ಜಾಗ್ವಾರ್ ಸ್ವಯಂಚಾಲಿತ ಕಾರುಗಳಿಗೆ ಅಗ್ನಿಪರೀಕ್ಷೆ

By Nagaraja

ಜಗತ್ತಿನ ಮುಂಚೂಣಿಯ ಸಂಸ್ಥೆಗಳು ಸ್ವಯಂಚಾಲಿತ ಕಾರುಗಳ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದು, ಭಾರಿ ಪೈಪೋಟಿ ಏರ್ಪಟ್ಟಿದೆ. ಈ ನಡುವೆ ದೇಶದ ಅತಿ ದೊಡ್ಡ ವಾಹನ ಸಂಸ್ಥೆ ಟಾಟಾ ಮೋಟಾರ್ಸ್ ಅಧೀನತೆಯಲ್ಲಿರುವ ಬ್ರಿಟನ್ ನ ಐಕಾನಿಕ್ ಕಾರು ಸಂಸ್ಥೆ ಜಾಗ್ವಾರ್ ಲ್ಯಾಂಡ್ ರೋವರ್, ನೈಜ ರಸ್ತೆ ಪರಿಸ್ಥಿತಿಯಲ್ಲಿ ಸ್ವಯಂಚಾಲಿತ ವಾಹನ ತಂತ್ರಜ್ಞಾನಗಳ ಪರೀಕ್ಷೆಯನ್ನು ಸದ್ಯದಲ್ಲೇ ಆರಂಭಿಸಲಿದೆ.

ಜಾಗ್ವಾರ್ ಲ್ಯಾಂಡ್ ರೋವರ್ ಪಾಲಿಗಿದು ನಿಜಕ್ಕೂ ಅಗ್ನಿಪರೀಕ್ಷೆಯಾಗಲಿದೆ. ಇದಕ್ಕಾಗಿ ಮುಂದಿನ ನಾಲ್ಕು ವರ್ಷಗಳ ಅವಧಿಯಲ್ಲಿ 100ರಷ್ಟು ಪರೀಕ್ಷಾರ್ಥ ವಾಹನಗಳನ್ನು ನಿರ್ಮಿಸಲಿದೆ.

ಜಾಗ್ವಾರ್ ಸ್ವಯಂಚಾಲಿತ ಕಾರುಗಳಿಗೆ ಅಗ್ನಿಪರೀಕ್ಷೆ

ಕನೆಕ್ಟಡ್ ಆಂಡ್ ಆಟೋನೋಮಸ್ ವೆಹಿಕಲ್ (ಸಿಎವಿ) ತಂತ್ರಜ್ಞಾನ ಅಭಿವೃದ್ಧಿಗಾಗಿ 100ರಷ್ಟು ವಾಹನಗಳನ್ನು ಪರೀಕ್ಷೆಗೊಳಸಪಡಿಸಲಿದೆ. ಇದು ಮೊದಲು ವಿಶೇಷವಾಗಿ ಸಿದ್ಧಪಡಿಸಿದ 41 ಮೈಲು ದೂರದ ಟೆಸ್ಟಿಂಗ್ ರಸ್ತೆಯಲ್ಲಿ ಪ್ರಯೋಗಿಕ ಸಂಚಾರ ನಡೆಸಲಿದೆ.

ಜಾಗ್ವಾರ್ ಸ್ವಯಂಚಾಲಿತ ಕಾರುಗಳಿಗೆ ಅಗ್ನಿಪರೀಕ್ಷೆ

ಚಾಲಕರ ದಣಿವು ಕಡಿಮೆ ಮಾಡುವ ಮೂಲಕ ಅಪಘಾತ ಪ್ರಕರಣಗಳನ್ನು ಗಣನೀಯವಾಗಿ ನಿಯಂತ್ರಣಕ್ಕೆ ತರುವುದು ಜಾಗ್ವಾರ್ ಸ್ವಯಂಚಾಲಿತ ಕಾರುಗಳ ಉದ್ದೇಶವಾಗಿದೆ.

ಜಾಗ್ವಾರ್ ಸ್ವಯಂಚಾಲಿತ ಕಾರುಗಳಿಗೆ ಅಗ್ನಿಪರೀಕ್ಷೆ

ಪ್ರಾಥಮಿಕ ಪರೀಕ್ಷಾರ್ಥ ಹಂತದಲ್ಲಿ ವೆಹಿಕಲ್ ಟು ವೆಹಿಕಲ್, ವೆಹಿಕಲ್ ಟು ಇನ್ಪ್ರಾಸ್ಟ್ರಕ್ಚರ್ ಕ್ಯಮೂನಿಕೇಷನ್ ಟೆಕ್ನಾಲಜಿಸ್ ಪ್ರಯೋಗವು ನೆರವೇರಲಿದೆ. ಈ ವೇಳೆಯಲ್ಲಿ ರಸ್ತೆ ಸಂಚಾರ ಸೂಚನಾ ಫಲಕಗಳು ಮತ್ತು ಟ್ರಾಫಿಕ್ ಸಿಗ್ನಲ್ ಗಳನ್ನು ಗ್ರಹಿಸಲಿದೆ.

ಜಾಗ್ವಾರ್ ಸ್ವಯಂಚಾಲಿತ ಕಾರುಗಳಿಗೆ ಅಗ್ನಿಪರೀಕ್ಷೆ

ಟ್ರಾಫಿಕ್ ನಿಯಂತ್ರಣಕ್ಕೆ ನೂತನ ಕನೆಕ್ಟಡ್ ಮತ್ತು ಆಟೋಮ್ಯಾಟಡ್ ಟೆಕ್ನಾಲಜಿ ನೆರವಿಗೆ ಬರಲಿದೆ ಎಂದು ಸಂಸ್ಥೆಯು ವಿಶ್ವಾಸ ವ್ಯಕ್ತಪಡಿಸಿದೆ. ಅತಿಯಾದ ವಾಹನ ದಟ್ಟಣೆಯಲ್ಲಿ ವಾಹನ ಅಪಘಾತಗಳು ಜಾಸ್ತಿಯಾಗಿ ನಡೆಯುತ್ತದೆ.

ಜಾಗ್ವಾರ್ ಸ್ವಯಂಚಾಲಿತ ಕಾರುಗಳಿಗೆ ಅಗ್ನಿಪರೀಕ್ಷೆ

ಮಗದೊಂದು ನೂತನ ರೋಡ್ ವರ್ಕ್ ಅಸಿಸ್ಟ್ ತಂತ್ರಜ್ಞಾನದ ಮುಖಾಂತರ, ಸ್ಟೀರಿಯೊ ಕ್ಯಾಮೆರಾ, ತ್ರಿಡಿ ವೀಕ್ಷಣೆ ಮತ್ತು ಅಡ್ವಾನ್ಸಡ್ ಇಮೇಜ್ ಪ್ರೊಸೆಸಿಂಗ್ ಸಾಫ್ಟ್ ವೇರ್ ತಂತ್ರಗಾರಿಕೆಗಳು ಇರಲಿದೆ.

ಜಾಗ್ವಾರ್ ಸ್ವಯಂಚಾಲಿತ ಕಾರುಗಳಿಗೆ ಅಗ್ನಿಪರೀಕ್ಷೆ

ಇನ್ನು ಸೇಫ್ ಪುಲ್ ಎವೇ, ಓವರ್ ದಿ ಹೊರಿಝನ್ ವಾರ್ನಿಂಗ್, ಎಮರ್ಜನ್ಸಿ ವೆಹಿಕಲ್ ವಾರ್ನಿಂಗ್ ಮುಂತಾದ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಸ್ವಯಂಚಾಲಿತ ಕಾರುಗಳಿಗಾಗಿ ಜಾಗ್ವಾರ್ ಲ್ಯಾಂಡ್ ರೋವರ್ ಅಭಿವೃದ್ಧಿಪಡಿಸಲಿದೆ.

Most Read Articles

Kannada
English summary
Jaguar Land Rover to start real world tests of Autonomous Vehicle Technology
Story first published: Monday, July 18, 2016, 17:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X