ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಟೂರ್ ಮಾರಾಟಕ್ಕೆ ಬ್ರೇಕ್ ?

ಹೊಸ ತಲೆಮಾರಿನ ಸ್ವಿಫ್ಟ್ ಡಿಜೈರ್ ಕಾರು ಆಗಮನವಾಗಲಿರುವಂತೆಯೇ ಹಳೆಯ ಡಿಜೈರ್ ಟೂರ್ ಮಾರಾಟಕ್ಕೆ ಬ್ರೇಕ್ ಬೀಳಲಿದೆ.

Written By:

ದೇಶದಲ್ಲಿ ಅತಿ ಹೆಚ್ಚು ಮಾರಾಟಗೊಳ್ಳುವ ಕಾರುಗಳಲ್ಲಿ ಅಗ್ರ ಎರಡು ಸ್ಥಾನಗಳಲ್ಲಿ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಕಾಂಪಾಕ್ಟ್ ಸೆಡಾನ್ ಕಾರು ಗುರುತಿಸಿಕೊಂಡಿದೆ. ಆದರೆ ಮಾರುಕಟ್ಟೆಯಲ್ಲಿ ಡಿಜೈರ್ ನ ಮಗದೊಂದು ಆವೃತ್ತಿ ಡಿಜೈರ್ ಟೂರ್ ಕಾರಿಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಗಿರಲಿಲ್ಲ.

ಸದ್ಯ ಹೊಸ ತಲೆಮಾರಿನ ಡಿಜೈರ್ ಕಾರಿನ ತಯಾರಿಯಲ್ಲಿರುವ ಮಾರುತಿ, 2017ನೇ ಸಾಲಿನಲ್ಲಿ ಹೊಸ ಕಾರನ್ನು ಬಿಡುಗಡೆ ಮಾಡುವ ಯೋಜನೆ ಹೊಂದಿದೆ.

ಈಗಿನ ತಲೆಮಾರಿನ ಸ್ವಿಫ್ಟ್ ಡಿಜೈರ್ ಕಾರನ್ನು 2012ರಲ್ಲಿ ಬಿಡುಗಡೆಗೊಳಿಸಲಾಗಿತ್ತು. ಡಿಜೈರ್ ಟೂರ್ ಎಂದು ಮರು ನಾಮಕರಣಗೊಂಡಿದ್ದ ಹಳೆಯ ತಲೆಮಾರಿನ ಕಾರನ್ನು ಎಕ್ಸ್ ಕ್ಲೂಸಿವ್ ಆಗಿ ಮಾರಾಟ ಮಾಡಲಾಗುತ್ತಿತ್ತು.

ಬಳಿಕ ವಾಣಿಜ್ಯ ಟ್ಯಾಕ್ಸಿ ಮಾರುಕಟ್ಟೆಯಲ್ಲಿ ಗಮನಾರ್ಹ ಮಾರಾಟ ದಾಖಲಿಸುವಲ್ಲಿ ಡಿಜೈರ್ ಟೂರ್ ಯಶ ಕಂಡಿತ್ತು. ಪ್ರತಿ ತಿಂಗಳು ಸರಾಸರಿ 3,000ದಷ್ಟು ಯುನಿಟ್ ಗಳನ್ನು ಮಾರಾಟ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

ಹಾಗಿದ್ದರೂ ಹೊಸ ತಲೆಮಾರಿನ ಡಿಜೈರ್ ಕಾರು ಆಗಮನದೊಂದಿಗೆ ಹಳೆಯ ಮಾದರಿ ಮಂಕಾಗಲಿದೆ. ಹಾಗಾಗಿ ಡಿಜೈರ್ ಟೂರ್ ಮಾರಾಟವನ್ನು 2017 ಮಾರ್ಚ್ ವೇಳೆಯಾಗುವ ಹಿಂಪಡೆಯಲು ಮಾರುತಿ ನಿರ್ಧರಿಸಿದೆ.

ಬಲ್ಲ ಮೂಲಗಳ ಪ್ರಕಾರ ಒಮ್ಮೆ ಹೊಸ ತಲೆಮಾರಿನ ಡಿಜೈರ್ ಬಿಡುಗಡೆಯಾದ ಬಳಿಕ ಇದೇ ರೀತಿಯಲ್ಲಿ ಹೊಚ್ಚ ಹೊಸ ಡಿಜೈರ್ ಟೂರ್ ಎಕ್ಸ್ ಕ್ಲೂಸಿವ್ ಕಾರು ಬಿಡುಗಡೆ ಮಾಡುವ ಯೋಚನೆ ಹೊಂದಿದೆ. ಇದು ವಾಣಿಜ್ಯ ವಿಭಾಗದಲ್ಲಿ ಮತ್ತಷ್ಟು ಮಾರಾಟ ದಾಖಲಿಸಲು ನೆರವಾಗಲಿದೆ.

ಮಾರಾಟದ ಬಗ್ಗೆ ಮೆಲುಕು ಹಾಕುವುದಾದ್ದಲ್ಲಿ 2016 ನವೆಂಬರ್ ತಿಂಗಳಲ್ಲಿ 3,017 ಯುನಿಟ್ ಗಳಷ್ಟು ಮಾರುತಿ ಡಿಜೈರ್ ಟೂರ್ ಕಾರು ಮಾರಾಟಗೊಂಡಿತ್ತು.

ಇತ್ತೇಚೆಗಷ್ಟೇ ರಿಟ್ಜ್ ಕಾರಿನ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿತ್ತು. ಈ ಮೂಲಕ ಹೆಚ್ಚು ಬೇಡಿಕೆಯಲ್ಲಿರುವ ಬಲೆನೊ, ಬ್ರಿಝಾ ಕಾರುಗಳ ನಿರ್ಮಾಣಕ್ಕೆ ಆದ್ಯತೆ ಕೊಡುವುದರತ್ತ ಸಂಸ್ಥೆಯು ದಿಟ್ಟ ಹೆಜ್ಜೆಯನ್ನಿಟ್ಟಿದೆ.

 

 

Click to compare, buy, and renew Car Insurance online

Buy InsuranceBuy Now

English summary
Maruti Suzuki To Halt Production Of Dzire Tour In India
Please Wait while comments are loading...

Latest Photos