ಬದಲಾಗುತ್ತಿರುವ ಭಾರತಕ್ಕೆ ಹೋಂಡಾ ಹೈಬ್ರಿಡ್ ಕಾರು ಕೊಡುಗೆ

By Nagaraja

ಬದಲಾವಣೆಯ ಪರ್ವದಲ್ಲಿರುವ ಭಾರತೀಯ ವಾಹನ ಮಾರುಕಟ್ಟೆಗೆ ಪರಿಸರ ಸ್ನೇಹಿ ಅತಿ ನೂತನ ಅಕಾರ್ಡ್ ಹೈಬ್ರಿಡ್ ಕಾರನ್ನು ಬಿಡುಗಡೆಗೊಳಿಸಲು ಜಪಾನ್ ಮೂಲದ ದೈತ್ಯ ವಾಹನ ಸಂಸ್ಥೆ ಹೋಂಡಾ ಕಾರ್ಸ್ ಇಂಡಿಯಾ ನಿರ್ಧರಿಸಿದೆ. ನೂತನ ಹೋಂಡಾ ಅಕಾರ್ಡ್ ಹೈಬ್ರಿಡ್ ಕಾರು ಅಕ್ಟೆಂಬ್ರ 25ರಂದು ಭಾರತ ಮಾರುಕಟ್ಟೆಯನ್ನು ತಲುಪಲಿದೆ.

ಕಂಪ್ಲೀಟ್ ಬಿಲ್ಟ್ ಯುನಿಟ್ (ಸಿಬಿಯು) ಸಿದ್ಧಾಂತದ ಮುಖಾಂತರ ಹೋಂಡಾ ಅಕಾರ್ಡ್ ಹೈಬ್ರಿಡ್ ಕಾರು ಭಾರತಕ್ಕೆ ಆಮದಾಗಲಿದೆ. ಆದರೆ ದುರದೃಷ್ಟವಶಾತ್ ಕೇಂದ್ರ ಸರಕಾರದ ಫೇಮ್ ಯೋಜನೆಯಡಿ ಫಲಶ್ರುತಿಯನ್ನು ಗಿಟ್ಟಿಸಿಕೊಳ್ಳುವಲ್ಲಿ ಹೋಂಡಾ ಅಕಾರ್ಡ್ ವಿಫಲವಾಗಿದೆ.

ಹೋಂಡಾ ಅಕಾರ್ಡ್ ಹೈಬ್ರಿಡ್ ಕಾರು


ಕಾರಿನಡಿಯಲ್ಲಿ 2.0 ಲೀಟರ್ ಫೋರ್ಡ್ ಐ-ವಿಟೆಕ್ ಪೆಟ್ರೋಲ್ ಎಂಜಿನ್ ಜೋಡಣೆಯಾಗಲಿದೆ. ಇದರ ಜೊತೆಗೆ 1.3 ಕೆಡಬ್ಲ್ಯುಎಚ್ ಬ್ಯಾಟರಿ ನಿಯಂತ್ರಿತ ಎಲೆಕ್ಟ್ರಿಕ್ ಮೋಟಾರು ಲಗತ್ತಿಸಲಾಗಿದೆ. ಇವೆರಡು ಜಂಟಿಯಾಗಿ 315 ಎನ್ ಎಂ ತಿರುಗುಬಲದಲ್ಲಿ 184 ಅಶ್ವಶಕ್ತಿಯನ್ನು ನೀಡಲಿದೆ. ಅಲ್ಲದೆ ಇ-ಸಿವಿಟಿ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

ಭಾರತದಲ್ಲಿ ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ಕಾರಿಗೆ ಹೋಂಡಾ ಅಕಾರ್ಡ್ ನೇರ ಎದುರಾಳಿಯಾಗಿರಲಿದೆ. ಕ್ಯಾಮ್ರಿ ಹೈಬ್ರಿಡ್ ಕಾರನ್ನು ಸ್ಥಳೀಯವಾಗಿ ಜೋಡಣೆ ಮಾಡುವುದರಿಂದ ತೆರಿಗೆ ವಿನಾಯಿತಿ ಜೊತೆಗೆ ಪ್ರೋತ್ಸಾಹವು ದೊರಕುತ್ತದೆ. ಇದು ಬೆಲೆ ನಿರ್ಧರಿಸುವಾಗ ಹೋಂಡಾ ಅಕಾರ್ಡ್ ಗೆ ಹಿನ್ನಡೆಯಾಗಿ ಪರಿಣಮಿಸುವ ಭೀತಿಯಿದೆ.

ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ಕಾರು ಮುಂಬೈ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 34.88 ಲಕ್ಷ ರು.ಗಳಷ್ಟು ದುಬಾರಿಯೆನಿಸುತ್ತದೆ. ನೂತನ ಅಕಾರ್ಡ್ ಹೈಬ್ರಿಡ್ ಇದಕ್ಕಿಂತಲೂ ಹೆಚ್ಚು ಅಂದರೆ ಅಂದಾಜು 40 ಲಕ್ಷ ರು.ಗಳ ಬೆಲೆ ಪರಿಧಿಯಲ್ಲಿ ಬಿಡುಗಡೆಯಾಗಲಿದೆ. ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸ ಕಂಡುಬಂದ್ದಲ್ಲಿ ಹೋಂಡಾ ಅಕಾರ್ಡ್ ಮಾರಾಟಕ್ಕೆ ಇದು ತೊಂದರೆಯಾಗಲಿದೆ.

Most Read Articles

Kannada
English summary
Honda To Launch An All-New Hybrid Vehicle In India On October 25
Story first published: Wednesday, September 28, 2016, 13:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X