ಭಾರತಕ್ಕೆ ಪ್ರವೇಶಿಸಲಿರುವ ಯುರೋಪ್ ತಂತ್ರಜ್ಞಾನದ ಎಲೆಕ್ಟ್ರಿಕ್ ಬಸ್

By Nagaraja

ರಾಷ್ಟ್ರ ರಾಜಧಾನಿ ದೆಹಲಿ ತಳಹದಿಯ ವಾಹನ ಬಿಡಿಭಾಗ ನಿರ್ಮಾಣ ಸಂಸ್ಥೆಯಾಗಿರುವ ಜೆಬಿಎಂ ಆಟೋ ಲಿಮಿಟೆಡ್, ದೇಶಕ್ಕೆ ಅತ್ಯಾಧುನಿಕ ಯುರೋಪ್ ತಂತ್ರಜ್ಞಾನವನ್ನೊಳಗೊಂಡಿರುವ ವಿದ್ಯುತ್ ಚಾಲಿತ ಬಸ್ಸುಗಳನ್ನು ಪರಿಚಯಿಸಲಿದೆ.

ಈ ನಿಟ್ಟಿನಲ್ಲಿ ಪೊಲೆಂಡ್ ತಳಹದಿಯ ಸೊಲರಿಸ್ ಬಸ್ ಆಂಡ್ ಕೋಚ್ ತಯಾರಕ ಸಂಸ್ಥೆಯೊಂದಿಗೆ ಬರೋಬ್ಬರಿ 300 ಕೋಟಿ ರುಪಾಯಿಗಳ ಒಪ್ಪಂದಕ್ಕೆ ಸಹಿ ಹಾಕಿದೆ.

ಭಾರತಕ್ಕೆ ಪ್ರವೇಶಿಸಲಿರುವ ಯುರೋಪ್ ತಂತ್ರಜ್ಞಾನದ ಎಲೆಕ್ಟ್ರಿಕ್ ಬಸ್

ಜೆಬಿಎಂ ಮತ್ತು ಸೊಲರಿಸ್ ಜೊತೆಗೂಡಿ ಎಲೆಕ್ಟ್ರಿಕ್ ಬಸ್ಸುಗಳ ವಿನ್ಯಾಸ, ಎಂಜಿನಿಯರಿಂಗ್, ಅಭಿವೃದ್ಧಿ, ನಿರ್ಮಾಣ ಮತ್ತು ವಿತರಣೆಯ ಯೋಜನೆಯನ್ನು ಕೈಗೆತ್ತಿಕೊಳ್ಳಲಿದೆ.

ಭಾರತಕ್ಕೆ ಪ್ರವೇಶಿಸಲಿರುವ ಯುರೋಪ್ ತಂತ್ರಜ್ಞಾನದ ಎಲೆಕ್ಟ್ರಿಕ್ ಬಸ್

ವಿದ್ಯುತ್ ಚಾಲಿತ ವಾಹನಗಳ ಕ್ಷೇತ್ರದಲ್ಲಿ ಅತ್ಯುನ್ನತ್ತ ಯುರೋಪ್ ತಂತ್ರಗಾರಿಕೆಯನ್ನು ಭಾರತಕ್ಕೂ ಪರಿಚಯಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ.

ಭಾರತಕ್ಕೆ ಪ್ರವೇಶಿಸಲಿರುವ ಯುರೋಪ್ ತಂತ್ರಜ್ಞಾನದ ಎಲೆಕ್ಟ್ರಿಕ್ ಬಸ್

ದೇಶದ ಮೂಲಸೌಕರ್ಯದೊಂದಿಗೆ ಸ್ಥಳೀಯವಾಗಿ ವಿದ್ಯುತ್ ಚಾಲಿತ ಬಸ್ಸುಗಳನ್ನು ವಿನ್ಯಾಸಗೊಳಿಸಿ ಜಾಗತಿಕ ಮಟ್ಟದಲ್ಲಿ ವ್ಯಾಪಾರ ಕಂಡುಕೊಳ್ಳುವ ಯೋಜನೆಯೂ ಇದೆ.

ಭಾರತಕ್ಕೆ ಪ್ರವೇಶಿಸಲಿರುವ ಯುರೋಪ್ ತಂತ್ರಜ್ಞಾನದ ಎಲೆಕ್ಟ್ರಿಕ್ ಬಸ್

ತಯಾರಕ ಘಟಕ, ಮೂಲಕಸೌಕರ್ಯ ಜೊತೆಗೆ ಎಂಜಿನಿಯರಿಂಗ್ ತಂತ್ರಗಾರಿಕೆಯನ್ನು ಜೆಬಿಎಂ ಒದಗಿಸಲಿದ್ದು, ಇನ್ನೊಂದೆಡೆ ಸೊಲರಿಸ್ ಎಲೆಕ್ಟ್ರಿಕ್ ತಂತ್ರಜ್ಞಾನವನ್ನು ಹಂಚಿಕೊಳ್ಳಲಿದೆ. ತನ್ಮೂಲಕ ಪರಿಸರ ಸ್ನೇಹಿ ವಾಹನಗಳಿಗೆ ಆದ್ಯತೆ ಕೊಡಲಾಗುವುದು.

ಭಾರತಕ್ಕೆ ಪ್ರವೇಶಿಸಲಿರುವ ಯುರೋಪ್ ತಂತ್ರಜ್ಞಾನದ ಎಲೆಕ್ಟ್ರಿಕ್ ಬಸ್

ನೂತನ ಬಸ್ಸುಗಳು 'ಇಕೊಲೈಫ್' ಎಂದು ಹೆಸರಿಸಿಕೊಂಡಿದ್ದು, ಒಂಬತ್ತರಿಂದ 12 ಮೀಟರ್ ಉದ್ದದ ಎರಡು ವಿಧದ ವಿದ್ಯುತ್ ಚಾಲಿತ ಬಸ್ಸುಗಳು ನಿರ್ಮಾಣವಾಗಲಿದೆ.

ಭಾರತಕ್ಕೆ ಪ್ರವೇಶಿಸಲಿರುವ ಯುರೋಪ್ ತಂತ್ರಜ್ಞಾನದ ಎಲೆಕ್ಟ್ರಿಕ್ ಬಸ್

ಲಿಥಿಯಂ ಬ್ಯಾಟರಿಗಳಿಂದ ನಿಯಂತ್ರಿಸಲ್ಪಡುವ ಇಕೊಲೈಫ್ ಎಲೆಕ್ಟ್ರಿಕ್ ಬಸ್ಸುಗಳು ಒಮ್ಮೆ ಚಾರ್ಜ್ ಮಾಡಿಸಿದ್ದಲ್ಲಿ 200 ಕೀ.ಮೀ. ವ್ಯಾಪ್ತಿಯ ವರೆಗೆ ಚಲಿಸುವ ಸಾಮರ್ಥ್ಯ ಹೊಂದಿರುತ್ತದೆ.

ಭಾರತಕ್ಕೆ ಪ್ರವೇಶಿಸಲಿರುವ ಯುರೋಪ್ ತಂತ್ರಜ್ಞಾನದ ಎಲೆಕ್ಟ್ರಿಕ್ ಬಸ್

ಇವೆಲ್ಲದರ ಮೂಲಕ 2030ರ ವೇಳೆಯಾಗುವಾಗ ಭಾರತವನ್ನು ಶೇಕಡಾ 100ರಷ್ಟು ವಿದ್ಯುತ್ ಚಾಲಿತ ದೇಶವನ್ನಾಗಿಸುವ ಸರಕಾರದ ಯೋಜನೆಯೊಂದಿಗೆ ಕೈಜೋಡಿಸಿಸಲಿದೆ.

Most Read Articles

Kannada
English summary
Introducing India’s First 100% Electric Bus: JBM Solaris ECOLIFE
Story first published: Saturday, July 23, 2016, 11:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X