ಇತಿಹಾಸ ಪ್ರಸಿದ್ಧ ತಾಣದಲ್ಲಿ ಜೀಪ್ ಗ್ರಾಂಡ್ ಎಂಟ್ರಿ

By Nagaraja

ವಾಹನ ಪ್ರೇಮಿಗಳ ವರ್ಷಗಳ ಕಾಯುವಿಕೆಗೆ ಕೊನೆಗೂ ಪೂರ್ಣ ವಿರಾಮ ಬಿದ್ದಿದ್ದು, ಅಮೆರಿಕದ ದೈತ್ಯ ಹಾಗೂ ಪ್ರತಿಷ್ಠಿತ ಜೀಪ್ ವಾಹನಗಳು ಭಾರತಕ್ಕೆ ಭರ್ಜರಿ ಎಂಟ್ರಿ ಕೊಟ್ಟಿವೆ.

ಭಾರತದಲ್ಲಿ ಬಿಡುಗಡೆಯಾಗಿರುವ ಜೀಪ್ ಮಾದರಿಗಳು ಇಂತಿವೆ:

  • ವ್ರ್ಯಾಂಗ್ಲರ್ ಅನ್ ಲಿಮಿಟೆಡ್
  • ಗ್ರಾಂಡ್ ಚೆರೋಕೀ
  • ಗ್ರಾಂಡ್ ಚೆರೋಕೀ ಎಸ್ ಆರ್ ಟಿ

ಜೀಪ್

ಇತಿಹಾಸ ಪ್ರಸಿದ್ಧ ರಾಜಸ್ತಾನ ಜೈಪುರದಲ್ಲಿರುವ ಉಮದ್ ಭವನ್ ಅರಮನೆಯಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಜೀಪ್ ವಾಹನಗಳು ಭಾರತಕ್ಕೆ ಪ್ರವೇಶ ಪಡೆದಿವೆ.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ವ್ರ್ಯಾಂಗ್ಲರ್ ಅನ್ ಲಿಮಿಟೆಡ್: 71,59,104 ರು.
ಗ್ರಾಂಡ್ ಚೆರೋಕೀ: 93,64,527 ರು.
ಗ್ರಾಂಡ್ ಚೆರೋಕೀ ಎಸ್ ಆರ್ ಟಿ: 1,12,07,825 ರು.

ಈ ಪೈಕಿ ಅತ್ಯಂತ ಶಕ್ತಿಶಾಲಿ ವಿ8 ಎಂಜಿನ್ ನೊಂದಿಗೆ ಆಗಮನವಾಗಿರುವ ಗ್ರಾಂಡ್ ಚೆರೋಕಿ ಎಸ್ ಆರ್ ಟಿ ಟಾಪ್ ಎಂಡ್ ವೆರಿಯಂಟ್ ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 1,12,07,825 ರು.ಗಳಷ್ಟು ದುಬಾರಿಯೆನಿಸಲಿದೆ.

ಜೀಪ್ ವ್ರ್ಯಾಂಗ್ಲರ್ ಅನ್ ಲಿಮಿಟೆಡ್

ಜೀಪ್ ವ್ರ್ಯಾಂಗ್ಲರ್ ಅನ್ ಲಿಮಿಟೆಡ್


ಮುಖ್ಯಾಂಶಗಳು
2.8 ಲೀಟರ್, 4 ಸಿಲಿಂಡರ್ ಡೀಸೆಲ್ ಎಂಜಿನ್,
5 ಸ್ಪೀಡ್ ಆಟೋಮ್ಯಾಟಿಕ್,
200 ಅಶ್ವಶಕ್ತಿ, 460 ಎನ್ ಎಂ ತಿರುಗುಬಲ
ಮೈಲೇಜ್: 12.1 ಕೀ.ಮೀ.

ಅಮೆರಿಕನ್ ವಿನ್ಯಾಸ ಶೈಲಿಯ ಜೀಪ್ ವ್ರ್ಯಾಂಗ್ಲರ್ ಸಾಂಪ್ರದಾಯಿಕ ಜೊತೆಗೆ ಸಮಕಾಲೀನ ತಂತ್ರಗಾರಿಕೆಯನ್ನು ಪಡೆದಿದೆ. ಈ ಆಫ್ ರೋಡ್ ನಿಪುಣ ವಾಹನದಲ್ಲಿ ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್, ಆಟೋಮ್ಯಾಟಿಕ್ ಎಸಿ, ಲೆಥರ್ ಹೋದಿಕೆ ಇತ್ಯಾದಿ ವೈಶಿಷ್ಟ್ಯಗಳು ಕಾಣ ಸಿಗಲಿದೆ.

ಗ್ರಾಂಡ್ ಚೆರೋಕೀ ಲಿಮಿಟೆಡ್

ಗ್ರಾಂಡ್ ಚೆರೋಕೀ ಲಿಮಿಟೆಡ್

ಮುಖ್ಯಾಂಶಗಳು
3.0 ಲೀಟರ್ ವಿ6 ಡೀಸೆಲ್ ಎಂಜಿನ್,
8 ಸ್ಪೀಡ್ ಆಟೋಮ್ಯಾಟಿಕ್,
243 ಅಶ್ವಶಕ್ತಿ, 570 ಎನ್ ಎಂ ತಿರುಗುಬಲ
ಮೈಲೇಜ್: 12.8 ಕೀ.ಮೀ.

ಅತ್ಯುತ್ತಮ ರಸ್ತೆ ಸಾನಿಧ್ಯ, ಕ್ರೋಮ್ ಗ್ರಿಲ್, ಪ್ರೊಜೆಕ್ಟರ್ ಹೆಡ್ ಲ್ಯಾಂಪ್, ದೊಡ್ಡದಾದ ಚಕ್ರಗಳು, 8.4 ಇಂಚುಗಳ ಮಾಹಿತಿ ಮನರಂಜನಾ ವ್ಯವಸ್ಥೆ, ಪ್ಯಾನರಾಮಿಕ್ ಸನ್ ರೂಫ್ ಮುಂತಾದ ಸೌಲಭ್ಯಗಳು ದೊರಕಲಿದೆ.

ಗ್ರಾಂಡ್ ಚೆರೋಕೀ ಎಸ್ ಆರ್ ಟಿ

ಗ್ರಾಂಡ್ ಚೆರೋಕೀ ಎಸ್ ಆರ್ ಟಿ


ಮುಖ್ಯಾಂಶಗಳು
6.4 ಲೀಟರ್ ವಿ8 ಪೆಟ್ರೋಲ್ ಎಂಜಿನ್,
8 ಸ್ಪೀಡ್ ಆಟೋಮ್ಯಾಟಿಕ್,
475 ಅಶ್ವಶಕ್ತಿ, 630 ಎನ್ ಎಂ ತಿರುಗುಬಲ,
ಮೈಲೇಜ್: 5.5 ಕೀ.ಮೀ.

2016 ಆಟೋ ಎಕ್ಸ್ ಪೋದಲ್ಲಿ ಮೊದಲ ಬಾರಿಗೆ ಪ್ರದರ್ಶನ ಕಂಡಿರುವ ಗ್ರಾಂಡ್ ಚೆರೋಕೀ ಎಸ್ ಆರ್ ಟಿ ಮಾದರಿಯು, ಜೀಪ್ ನಿಂದ ಭಾರತದಲ್ಲಿ ದೊರಕಲಿರುವ ಅತ್ಯಂತ ಶಕ್ತಿಶಾಲಿ ಆವೃತ್ತಿಯಾಗಿರಲಿದೆ. ಗ್ರಾಂಡ್ ಚೆರೋಕೀಯಲ್ಲಿರುವ ವೈಶಿಷ್ಟ್ಯಗಳ ಹೊರತಾಗಿ ಅತ್ಯಂತ ಪವರ್ ಫುಲ್ ವಿ8 ಎಂಜಿನ್ 475 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಇದೇ ಸಂದರ್ಭದಲ್ಲಿ ಗ್ರಾಂಡ್ ಚೆರೋಕೀ ಸಮ್ಮಿತ್ ಹಾಗೂ ಲಿಮಿಟೆಡ್ ಆವೃತ್ತಿಯನ್ನು ಬಿಡುಗಡೆ ಮಾಡಲಾಗಿದ್ದು, ಇವೆರಡು ಅನುಕ್ರಮವಾಗಿ 1.03 ಕೋಟಿ ರು. 93 ಲಕ್ಷ ರುಪಾಯಿಗಳಷ್ಟು ದುಬಾರಿಯೆನಿಸುತ್ತದೆ. ಇವೆರಡು 3.0 ಲೀಟರ್ ವಿ6 ಎಂಜಿನ್ ಪಡೆಯಲಿದ್ದು, 270 ಎನ್ ಎಂ ತಿರುಗುಬಲದಲ್ಲಿ 240 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ ಎಂಟು ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇರಲಿದೆ.

Most Read Articles

Kannada
Read more on ಜೀಪ್ jeep
English summary
Jeep Grand Cherokee And Wrangler Launches In India
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X