ಮಹೀಂದ್ರ ಬೊಲೆರೊ ಪವರ್ ಪ್ಲಸ್ ದೇಶದಲ್ಲಿ ಭರ್ಜರಿ ಬಿಡುಗಡೆ

By Nagaraja

ಭಾರತದ ಕ್ರೀಡಾ ಬಳಕೆಯ ವಾಹನಗಳ (ಎಸ್ ಯುವಿ) ದೈತ್ಯ ಸಂಸ್ಥೆಯಾಗಿರುವ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯು ಅತಿ ನೂತನ ಬೊಲೆರೊ ಪವರ್ ಪ್ಲಸ್ ಆವೃತ್ತಿಯನ್ನು ಬಿಡುಗಡೆಗೊಳಿಸಿದೆ. ಇದು ಸ್ಟ್ಯಾಂಡರ್ಡ್ ಮಹೀಂದ್ರ ಬೊಲೆರೊಗಿಂತಲೂ ಚೊಕ್ಕದಾಗಿರಲಿದೆ.

ಬೆಲೆ ಮಾಹಿತಿ: 6.59 ಲಕ್ಷ ರು. (ಎಕ್ಸ್ ಶೋ ರೂಂ ಮುಂಬೈ)

ಮಿನಿ ಬೊಲೆರೊ ಎಂದೇ ಗುರುತಿಸ್ಪಡುವ ನೂತನ ಮಹೀಂದ್ರ ಬೊಲೆರೊ ಪವರ್ ಪ್ಲಸ್ ಆವೃತ್ತಿಯು ನಾಲ್ಕು ಮೀಟರ್ ಉದ್ದ ಪರಿಧಿಯೊಳಗೆ ನಿರ್ಮಾಣಗೊಂಡಿದ್ದು, ತೆರಿಗೆ ವಿನಾಯಿತಿ ಗಿಟ್ಟಿಸಿಕೊಳ್ಳುವುದರೊಂದಿಗೆ ಸ್ಪರ್ಧಾತ್ಮಕ ಬೆಲೆಗಳಲ್ಲಿ ಲಭ್ಯವಾಗಲಿದೆ.

ಮಹೀಂದ್ರ ಬೊಲೆರೊ ಪವರ್ ಪ್ಲಸ್ ದೇಶದಲ್ಲಿ ಭರ್ಜರಿ ಬಿಡುಗಡೆ

ನೂತನ ಮಹೀಂದ್ರ ಬೊಲೆರೊ ಪವರ್ ಪ್ಲಸ್ ಆವೃತ್ತಿಯು ಮೂರು ವೆರಿಯಂಟ್ ಗಳಲ್ಲಿ ಲಭ್ಯವಾಗಲಿದೆ. ಅವುಗಳೆಂದರೆ, ಎಸ್ ಎಲ್ ಇ, ಎಸ್ ಎಲ್ ಎಕ್ಸ್ ಮತ್ತು ಝಡ್ ಎಲ್ ಎಕ್ಸ್.

ಮಹೀಂದ್ರ ಬೊಲೆರೊ ಪವರ್ ಪ್ಲಸ್ ದೇಶದಲ್ಲಿ ಭರ್ಜರಿ ಬಿಡುಗಡೆ

1.5 ಲೀಟರ್ ಎಂಹಾಕ್ ಡಿ70 ಎಂಜಿನ್ ನಿಂದ ನಿಯಂತ್ರಿಸ್ಪಡುವ ನೂತನ ಬೊಲೆರೊ ಪವರ್ ಪ್ಲಸ್ ವಾಹನವು, 195 ಎನ್ ಎಂ ತಿರುಗುಬಲದಲ್ಲಿ 70 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಮಹೀಂದ್ರ ಬೊಲೆರೊ ಪವರ್ ಪ್ಲಸ್ ದೇಶದಲ್ಲಿ ಭರ್ಜರಿ ಬಿಡುಗಡೆ

ಅಲ್ಲದೆ ಹಿಂದಿನ ಎಂ2ಡಿಐಸಿಆರ್ ಎಂಜಿನ್ ಗಿಂತಲೂ ಶೇಕಡಾ 13ರಷ್ಟು ಹೆಚ್ಚು ಶಕ್ತಿಶಾಲಿ ಎನಿಸಿಕೊಳ್ಳಲಿದ್ದು, ಶೇಕಡಾ 5ರಷ್ಟು ಹೆಚ್ಚು ಇಂಧನ ಕ್ಷಮತೆಯನ್ನು ಕಾಪಾಡಿಕೊಳ್ಳಲಿದೆ. ಐದು ಸ್ಪೀಡ್ ಗೇರ್ ಬಾಕ್ಸ್ ಸಹ ಲಭ್ಯವಿರುತ್ತದೆ.

ಮಹೀಂದ್ರ ಬೊಲೆರೊ ಪವರ್ ಪ್ಲಸ್ ದೇಶದಲ್ಲಿ ಭರ್ಜರಿ ಬಿಡುಗಡೆ

ಮೊದಲ ನೋಟದಲ್ಲೇ ಹಿರಿಯ ಸೋದರನಿಗೆ ಸಮಾನವಾದ ನೋಟವನ್ನು ಬೊಲೆರೊ ಪವರ್ ಪ್ಲಸ್ ಮೈಗೂಡಿಸಿ ಬಂದಿದೆ. ಇನ್ನು ಸೂಕ್ಷ್ಮವಾಗಿ ಗಮನಿಸಿದಾಗ ಪರಿಷ್ಕೃತ ಬಂಪರ್ ಹಾಗೂ ಹೆಡ್ ಲ್ಯಾಂಪ್ ಕಂಡುಬರುತ್ತದೆ.

ಮಹೀಂದ್ರ ಬೊಲೆರೊ ಪವರ್ ಪ್ಲಸ್ ದೇಶದಲ್ಲಿ ಭರ್ಜರಿ ಬಿಡುಗಡೆ

ಮುಂಭಾಗದಲ್ಲಿ ಮಹೀಂದ್ರ ಬೊಲೆರೊ ದಿಟ್ಟವಾದ ಸಾನಿಧ್ಯವನ್ನು ಕಾಪಾಡಿಕೊಂಡಿದೆ. ಕಾರಿನೊಳಗೆ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಚಾಲಕ ಮಾಹಿತಿ ವ್ಯವಸ್ಥೆ (ಡಿಐಎಸ್), ಮಹೀಂದ್ರ ಮೈಕ್ರೋ ಹೈಬ್ರಿಡ್ ತಂತ್ರಜ್ಞಾನ ಹಾಗೂ ಎಂಜಿನ್ ಇಂಮೊಬಿಲೈಜರ್ ಪ್ರಮುಖ ವೈಶಿಷ್ಟ್ಯವಾಗಿರಲಿದೆ.

ಮಹೀಂದ್ರ ಬೊಲೆರೊ ಪವರ್ ಪ್ಲಸ್ ದೇಶದಲ್ಲಿ ಭರ್ಜರಿ ಬಿಡುಗಡೆ

ಸುರಕ್ಷತೆಯತ್ತ ಗಮನ ಹಾಯಿಸಿದಾಗ ನೂತನ ಬೊಲೆರೊ ಪವರ್ ಪ್ಲಸ್ ಆವೃತ್ತಿಯಲ್ಲಿ ಎಬಿಎಸ್, ಏರ್ ಬ್ಯಾಕ್, ಟ್ರಾಕ್ಷನ್ ಕಂಟ್ರೋಲ್ ಮತ್ತು ಇಎಸ್ ಪಿ ವ್ಯವಸ್ಥೆಯ ಅಭಾವ ಕಂಡುಬರಲಿದೆ. ಇದು ಪವರ್ ಸ್ಟೀರಿಂಗ್ ಹಾಗೂ ಎಸಿ ಸೌಲಭ್ಯಗಳನ್ನು ಒಳಗೊಂಡಿರಲಿದೆ.


Most Read Articles

Kannada
English summary
New Mahindra Bolero Power+ Launched In India With Better Performance And Mileage
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X