ಮಾರುತಿಯನ್ನು ಬೆಂಬಿಡದೆ ಕಾಡಿದ ಅಪನಗದೀಕರಣ ಪೆಡಂಭೂತ!

Written By:

ಹಳೆಯ 500 ಮತ್ತು 1000 ರುಪಾಯಿ ನೋಟುಗಳ ಚಲಾವಣೆಯನ್ನು ರದ್ದುಗೊಳಿಸಿರುವ ಕೇಂದ್ರ ಸರಕಾರದ ನೀತಿಯು ವಾಹನ ಮಾರುಕಟ್ಟೆ ಮೇಲೆ ಕೆಟ್ಟ ಪರಿಣಾಮವನ್ನು ಬೀರಿದೆ. ಇದು ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆ ಮಾರುತಿ ಸುಜುಕಿಯನ್ನು ಬೆಂಬಿಡದೆ ಕಾಡಿದೆ.

ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆ ಆಗಿರುವ ಹೊರತಾಗಿಯೂ ಮಾರುತಿ ಸುಜುಕಿ ಕಳೆದ ವರ್ಷಕ್ಕೆ ಹೋಲಿಸಿದಾಗ ಅಕ್ಟೋಬರ್ ನಿಂದ ನವೆಂಬರ್ ತಿಂಗಳ ವರೆಗಿನ ಅವಧಿಯಲ್ಲಿ ಶೇಕಡಾ 20ರಷ್ಟು ಬುಕ್ಕಿಂಗ್ ಹಿನ್ನಡೆಕ್ಕೊಳಗಾಗಿದೆ.

ಹಾಗಿದ್ದರೂ ಎಚ್ಚೆತ್ತುಕೊಂಡ ಮಾರುತಿ ಸುಜುಕಿ ಡಿಸೆಂಬರ್ ತಿಂಗಳ ಅವಧಿಯಲ್ಲಿ ಕಳೆದ ವರ್ಷಕ್ಕಿಂತಲೂ ಬುಕ್ಕಿಂಗ್ಸ್ ನಲ್ಲಿ ಶೇಕಡಾ ಏಳರಷ್ಟು ಏರುಗತಿ ಸಾಧಿಸಿದೆ ಎಂಬುದನ್ನು ಪ್ರಕಟಿಸಿದೆ.

ಈ ವರ್ಷಾಂತ್ಯದ ವೇಳೆಯಲ್ಲಿ ಕ್ರಿಸ್ಮಸ್ ಹಾಗೂ ಹೊಸ ವರ್ಷವನ್ನು ಬರಮಾಡಿಕೊಳ್ಳಲು ಸಜ್ಜಾಗುತ್ತಿರುವ ವಾಹನ ಪ್ರೇಮಿಗಳಿಗೆ ಗರಿಷ್ಠ ಆಫರುಗಳನ್ನು ನೀಡಲಾಗುತ್ತಿದೆ. ಇದು ಮಾರಾಟದಲ್ಲಿ ಚೇತರಿಸಿಕೊಳ್ಳಲು ಮಾರುತಿಗೆ ನೆರವಾಗಿದೆ.

ಏತನ್ಮಧ್ಯೆ ಹೊಸ ವರ್ಷದಲ್ಲಿ ಕಾರು ಮಾರಾಟ ಮತ್ತೆ ಮಂಕಾಗುವ ಸಾಧ್ಯತೆಯಿದೆ. ಯಾಕೆಂದರೆ ದೇಶದ ಪ್ರಮುಖ ವಾಹನ ಸಂಸ್ಥೆಗಳು ನಿರ್ಮಾಣ ವೆಚ್ಚ ಏರಿಕೆಯಾಗಿರುವ ಹಿನ್ನಲೆಯಲ್ಲಿ 2017ನೇ ಸಾಲಿನಿಂದ ಬೆಲೆ ಏರಿಕೆ ನೀತಿಯನ್ನು ಅನುಸರಿಸಿದೆ.

ಈ ನಡುವೆ ಹೊಸ ಸಣ್ಣ ಕಾರು ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿರುವ ಮಾರುತಿ ಸುಜುಕಿ 2019 ಮಾರ್ಚ್ ವೇಳೆಯಾಗುವಾಗ ರೋಹಟಕ್ ನಲ್ಲಿರುವ ತನ್ನ ಅಧ್ಯಯನ ಹಾಗೂ ಅಭಿವೃದ್ಧಿ ಘಟಕಕ್ಕೆ ಬರೋಬ್ಬರಿ 3800 ಕೋಟಿ ರುಪಾಯಿಗಳನ್ನು ಹೂಡಿಕೆ ಮಾಡುವುದಾಗಿ ಘೋಷಿಸಿದೆ.

ಈ ಅವಧಿಯಲ್ಲಿ ಮಾರುತಿ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಕೇಂದ್ರವಾಗಿರುವ 'ಟ್ರೂ ವ್ಯಾಲ್ಯೂ' ಮಾರಾಟದಲ್ಲೂ ಕುಸಿತ ಅನುಭವಿಸಿದೆ. ಇಲ್ಲಿ ಹಣದ ಅಭಾವ ಹಾಗೂ ಹೆಚ್ಚಿನ ಬಡ್ಡಿದರ ನೇರ ಪರಿಣಾಮವನ್ನು ಬೀರಿದೆ.

ಹಾಗಿದ್ದರೂ ಎರಡಂಕಿಯ ಪ್ರಗತಿಯನ್ನು ಕಾಯ್ದುಕೊಳ್ಳುವ ನಿರೀಕ್ಷೆಯನ್ನು ಮಾರುತಿ ವ್ಯಕ್ತಪಡಿಸಿದೆ. ಈ ನಿಟ್ಟಿನಲ್ಲಿ ಪ್ರಸಕ್ತ ಆರ್ಥಿಕ ಸಾಲಿನ ಮುಂಬರುವ ಮೂರ್ನಾಲ್ಕು ತಿಂಗಳು ನಿರ್ಣಾಯಕವೆನಿಸಲಿದೆ.

ಅದೇ ಹೊತ್ತಿಗೆ ನಿಕಟ ಭವಿಷ್ಯದಲ್ಲೇ ಇಗ್ನಿಸ್ ಕಾಂಪಾಕ್ಟ್ ಕ್ರಾಸೋವರ್ ಹಾಗೂ ಶಕ್ತಿಶಾಲಿ ಬಲೆನೊ ಆರ್ ಎಸ್ ಕಾರುಗಳನ್ನು ಬಿಡುಗಡೆ ಮಾಡುವುದಾಗಿ ಮಾರುತಿ ಘೋಷಿಸಿದೆ.

English summary
Maruti bookings slump 20% in November
Please Wait while comments are loading...

Latest Photos