವ ಮಸ್ಟಾಂಗ್ ನಮ್ಮ ಬೆಂಗಳೂರಿನಲ್ಲೂ ಮೋಡಿ ಮಾಡಲಿದೆ.

ನೂತನ 2016 ಫೋರ್ಡ್ ಮಸ್ಟಾಂಗ್ ಬೆಂಗಳೂರು ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 66.36 ಲಕ್ಷ ರುಪಾಯಿಗಳಷ್ಟು ದುಬಾರಿಯೆನಿಸಲಿದೆ. ಇದರೊಂದಿಗೆ ಬೆಂಗಳೂರು, ಫೋರ್ಡ್ ಮಸ್ಟಾಂಗ್ ಲಭ್ಯವಾಗಲಿರುವ ಒಂಬತ್ತನೇ ನಗರವಾಗಿರಲಿದೆ.

ಅಮೆರಿಕ ಮೂಲದ ಐಕಾನಿಕ್ ಮಸ್ಟಾಂಗ್ ಕಾರು ಮಾರುಕಟ್ಟೆಗೆ ಎಂಟ್ರಿ ಕೊಟ್ಟಿರುವ 52 ವರ್ಷಗಳ ಬಳಿಕ ಭಾರತಕ್ಕೆ ಪ್ರವೇಶ ನೀಡುತ್ತಿದೆ. ಇದು ವಾಹನ ಪ್ರೇಮಿಗಳಲ್ಲಿ ನಿಜಕ್ಕೂ ರೋಮಾಂಚನವನ್ನುಂಟು ಮಾಡಿದೆ.

ಎಂಜಿನ್ ತಾಂತ್ರಿಕತೆ

5.0 ಲೀಟರ್ ವಿ8,
395.5 ಅಶ್ವಶಕ್ತಿ,
515 ಎನ್ ಎಂ ತಿರುಗುಬಲ,
6 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್

ವೇಗವರ್ಧನೆ

4.4 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ.
ಗರಿಷ್ಠ ವೇಗ ಗಂಟೆಗೆ 250 ಕೀ.ಮೀ.

ಆಯಾಮ (ಎಂಎಂ)

ಉದ್ದ: 4784
ಅಗಲ: 2080
ಎತ್ತರ: 1391
ಚಕ್ರಾಂತರ: 2720
ಗ್ರೌಂಡ್ ಕ್ಲಿಯರನ್ಸ್: 131

ನಾಲ್ಕು ಚಾಲನಾ ವಿಧಗಳು

ನಾರ್ಮಲ್, ವೆಟ್/ಸ್ನೊ, ಸ್ಪೋರ್ಟ್ ಮತ್ತು ಟ್ರ್ಯಾಕ್.

ಇಂಧನ ಟ್ಯಾಂಕ್ ಸಾಮರ್ಥ್ಯ 60.9 ಲೀಟರ್

 

ಅದೇ ಹೊತ್ತಿಗೆ ಅತಿ ನೂತನ ಎಲೆಕ್ಟ್ರಾನಿಕ್ ಲೈನ್ ಲಾಕ್ ತಂತ್ರಗಾರಿಕೆಯನ್ನು ನೂತನ ಫೋರ್ಡ್ ಮಸ್ಟಾಂಗ್ ಕಾರಿನಲ್ಲಿ ನೀಡಲಾಗುತ್ತದೆ.

ಶಕ್ತಿಶಾಲಿ ಫ್ರಂಟ್ ಬಂಪರ್, ಮಸ್ಟಾಂಗ್ ಲಾಂಛನ, ಎಲ್ ಇಡಿ ಹೆಡ್ ಲ್ಯಾಂಪ್, 19 ಇಂಚುಗಳ ಅಲಾಯ್ ಚಕ್ರಗಳು, ಎಲ್ ಇಡಿ ಟೈಲ್ ಲೈಟ್ ಹಾಗೂ ಜಿಟಿ ಲಾಂಛನವು ಇದರಲ್ಲಿರಲಿದೆ.

ಕಾರಿನೊಳಗೆ ಒಂಬತ್ತು ಸ್ಪೀಕರುಗಳನ್ನು ಒಳಗೊಂಡಿರುವ ದೊಡ್ಡದಾದ ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್, ಲೆಥರ್ ಹೋದಿಕೆ, ಅಡಾಪ್ಟಿಕ್ ಕ್ರೂಸ್ ಕಂಟ್ರೋಲ್ ಇತ್ಯಾದಿ ಸೌಲಭ್ಯಗಳಿರಲಿದೆ.

ಸುರಕ್ಷತೆಯನ್ನು ಗಮನಿಸಿದಾಗ ಎಂಟು ಏರ್ ಬ್ಯಾಗ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ, ಆಟೋಮ್ಯಾಟಿಕ್ ಹೆಡ್ ಲ್ಯಾಂಪ್, ವೈಪರ್, ಆಟೋ ಡಿಮ್ಮಿಂಗ್ ರಿಯರ್ ವ್ಯೂ ಮಿರರ್ ಮತ್ತು ಪುಶ್ ಬಟನ್ ಸ್ಟ್ಯಾರ್ಟ್ ತಂತ್ರಜ್ಞಾನವಿರಲಿದೆ.

ಆರು ಆಕರ್ಷಕ ಬಣ್ಣಗಳು

ಪರಿಪೂರ್ಣ ಕಪ್ಪು ವರ್ಣ,
ಇಂಗೊಟ್ ಸಿಲ್ವರ್,
ಓಕ್ಸ್ ಫರ್ಡ್ ವೈಟ್,
ಟ್ರಿಪಲ್ ಯಲ್ಲೊ ಟ್ರೈಕೋಟ್,
ಮ್ಯಾಗ್ನೆಟಿಕ್ ಮತ್ತು
ರೇಸ್ ರೆಡ್.

Read more on ಫೋರ್ಡ್ ford
English summary
Ford Mustang Launched In Bangalore; Priced At Rs 66.36 Lakh
Please Wait while comments are loading...

Latest Photos