ಹ್ಯುಂಡೈನಿಂದ ಐ20 ತಳಹದಿಯಲ್ಲಿ ನೂತನ ಎಸ್ ಯುವಿ

By Nagaraja

ಜಾಗತಿಕ ವಾಹನ ಮಾರುಕಟ್ಟೆಯಲ್ಲಿ ತನ್ನದೇ ವಿಶೇಷ ಸ್ಥಾನಮಾನ ಕಾಪಾಡಿಕೊಂಡಿರುವ ಹ್ಯುಂಡೈ ಸಂಸ್ಥೆಯೀಗ, ತನ್ನ ಜನಪ್ರಿಯ ಐ20 ಹ್ಯಾಚ್ ಬ್ಯಾಕ್ ಕಾರಿನ ತಳಹದಿಯಲ್ಲಿ ನೂತನ ಕ್ರೀಡಾ ಬಳಕೆಯ ವಾಹನವನ್ನು ನಿರ್ಮಿಸುತ್ತಿದೆ. ಮತ್ತದೇ ವಿಷಯವನ್ನು ಇಲ್ಲಿ ಉಲ್ಲೇಖಿಸುವ ಕಾರಣವೇನೆಂದರೆ ಪ್ರಸ್ತುತ ಕಾರು ಯುರೋಪ್ ಖಂಡದಲ್ಲಿ ಟೆಸ್ಟಿಂಗ್ ವೇಳೆ ಸಂಪೂರ್ಣವಾಗಿ ಮರೆಮಾಚಿದ ರೂಪದಲ್ಲಿ ಪತ್ತೆ ಹಚ್ಚಲಾಗಿದೆ.

ಹ್ಯುಂಡೈನಿಂದ ಐ20 ತಳಹದಿಯಲ್ಲಿ ನೂತನ ಎಸ್ ಯುವಿ

ಹ್ಯುಂಡೈ ಅಭಿವೃದ್ಧಿಪಡಿಸುತ್ತಿರುವ ನೂತನ ಕಾರು 'ಇಂಟ್ರಡೊ' ಒಂದು ಸಬ್ ಕಾಂಪಾಕ್ಟ್ ಎಸ್ ಯುವಿ ಆಗಿರಲಿದೆ. ಇದಕ್ಕೂ ಮೊದಲು 2014 ಜಿನೆವಾ ಮೋಟಾರು ಶೋದಲ್ಲಿ ಇದರ ಪರಿಕಲ್ಪನೆಯನ್ನು ಹ್ಯುಂಡೈ ಪ್ರದರ್ಶಿಸಿತ್ತು.

ಹ್ಯುಂಡೈನಿಂದ ಐ20 ತಳಹದಿಯಲ್ಲಿ ನೂತನ ಎಸ್ ಯುವಿ

ಅತ್ಯಂತ ವಿಶಿಷ್ಟವಾದ ವಿನ್ಯಾಸವನ್ನು ಕಾಪಾಡಿಕೊಂಡಿರುವ ನೂತನ ಕಾರು ಭಾರತದಂತಹ ಬೆಳೆದು ಬರುತ್ತಿರುವ ಗುರಿ ಮಾಡಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಹ್ಯುಂಡೈನಿಂದ ಐ20 ತಳಹದಿಯಲ್ಲಿ ನೂತನ ಎಸ್ ಯುವಿ

ಭಾರತದಲ್ಲಿ ಆಗಲೇ ಹೆಚ್ಚು ಪ್ರೀಮಿಯಂ ಸೌಲಭ್ಯಗಳುಳ್ಳ ಟಕ್ಸನ್ ಕ್ರೀಡಾ ಬಳಕೆಯ ವಾಹನವನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಆದರೆ ಭವಿಷ್ಯದ ಹ್ಯುಂಡೈ ಯೋಜನೆಯಲ್ಲಿ ಐ20 ತಳಹದಿಯ ಎಸ್ ಯುವಿ ಗುರುತಿಸಿಕೊಳ್ಳುವುದು ಎಂಬುದು ಕುತೂಹಲವೆನಿಸಿದೆ.

ಹ್ಯುಂಡೈನಿಂದ ಐ20 ತಳಹದಿಯಲ್ಲಿ ನೂತನ ಎಸ್ ಯುವಿ

2016 ಟಕ್ಸನ್ ಬಳಿಕ 2017 ಹ್ಯುಂಡೈ ವೆರ್ನಾ, ಪರಿಷ್ಕೃತ ಗ್ರಾಂಡ್ ಐ10, ಪರಿಷ್ಕೃತ ಎಕ್ಸ್ ಸೆಂಟ್, ಶಕ್ತಿಶಾಲಿ ಜೆನಿಸಿಸ್ ಕಾರಿನ ಜೊತೆಗೆ ಮಾರುತಿ ಸುಜುಕಿ ವಿಟಾರಾ ಬ್ರಿಝಾಗೆ ಪ್ರಿತಿಸ್ಪರ್ಧಿಯಾಗಿ ನೂತನ ಕಾಂಪಾಕ್ಟ್ ಎಸ್ ಯುವಿ ಬಿಡುಗಡೆ ಮಾಡುವ ಯೋಜನೆಯನ್ನು ಹ್ಯುಂಡೈ ಹೊಂದಿದೆ.

ಹ್ಯುಂಡೈನಿಂದ ಐ20 ತಳಹದಿಯಲ್ಲಿ ನೂತನ ಎಸ್ ಯುವಿ

ಆಕರ್ಷಕ ಹೆಡ್ ಲ್ಯಾಂಪ್, ಪ್ರಭಾವಶಾಲಿ ಸ್ವಭಾವ ರೇಖೆಗಳು ಹಿಂದುಗಡೆ ವಿಶಿಷ್ಟ ಟೈಲ್ ಲ್ಯಾಂಪ್ ಜೊತೆಗೆ ಎಲ್ ಇಡಿ ಬೆಳಕಿನ ಸೇವೆಯನ್ನು ಕೊಡಲಾಗಿದೆ.

ಹ್ಯುಂಡೈನಿಂದ ಐ20 ತಳಹದಿಯಲ್ಲಿ ನೂತನ ಎಸ್ ಯುವಿ

ಐ20 ತಳಹದಿಯಲ್ಲಿ ನಿರ್ಮಾಣವಾಗಿರುವ ನೂತನ ಎಸ್ ಯುವಿ, ಹ್ಯುಂಡೈ ಕ್ರೆಟಾಗಿಂತಲೂ ವಿಭಿನ್ನ ವಿನ್ಯಾಸವನ್ನು ಕಾಪಾಡಿಕೊಂಡಿದೆ. ಅಲ್ಲದೆ ಯುರೋಪ್ ಮತ್ತು ಅಮೆರಿಕ ಮಾರುಕಟ್ಟೆಗೆ ಅನುಗುಣವಾಗಿ ಸುರಕ್ಷತಾ ಮಟ್ಟವನ್ನು ಕಾಯ್ದುಕೊಳ್ಳಲಾಗಿದೆ.

ಹ್ಯುಂಡೈನಿಂದ ಐ20 ತಳಹದಿಯಲ್ಲಿ ನೂತನ ಎಸ್ ಯುವಿ

ಹೊಸತಾದ ದೇಹ ರಚನೆ ಇಂಟ್ರಡೊಗೆ ನೆರವಾಗಲಿದ್ದು, ಆಫ್ ರೋಡ್ ಗ್ರಾಹಕರನ್ನು ಗುರಿ ಮಾಡಲಿದೆ.

ಹ್ಯುಂಡೈನಿಂದ ಐ20 ತಳಹದಿಯಲ್ಲಿ ನೂತನ ಎಸ್ ಯುವಿ

ಯುದ್ಧ ವಿಮಾನದ ವಿನ್ಯಾಸದಿಂದ ಸ್ಫೂರ್ತಿ ಪಡೆದು ಹ್ಯುಂಡೈ ಇಂಟ್ರಡೊ ಕಾನ್ಸೆಪ್ಟ್ ತಯಾರಿಸಲಾಗಿದೆ. ಹಾಗೆಯೇ ಭಾರ ಕಡಿಮೆಗೊಳಿಸಲು ಹಗುರ ಭಾರದ ಪರಿಕರಗಳನ್ನು ಬಳಕೆ ಮಾಡಲಾಗಿದೆ.

ಹ್ಯುಂಡೈನಿಂದ ಐ20 ತಳಹದಿಯಲ್ಲಿ ನೂತನ ಎಸ್ ಯುವಿ

ಹ್ಯುಂಡೈನ ಯುರೋಪಿಯನ್ ಟೆಕ್ನಿಕಲ್ ಸೆಂಟರ್‌ನಲ್ಲಿ ಇದರ ಅಭಿವೃದ್ಧಿ ಹಾಗೂ ವಿನ್ಯಾಸ ಕಾರ್ಯ ಹಮ್ಮಿಕೊಳ್ಳಲಾಗಿದೆ.

ಹ್ಯುಂಡೈನಿಂದ ಐ20 ತಳಹದಿಯಲ್ಲಿ ನೂತನ ಎಸ್ ಯುವಿ

ನೂತನ ಇಂಟ್ರಾಡೊ 1 ಲೀಟರ್ ಟಿ-ಜಿಡಿಐ ಪೆಟ್ರೋಲ್, 1.4 ಲೀಟರ್ ಜಿಡಿಐ ಪೆಟ್ರೋಲ್ ಮತ್ತು 1.6 ಲೀಟರ್ ಸಿಆರ್ ಡಿಐ ಡೀಸೆಲ್ ಎಂಜಿನ್ ಗಳನ್ನು ಪಡೆಯಲಿದೆ. ಇದು ಆರು ಸ್ಪೀಡ್ ಮ್ಯಾನುವಲ್ ಜೊತೆಗೆ ಸೆವೆನ್ ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಪಡೆಯಲಿದೆ.

ಹ್ಯುಂಡೈನಿಂದ ಐ20 ತಳಹದಿಯಲ್ಲಿ ನೂತನ ಎಸ್ ಯುವಿ

2017ನೇ ಸಾಲಿನಲ್ಲಿ ನೂತನ ಎಸ್ ಯುವಿ ಮಾರುಕಟ್ಟೆಗೆ ಅಪ್ಪಳಿಸಲಿದೆ. ಆದರೆ ಸದ್ಯಕ್ಕಂತೂ ಭಾರತ ಮಾರುಕಟ್ಟೆ ಪ್ರವೇಶಿಸಲಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿಗಳಿಲ್ಲ.

Most Read Articles

Kannada
English summary
Hyundai i20-Based SUV Spied Testing In Europe
Story first published: Monday, October 17, 2016, 9:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X