ಮಹೀಂದ್ರ ನುವೊಸ್ಪೋರ್ಟ್‌ಗೆ 57,000 ರು.ಗಳ ಭರ್ಜರಿ ಡಿಸ್ಕೌಂಟ್

By Nagaraja

ಕೆಲವು ಸಮಯಗಳ ಹಿಂದೆಯಷ್ಟೇ ದೇಶದ ಮುಂಚೂಣಿಯ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯು ಜನಪ್ರಿಯ ಕ್ವಾಂಟೊ ಪರಿಷ್ಕೃತ ಮಾದರಿಯಾಗಿರುವ ನುವೊಸ್ಪೋರ್ಟ್ ಕ್ರೀಡಾ ಬಳಕೆಯ ವಾಹನವನ್ನು ಬಿಡುಗಡೆಗೊಳಿಸಿತ್ತು.

ಇದಾದ ಬೆನ್ನಲ್ಲೇ ಇಷ್ಟು ಕಡಿಮೆ ಅವಧಿಯಲ್ಲೇ ನುವೊಸ್ಪೋರ್ಟ್ ಗೆ ಆಕರ್ಷಕ ಆಫರ್ ಗಳನ್ನು ಮುಂದಿಡಲು ಸಂಸ್ಥೆಯು ನಿರ್ಧರಿಸಿದೆ. ಬಲ್ಲ ಮೂಲಗಳ ಪ್ರಕಾರ ನೂತನ ನುವೊಸ್ಪೋರ್ಟ್ ಖರೀದಿ ವೇಳೆಯಲ್ಲಿ 57,000 ರು.ಗಳ ವರೆಗೆ ಪ್ರಯೋಜನ ಗಿಟ್ಟಿಸಿಕೊಳ್ಳಬಹುದಾಗಿದೆ.

ಮಹೀಂದ್ರ ನುವೊಸ್ಪೋರ್ಟ್‌ಗೆ 57,000 ರು.ಗಳ ಭರ್ಜರಿ ಡಿಸ್ಕೌಂಟ್

ಮಹೀಂದ್ರ ನುವೊಸ್ಪೋರ್ಟ್ ಆಫರ್ ಗಳು ಹಲವು ವಿದಧ ಪ್ರಯೋಜನಗಳನ್ನು ಒಳಗೊಂಡಿರಲಿದೆ. ಇದು ಡೀಲರುಗಳಿಂದ ಡೀಲರ್ ಗಳಿಗೆ ಬದಲಾಗಲಿದ್ದು, 15,000 ರು.ಗಳಿಂದ 35,000 ರು.ಗಳ ವರೆಗೆ ಡಿಸ್ಕೌಂಟ್ ನೀಡಲಾಗುತ್ತದೆ.

ಮಹೀಂದ್ರ ನುವೊಸ್ಪೋರ್ಟ್‌ಗೆ 57,000 ರು.ಗಳ ಭರ್ಜರಿ ಡಿಸ್ಕೌಂಟ್

ಇನ್ನು ಸ್ವಾಗತ ಬೋನಸ್, ಕಡಿಮೆ ಹಣಕಾಸು ಆಯ್ಕೆಗಳು, ವರ್ಧಿತ ವಾರಂಟಿ, ರಸ್ತೆ ಬದಿಯ ಸಹಾಯ ಯೋಜನೆ, ಅಪಘಾತ ವಿಮಾ ಪ್ರಯೋಜನಗಳು ಹಾಗೂ ಹೆಚ್ಚುವರಿ ಆಕ್ಸೆಸರಿ ಪ್ರಯೋಜನಗಳು ಸೇರಿರಲಿದೆ.

ಮಹೀಂದ್ರ ನುವೊಸ್ಪೋರ್ಟ್‌ಗೆ 57,000 ರು.ಗಳ ಭರ್ಜರಿ ಡಿಸ್ಕೌಂಟ್

ಕೆಲವು ಡೀಲರುಶಿಪ್ ಗಳು ವಾಹನ ಮೌಲ್ಯದ ಶೇಕಡಾ 90ರಷ್ಟು ಹಣಕಾಸು ನೆರವನ್ನು ನೀಡುತ್ತಿದೆ. ಹಾಗಿದ್ದರೂ ಬಾಡಿ ಕಿಟ್ ಗಳು ಈ ಎಲ್ಲ ಆಫರ್ ಗಳ ಭಾಗವಾಗಿರುವುದಿಲ್ಲ.

ಮಹೀಂದ್ರ ನುವೊಸ್ಪೋರ್ಟ್‌ಗೆ 57,000 ರು.ಗಳ ಭರ್ಜರಿ ಡಿಸ್ಕೌಂಟ್

ಮಹೀಂದ್ರ ನುವೊಸ್ಪೋರ್ಟ್ ಕಾಂಪಾಕ್ಟ್ ಎಸ್‌ಯುವಿ ಬೇಸ್ ವೆರಿಯಂಟ್ ಆಗಿರುವ ಎನ್4 7.35 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದ್ದು, ಟಾಪ್ ಎಂಡ್ ಎನ್8 ಮಾದರಿಯು 9.76 ಲಕ್ಷ ರು.ಗಳಷ್ಟು ದುಬಾರಿಯೆನಿಸುತ್ತದೆ.

ಮಹೀಂದ್ರ ನುವೊಸ್ಪೋರ್ಟ್‌ಗೆ 57,000 ರು.ಗಳ ಭರ್ಜರಿ ಡಿಸ್ಕೌಂಟ್

ಕಾರಿನಡಿಯಲ್ಲಿ ನೂತನ ತ್ರಿ ಸಿಲಿಂಡರ್ ಎಂಹಾಕ್ 100 ಎಂಜಿನ್ ಬಳಕೆ ಮಾಡಲಾಗಿದೆ. ಇದು 240 ಎನ್ ಎಂ ತಿರುಗುಬಲದಲ್ಲಿ 100 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ.

ಮಹೀಂದ್ರ ನುವೊಸ್ಪೋರ್ಟ್‌ಗೆ 57,000 ರು.ಗಳ ಭರ್ಜರಿ ಡಿಸ್ಕೌಂಟ್

ಸದ್ಯಕ್ಕೆ ನುವೊಸ್ಪೋರ್ಟ್ ಪೆಟ್ರೋಲ್ ಆವೃತ್ತಿಯು ಬಿಡುಗಡೆಯಾಗಿಲ್ಲ. ಆದರೆ ನಿಕಟ ಭವಿಷ್ಯದಲ್ಲೇ ಬಿಡುಗಡೆ ಮಾಡುವ ಇರಾದೆಯನ್ನು ಸಂಸ್ಥೆ ವ್ಯಕ್ತಪಡಿಸಿದೆ. ಅಂತೆಯೇ ಹೊಸ ಸ್ಕಾರ್ಪಿಯೊದ ಚಾಸೀ ಬಳಕೆ ಮಾಡಿರುವುದು ಗಮನಾರ್ಹವೆನಿಸಿದೆ. ಇದು ಅತ್ಯುತ್ತಮ ಹ್ಯಾಂಡ್ಲಿಂಗ್ ಗೆ ಸಹಕಾರಿಯಾಗಲಿದೆ.

ಮಹೀಂದ್ರ ನುವೊಸ್ಪೋರ್ಟ್‌ಗೆ 57,000 ರು.ಗಳ ಭರ್ಜರಿ ಡಿಸ್ಕೌಂಟ್

ಸಂಸ್ಥೆಯ ಪ್ರಕಾರ ನೂತನ ಮಹೀಂದ್ರ ನುವೊಸ್ಪೋರ್ಟ್ ಪ್ರತಿ ಲೀಟರ್ ಗೆ 17.45 ಕೀ. ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರುತ್ತದೆ.

Most Read Articles

Kannada
English summary
Benefits Bonanza: Mahindra Offers Big Discounts On Latest SUV
Story first published: Friday, August 26, 2016, 12:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X