ಮಾರುತಿ ಸಿಯಾಝ್ ಮಿಂಚಿನ ಓಟ; 1 ಲಕ್ಷ ಯುನಿಟ್‌ಗಳ ಮಾರಾಟ

By Nagaraja

ಸೆಡಾನ್ ವಿಭಾಗದಲ್ಲೂ ತನ್ನ ಅಧಿಪತ್ಯ ಸ್ಥಾಪಿಸಿರುವ ಮಾರುತಿ ಸುಜುಕಿ ಜೈತ್ರಯಾತ್ರೆಯನ್ನು ಮುಂದುವರಿಸಿದೆ. ತಾಜಾ ವರದಿಗಳ ಪ್ರಕಾರ ಮಾರುತಿ ಸುಜುಕಿ ಸಿಯಾಝ್ ಮಧ್ಯಮ ಗಾತ್ರದ ಸೆಡಾನ್ ಕಾರು ಒಂದು ಲಕ್ಷ ಯುನಿಟ್ ಗಳ ಮಾರಾಟ ಮೈಲುಗಲ್ಲನ್ನು ದಾಟಿದೆ.

ಈ ವಿಭಾಗದಲ್ಲಿ ಹೋಂಡಾ ಸಿಟಿ ಹಾಗೂ ಹ್ಯುಂಡೈ ವೆರ್ನಾಗಳಂತಹ ಜನಪ್ರಿಯ ಮಾದರಿಗಳಿಂದ ಪೈಪೋಟಿ ಎದುರಾಗುತ್ತಿದ್ದರೂ ಇವನ್ನೆಲ್ಲ ಲೆಕ್ಕಿಸದ ಮಾರುತಿ ಸಿಯಾಝ್ ಪರಿಣಾಮಕಾರಿ ಮಾರಾಟವನ್ನು ಕಾಯ್ದುಕೊಂಡಿದೆ.

ಮಾರುತಿ ಸಿಯಾಝ್ ಮಿಂಚಿನ ಓಟ; 1 ಲಕ್ಷ ಯುನಿಟ್‌ಗಳ ಮಾರಾಟ

2014 ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆಯಾಗಿರುವ ಮಾರುತಿ ಸುಜುಕಿ ಸಿಯಾಝ್, ಪ್ರೀಮಿಯಂ ಕಾರು ವಿಭಾಗದಲ್ಲಿ ಮಾರುತಿಗೆ ಮರು ಜೀವವನ್ನು ತುಂಬಿತ್ತು. ಇದಕ್ಕೂ ಮೊದಲು ಕಿಜಾಶಿ ಹಾಗೂ ಗ್ರಾಂಡ್ ವಿಟಾರಾ ಪರಿಚಯಿಸಿತ್ತಾದರೂ ಮಾರುತಿ ವೈಫಲ್ಯ ಅನುಭವಿಸಿತ್ತು.

ಮಾರುತಿ ಸಿಯಾಝ್ ಮಿಂಚಿನ ಓಟ; 1 ಲಕ್ಷ ಯುನಿಟ್‌ಗಳ ಮಾರಾಟ

ವಿನ್ಯಾಸ, ಶೈಲಿ, ವೈಶಿಷ್ಟ್ಯ, ಆರಾಮ, ಅನುಕೂಲ, ನಿರ್ವಹಣೆ ಹೀಗೆ ಎಲ್ಲ ವಿಭಾಗದಲ್ಲೂ ಪ್ರಭಾಶಶಾಲಿ ಎನಿಸಿಕೊಂಡಿರುವ ಮಾರುತಿ ಸಿಯಾಝ್ ಕಾರಿಗೆ ಸ್ಮಾರ್ಟ್ ಹೈಬ್ರಿಡ್ ತಂತ್ರಜ್ಞಾನವು ಹೆಚ್ಚಿನ ಉತ್ತೇಜನವನ್ನು ತುಂಬಿತ್ತು.

ಮಾರುತಿ ಸಿಯಾಝ್ ಮಿಂಚಿನ ಓಟ; 1 ಲಕ್ಷ ಯುನಿಟ್‌ಗಳ ಮಾರಾಟ

ಅಷ್ಟೇ ಯಾಕೆ ಮೇ ತಿಂಗಳಲ್ಲಿ 5,188 ಯುನಿಟ್ ಗಳ ಮಾರಾಟ ದಾಖಲಿಸಿರುವ ಮಾರುತಿ ಸಿಯಾಝ್ ತನ್ನ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿತ್ತು. ಇದೇ ಅವಧಿಯಲ್ಲಿ ಹೋಂಡಾ ಸಿಟಿ 3,305 ಯುನಿಟ್ ಗಳನ್ನಷ್ಟೇ ಮಾರಾಟವನ್ನು ಕಂಡುಕೊಂಡಿತ್ತು.

ಮಾರುತಿ ಸಿಯಾಝ್ ಮಿಂಚಿನ ಓಟ; 1 ಲಕ್ಷ ಯುನಿಟ್‌ಗಳ ಮಾರಾಟ

2016ನೇ ಸಾಲಿನ ಮೊದಲೈದು ತಿಂಗಳಲ್ಲಿ ಮಾರುತಿ ಸರಾಸರಿ 5,400 ಯುನಿಟ್ ಗಳ ಮಾರಟವನ್ನು ದಾಖಲಿಸಿದೆ. ಇನ್ನೊಂದೆಡೆ ಹೋಂಡಾ ಸಿಟಿ 5,500 ಯುನಿಟ್ ಗಳ ಮಾರಾಟ ಸಾಧಿಸಿದೆ.

ಮಾರುತಿ ಸಿಯಾಝ್ ಮಿಂಚಿನ ಓಟ; 1 ಲಕ್ಷ ಯುನಿಟ್‌ಗಳ ಮಾರಾಟ

ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಮಾರುತಿ ಸುಜುಕಿ ಸಿಯಾಝ್ ಹೈಬ್ರಿಡ್ ಆವೃತ್ತಿಯ ಪ್ರವೇಶವಾಗಿತ್ತು. ತದಾ ಬಳಿಕ ಮಾರಾಟ ಏರುಗತಿಯನ್ನು ಕಂಡಿದೆ.

Most Read Articles

Kannada
English summary
Ciaz Touches 1 Lakh Units; Is This The New Sedan Segment Leader?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X