ಬದಲಾಗುತ್ತಿದೆ ನಿಮ್ಮ ಅಚ್ಚುಮೆಚ್ಚಿನ ಷೆವರ್ಲೆ ತವೆರಾ

By Nagaraja

ಅಮೆರಿಕ ಮೂಲದ ದೈತ್ಯ ವಾಹನ ಸಂಸ್ಥೆ ಜನರಲ್ ಮೋಟಾರ್ಸ್ ಭಾರತಕ್ಕೆ ಇದುವರೆಗೆ ಪರಿಚಯಿಸಿರುವ ಅತ್ಯಂತ ಜನಪ್ರಿಯ ಹಾಗೂ ಯಶಸ್ವಿ ಮಾದರಿಗಳಲ್ಲಿ ಷೆವರ್ಲೆ ತವೆರಾ ಒಂದಾಗಿದೆ. ಕಳೆದ ಹಲವಾರು ವರ್ಷಗಳಿಂದ ಬಹು ಬಳಕೆಯ ವಾಹನ (ಎಂಪಿವಿ) ವಿಭಾಗದಲ್ಲಿ ಷೆವರ್ಲೆ ತವೆರಾ ಅತಿ ಹೆಚ್ಚು ಆಕರ್ಷಣೆಗೆ ಪಾತ್ರವಾಗಿದೆ.

ನೂತನ ತವೆರಾ ಆಧುನಿಕತೆಗೆ ತಕ್ಕಂತೆ ತಾಜಾತನವನ್ನು ಪಡೆಯಲಿದೆ. ಇದರಲ್ಲಿ ಬಿಎಸ್ IV ಎಂಜಿನ್ ಆಯ್ಕೆಯು ಪ್ರಮುಖವಾಗಿರಲಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಷೆವರ್ಲೆ ತವೆರಾ ಬಿಎಸ್ III ಮಾದರಿ ಮಾರಾಟವನ್ನು ಸ್ಥಗಿತಗೊಳಿಸಿ ಹೆಚ್ಚು ವೈಶಿಷ್ಟ್ಯಗಳೊಂದಿಗೆ ಹೊಸ ತವರಾ ಪರಿಚಯಿಸುವುದು ಸಂಸ್ಥೆಯ ಇರಾದೆಯಾಗಿದೆ.

ಬದಲಾಗುತ್ತಿದೆ ನಿಮ್ಮ ಅಚ್ಚುಮೆಚ್ಚಿನ ಷೆವರ್ಲೆ ತವೆರಾ

ಕೇಂದ್ರ ಸರಕಾರದ ಎಲ್ಲ ಮಾಲಿನ್ಯ ಮಾನದಂಡಗಳನ್ನು ಷೆವರ್ಲೆ ತವೆರಾ ಬಿಎಸ್ IV ಕಾಯ್ದುಕೊಳ್ಳಲಿದೆ. ಅಲ್ಲದೆ ಕಾರಿನ ಹೊರಮೈ ಮತ್ತು ಒಳಮೈಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಕಂಡುಬರಲಿದೆ.

ಬದಲಾಗುತ್ತಿದೆ ನಿಮ್ಮ ಅಚ್ಚುಮೆಚ್ಚಿನ ಷೆವರ್ಲೆ ತವೆರಾ

ಗುಜರಾತ್ ನಲ್ಲಿರುವ ಹಲೊಲ್ ಘಟಕಕ್ಕೆ ಶಾಶ್ವತ ಬೀಗ ಜಡಿದು ಮಹಾರಾಷ್ಟ್ರದ ತಲೆಂಗಾವ್ ನಲ್ಲಿ ತಲೆಯೆತ್ತಲಿರುವ ನೂತನ ಘಟಕಕ್ಕೆ ಸಂಪೂರ್ಣವಾಗಿ ಸ್ಥಳಾಂತರವಾಗುವ ಯೋಜನೆಯನ್ನು ಷೆವರ್ಲೆ ಹೊಂದಿದೆ. 2017ರ ವರೆಗೆ ಮಾತ್ರ ಹಲೊಲ್ ಘಟಕ ತೆರೆದುಕೊಳ್ಳಲಿದೆ.

ಬದಲಾಗುತ್ತಿದೆ ನಿಮ್ಮ ಅಚ್ಚುಮೆಚ್ಚಿನ ಷೆವರ್ಲೆ ತವೆರಾ

ಬೆಳೆದು ಬರುತ್ತಿರುವ ಭಾರತ ಮಾರುಕಟ್ಟೆಯನ್ನು ಗುರಿಯಾಗಿರಿಸಿರುವ ಮುಂದಿನ ಎರಡು ವರ್ಷದೊಳಗೆ ಟ್ರೈಲ್ ಬ್ಲೇಜರ್ ಎಸ್ ಯುವಿ, ಮುಂದಿನ ಜನಾಂಗದ ಬೀಟ್ ಹ್ಯಾಚ್ ಬ್ಯಾಕ್, ಎಕ್ಸೆನ್ಸಿಯಾ ಸೆಡಾನ್ ಮತ್ತು ಬೀಟ್ ಆಕ್ಟಿವ್ ಹ್ಯಾಚ್ ಬ್ಯಾಕ್ ಕಾರುಗಳನ್ನು ಬಿಡುಗಡೆ ಮಾಡಲಿದೆ. ಆದರೆ ಸ್ಪಿನ್ ಬಿಡುಗಡೆ ಮಾಡುವ ಯೋಜನೆಯಿಂದ ಹಿಂದಕ್ಕೆ ಸರಿದಿತ್ತು.

ಬದಲಾಗುತ್ತಿದೆ ನಿಮ್ಮ ಅಚ್ಚುಮೆಚ್ಚಿನ ಷೆವರ್ಲೆ ತವೆರಾ

ಈಗ ಮಾರುಕಟ್ಟೆಯಲ್ಲಿರುವ ಷೆವರ್ಲೆ ತವೆರಾ 2499 ಸಿಸಿ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತಿದ್ದು, 171 ಎನ್ ಎಂ ತಿರುಗುಬಲದಲ್ಲಿ 73.4 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ. ಅಲ್ಲದೆ 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಹೊಂದಿದೆ.

ಬದಲಾಗುತ್ತಿದೆ ನಿಮ್ಮ ಅಚ್ಚುಮೆಚ್ಚಿನ ಷೆವರ್ಲೆ ತವೆರಾ

ಏಳು, ಒಂಬತ್ತು ಹಾಗೂ 10 ಸೀಟುಗಳ ಆಯ್ಕೆಗಳಲ್ಲಿ ಲಭ್ಯವಿರುವ ಷೆವರ್ಲೆ ತವೆರಾ ಪ್ರತಿ ಲೀಟರ್ ಗೆ 13.7 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರುತ್ತದೆ.

ಬದಲಾಗುತ್ತಿದೆ ನಿಮ್ಮ ಅಚ್ಚುಮೆಚ್ಚಿನ ಷೆವರ್ಲೆ ತವೆರಾ

ಈಗ ಮಾರಾಟದಲ್ಲಿರುವ ಭಾರತ್ ಸ್ಟೇಜ್ III ಷೆವರ್ಲೆ ತವೆರಾ ಮಾದರಿಯನ್ನು ಮೆಟ್ರೋ ನಗರಗಳಲ್ಲಿ ಮಾರಾಟ ಮಾಡುವಂತಿಲ್ಲ. ಇದೇ ಕಾರಣಕ್ಕಾಗಿ ಎಚ್ಚೆತ್ತುಕೊಂಡಿರುವ ಸಂಸ್ಥೆಯು ಮಾರುಕಟ್ಟೆಯಲ್ಲಿ ತನ್ನ ಉಳಿಗಾಲಕ್ಕಾಗಿ ಬಿಎಸ್ IV ಮಾದರಿಯನ್ನು ಬಿಡುಗಡೆ ಮಾಡಲಿದೆ.

ಬದಲಾಗುತ್ತಿದೆ ನಿಮ್ಮ ಅಚ್ಚುಮೆಚ್ಚಿನ ಷೆವರ್ಲೆ ತವೆರಾ

ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ ಷೆವರ್ಲೆ ತವೆರಾ 7.95 ಲಕ್ಷ ರು.ಗಳಿಂದ 11.98 ಲಕ್ಷ ರು.ಗಳಷ್ಟು ದುಬಾರಿಯೆನಿಸುತ್ತದೆ. ಹೊಸ ಆವೃತ್ತಿಯು ಇದಕ್ಕಿಂತಲೂ ದುಬಾರಿಯೆನಿಸುವ ಸಾಧ್ಯತೆಯಿದೆ.

ಬದಲಾಗುತ್ತಿದೆ ನಿಮ್ಮ ಅಚ್ಚುಮೆಚ್ಚಿನ ಷೆವರ್ಲೆ ತವೆರಾ

ಮಾರುಕಟ್ಟೆಯಲ್ಲಿ ಮಾರುತಿ ಎರ್ಟಿಗಾ, ಹೋಂಡಾ ಮೊಬಿಲಿಯೊ, ಮಹೀಂದ್ರ ಕ್ಸೈಲೋ, ಮಹೀಂದ್ರ ಬೊಲೆರೊ, ಟಾಟಾ ಸಫಾರಿ ಡಿಕೊರ್ ಮತ್ತು ಟಾಟಾ ಸುಮೋ ಗೋಲ್ಡ್ ಮುಂತಾದ ಮಾದರಿಗಳಿಗೆ ಷೆವರ್ಲೆ ತವೆರಾ ಪೈಪೋಟಿಯನ್ನು ಒಡ್ಡುತ್ತಿದೆ.

ಬದಲಾಗುತ್ತಿದೆ ನಿಮ್ಮ ಅಚ್ಚುಮೆಚ್ಚಿನ ಷೆವರ್ಲೆ ತವೆರಾ

ಹಳೆಯ ತವೆರಾದಲ್ಲಿ ಫ್ರಂಟ್ ಪವರ್ ವಿಂಡೋ, ಮ್ಯಾನುವಲ್ ಎಸಿ ಜೊತೆ ರಿಯರ್ ಎಸಿ ವೆಂಟ್ಸ್, ಫ್ರಂಟ್ ಫಾಗ್ ಲ್ಯಾಂಪ್, ರಿಯರ್ ವೈಪರ್ ಮತ್ತು 1 ಡಿನ್ ಮ್ಯೂಸಿಕ್ ಸಿಸ್ಟಂ ಜೊತೆ ನಾಲ್ಕು ಸ್ಪೀಕರ್ ಗಳಿವೆ.

ಬದಲಾಗುತ್ತಿದೆ ನಿಮ್ಮ ಅಚ್ಚುಮೆಚ್ಚಿನ ಷೆವರ್ಲೆ ತವೆರಾ

ನೂತನ ಷೆವರ್ಲೆ ತವೆರಾ ಏನೆಲ್ಲ ವೈಶಿಷ್ಟ್ಯಗಳನ್ನು ಪಡೆಯಲಿದೆ ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ. ಈ ಸಂಬಂಧ ನಿರಂತರ ಮಾಹಿತಿಗಾಗಿ ಡ್ರೈವ್ ಸ್ಪಾರ್ಕ್ ಓದುತ್ತಿರಿ.

Most Read Articles

Kannada
English summary
General Motors Working On Chevrolet Tavera Facelift
Story first published: Saturday, June 25, 2016, 16:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X