ಕೆಎಸ್‌ಆರ್‌ಟಿಸಿ ಬಲವರ್ಧನೆ; ಮಾರ್ಚ್ ವೇಳೆಗೆ 6,000 ಹೊಸ ಬಸ್ಸುಗಳ ಸೇರ್ಪಡೆ

By Nagaraja

ಮುಂದಿನ ವರ್ಷ ಮಾರ್ಚ್ ವೇಳೆಯಾಗುವಾಗ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಡಿಯಲ್ಲಿ (ಕೆಎಸ್ ಆರ್ ಟಿಸಿ) ಕಾರ್ಯ ನಿರ್ವಹಿಸುತ್ತಿರುವ ಎಲ್ಲ ನಾಲ್ಕು ನಿಗಮಗಳಿಗೆ ಒಟ್ಟು 6,000 ಬಸ್ಸುಗಳನ್ನು ಹಸ್ತಾಂತರಿಸಲಾಗುವುದು ಎಂದು ರಾಜ್ಯ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನ ಶಾಂತಿನಗರ ಕೆಎಸ್ ಆರ್ ಟಿಸಿ ನಿಲ್ದಾಣದಲ್ಲಿ ಕರ್ನಾಟಕ ಸಾರಿಗೆಯ 70 ನೂತನ ಬಸ್ಸುಗಳಿಗೆ ಚಾಲನೆ ನೀಡಿ ಮಾತನಾಡಿದ್ದ ರಾಮಲಿಂಗಾ ರೆಡ್ಡಿ, ದೇಶದಲ್ಲೇ ಅತ್ಯುತ್ತಮ ಸಾರಿಗೆ ಸೇವೆಯನ್ನು ನೀಡಲಾಗುತ್ತಿದೆ ಎಂದಿದ್ದಾರೆ.

ಕೆಎಸ್‌ಆರ್‌ಟಿಸಿ

ಇದೇ ಮೊದಲ ಬಾರಿಗೆ ಐಚರ್ ಮೋಟಾರ್ಸ್ ನಿಂದ ಕರ್ನಾಟಕ ಸಾರಿಗೆ ಬಸ್ಸುಗಳನ್ನು ಖರೀದಿಸಲಾಗಿದೆ. ಇತರೆ ಬಸ್ಸುಗಳಿಗೆ ಹೋಲಿಸಿದಾಗ ಇದು ಹೆಚ್ಚು ಮೈಲೇಜ್ ನೀಡುವಲ್ಲಿ ಯಶಸ್ವಿಯಾಗಲಿದೆ.

ಇದಕ್ಕೂ ಮೊದಲು ಟಾಟಾ ಮೋಟಾರ್ಸ್ ಹಾಗೂ ಅಶೋಕ್ ಲೇಲ್ಯಾಂಡ್ ನಿಂದಲೂ ಟೆಂಡರ್ ಪಡೆಯಲಾಗಿತ್ತು. ಆದರೆ ಎಲ್ಲ ರೀತಿಯ ಸಾಧಕ ಬಾಧಕಗಳನ್ನು ಪರಿಶೋಧಿಸಿದ ಬಳಿಕ ಐಚರ್ ಮೋಟಾರ್ಸ್ ಬಸ್ಸುಗಳಿಗೆ ಮೊರೆ ಹೋಗಲಾಗಿದೆ.

19.20 ಲಕ್ಷ ರುಪಾಯಿಗಳಷ್ಟು ದುಬಾರಿಯೆನಿಸಿರುವ ಈ ಡೀಸೆಲ್ ಬಸ್ಸುಗಳು ಪ್ರತಿ ಲೀಟರ್ ಗೆ 5.8 ಕೀ.ಮೀ. ಗಳಷ್ಟು ಇಂಧನ ಕ್ಷಮತೆ ನೀಡಲಿದೆ. ಮುಂದಿನ ವರ್ಷದಲ್ಲಿ ಐಚರ್ ನಿಂದ ಇಂತಹ 1594 ಬಸ್ಸುಗಳನ್ನು ಖರೀದಿ ಮಾಡಲಾಗುವುದು.

Most Read Articles

Kannada
English summary
Karnataka State Road Transport To Be Equipped With 6,000 More Buses
Story first published: Tuesday, September 27, 2016, 15:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X