77,000 ಬಲೆನೊ, ಡಿಜೈರ್ ಕಾರುಗಳಲ್ಲಿ ದೋಷ; ನಿಮ್ಮ ಕಾರಲ್ಲೂ ಸಮಸ್ಯೆಯಿದೆಯೇ?

By Nagaraja

ಅಚ್ಚರಿಗೊಳಿಸುವ ಬೆಳವಣಿಗೆಯೊಂದರಲ್ಲಿ ದೇಶದ ಅತಿ ದೂಡ್ಡ ಪ್ರಯಾಣಿಕ ಕಾರು ಸಂಸ್ಥೆ ಮಾರುತಿ ಸುಜುಕಿ, 77,000 ಯುನಿಟ್ ಗಳಷ್ಟು ತನ್ನ ಜನಪ್ರಿಯ ಬಲೆನೊ ಮತ್ತು ಡಿಜೈರ್ ಮಾದರಿಗಳಿಗೆ ಹಿಂದಕ್ಕೆ ಕರೆ ನೀಡಿದೆ.

ದೋಷಯುಕ್ತ ಏರ್ ಬ್ಯಾಗ್ ಮತ್ತು ಫ್ಯೂಯಲ್ ಫಿಲ್ಟರ್ ತೊಂದರೆಯ ಹಿನ್ನಲೆಯಲ್ಲಿ ಭಾರಿ ಪ್ರಮಾಣದಲ್ಲಿ ರಿಕಾಲ್ ಗೆ ಕರೆ ನೀಡಲಾಗಿದೆ ಎಂದು ಮಾರುತಿ ಸಂಸ್ಥೆಯು ಬಹಿರಂಗಪಡಿಸಿದೆ.

77,000 ಬಲೆನೊ, ಡಿಜೈರ್ ಕಾರುಗಳಲ್ಲಿ ದೋಷ; ನಿಮ್ಮ ಕಾರಲ್ಲೂ ಸಮಸ್ಯೆಯಿದೆಯೇ?

ಮಾರುತಿ ಬಲೆನೊ ಪ್ರೀಮಿಯಂ ಹ್ಯಾಚ್ ಬ್ಯಾಕ್ ಮತ್ತು ಸುಜುಕಿ ಸ್ವಿಫ್ಟ್ ಡಿಜೈರ್ ಕಾಂಪಾಕ್ಟ್ ಸೆಡಾನ್ ಕಾರುಗಳನ್ನು ಅನುಕ್ರಮವಾಗಿ 75,419 ಮತ್ತು 1961 ಯುನಿಟ್ ಗಳಷ್ಟು ಹಿಂಪಡೆಯಲಾಗಿದೆ.

77,000 ಬಲೆನೊ, ಡಿಜೈರ್ ಕಾರುಗಳಲ್ಲಿ ದೋಷ; ನಿಮ್ಮ ಕಾರಲ್ಲೂ ಸಮಸ್ಯೆಯಿದೆಯೇ?

2015 ಆಗಸ್ಟ್ 03ರಿಂದ 2016 ಮೇ 17ರ ವರೆಗೆ ನಿರ್ಮಾಣವಾದ 75,419ರಷ್ಟು ಬಲೆನೊ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳಿಗೆ ವಾಪಾಸ್ ಕರೆ ನೀಡಲಾಗಿದ್ದು, ಏರ್ ಬ್ಯಾಗ್ ಕಂಟ್ರೋಲ್ ಸಾಫ್ಟ್ ವೇರ್ ಗಳನ್ನು ಅಪ್ ಗ್ರೇಡ್ ಮಾಡಿ ಕೊಡಲಾಗುವುದು ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.

77,000 ಬಲೆನೊ, ಡಿಜೈರ್ ಕಾರುಗಳಲ್ಲಿ ದೋಷ; ನಿಮ್ಮ ಕಾರಲ್ಲೂ ಸಮಸ್ಯೆಯಿದೆಯೇ?

ಇವುಗಳ ಪೈಕಿ 2015 ಆಗಸ್ಟ್ 03ರಿಂದ 2016 ಮಾರ್ಚ್ 22ರ ವರೆಗೆ ನಿರ್ಮಾಣವಾದ 15,995 ಯುನಿಟ್ ಗಳಷ್ಟು ಬಲೆನೊ ಡೀಸೆಲ್ ಕಾರುಗಳು ಸೇರಿಕೊಂಡಿದೆ. ಇವುಗಳಲ್ಲಿ ದೋಷಯುಕ್ತ ಫ್ಯೂಯಲ್ ಫಿಲ್ಟರ್ ಗಳನ್ನು ಬದಲಾಯಿಸಿಕೊಡಲಾಗುವುದು ಎಂದಿದೆ. ಬಲೆನೊ ಕಾರುಗಳ ಪೈಕಿ ವಿದೇಶಕ್ಕೆ ರಫ್ತು ಮಾಡಿರುವ 17,231 ಯುನಿಟ್ ಗಳು ಸೇರಿಕೊಂಡಿದೆ.

77,000 ಬಲೆನೊ, ಡಿಜೈರ್ ಕಾರುಗಳಲ್ಲಿ ದೋಷ; ನಿಮ್ಮ ಕಾರಲ್ಲೂ ಸಮಸ್ಯೆಯಿದೆಯೇ?

ಇವುಗಳ ಹೊರತಾಗಿ ಆಟೋ ಗೇರ್ ಶಿಫ್ಟ್ ಹೊಂದಿರುವ ಬಾಕ್ಸ್ 1,961ರಷ್ಟು ಡಿಜೈರ್ ಡೀಸೆಲ್ ಕಾಂಪಾಕ್ಟ್ ಸೆಡಾನ್ ಮಾದರಿಗಳನ್ನು ಪರಿಶೋಧನೆಗೆ ಒಳಪಡಿಸಲಾಗುತ್ತಿದ್ದು, ದೋಷಯುಕ್ತ ಫ್ಯೂಯಲ್ ಫಿಲ್ಟರ್ ಗಳನ್ನು ಬದಲಾಯಿಸಲಾಗುವುದು ಎಂದು ಸಂಸ್ಥೆಯು ತಿಳಿಸಿದೆ.

77,000 ಬಲೆನೊ, ಡಿಜೈರ್ ಕಾರುಗಳಲ್ಲಿ ದೋಷ; ನಿಮ್ಮ ಕಾರಲ್ಲೂ ಸಮಸ್ಯೆಯಿದೆಯೇ?

ಈ ಸಂಬಂಧ ಸೂಕ್ತ ಕ್ರಮಕ್ಕೆ ಮುಂದಾಗಿರುವ ಮಾರುತಿ, 2016 ಮೇ 31ರಿಂದ ಮಾಲಿಕರನ್ನು ಡೀಲರ್ ಗಳ ಮುಖಾಂತರ ಸಂಪರ್ಕಿಸಲಿದೆ. ಇವೆಲ್ಲವನ್ನು ಸಂಪೂರ್ಣವಾಗಿ ಉಚಿತವಾಗಿ ಬಗೆಹರಿಸಿ ಕೊಡಲಾಗುವುದು.

77,000 ಬಲೆನೊ, ಡಿಜೈರ್ ಕಾರುಗಳಲ್ಲಿ ದೋಷ; ನಿಮ್ಮ ಕಾರಲ್ಲೂ ಸಮಸ್ಯೆಯಿದೆಯೇ?

ನಿಮ್ಮ ಮಾಹಿತಿಗಾಗಿ, ಕಳೆದ ವಾರವಷ್ಟೇ 20,427 ಯುನಿಟ್ ಗಳಷ್ಟು ಎಸ್ ಕ್ರಾಸ್ ಪ್ರೀಮಿಯಂ ಕ್ರಾಸೋವರ್ ಮಾದರಿಗೆ ಮಾರುತಿ ಸರ್ವಿಸ್ ಅಭಿಯಾನವನ್ನು ಹಮ್ಮಿಕೊಂಡಿತ್ತು. ಅಲ್ಲದೆ ದೋಷಯುಕ್ತ ಬ್ರೇಕ್ ಭಾಗದ ಸಮಸ್ಯೆ ಬಗೆಹರಿಸಲಾಗಿತ್ತು.

77,000 ಬಲೆನೊ, ಡಿಜೈರ್ ಕಾರುಗಳಲ್ಲಿ ದೋಷ; ನಿಮ್ಮ ಕಾರಲ್ಲೂ ಸಮಸ್ಯೆಯಿದೆಯೇ?

ಇನ್ನು ಹಿಂದಕ್ಕೆ ತಿರುಗಿ ನೋಡಿದಾಗ ಕಳೆದ ವರ್ಷ 33000ದಷ್ಟು ಆಲ್ಟೊ 800 ಮತ್ತು ಆಲ್ಟೊ ಕೆ10 ಮಾದರಿಗಳಿಗೂ ಹಿಂದಕ್ಕೆ ಕರೆ ನೀಡಲಾಗಿತ್ತು. ಇದಕ್ಕೂ ಮೊದಲು 2014ರಲ್ಲಿ 69,555ದಷ್ಟು ಡಿಜೈರ್, ರಿಟ್ಜ್, ಸ್ವಿಫ್ಟ್ ಮಾದರಿಗಳನ್ನು ರಿಕಾಲ್ ಗೆ ಒಳಪಡಿಸಿತ್ತು.

77,000 ಬಲೆನೊ, ಡಿಜೈರ್ ಕಾರುಗಳಲ್ಲಿ ದೋಷ; ನಿಮ್ಮ ಕಾರಲ್ಲೂ ಸಮಸ್ಯೆಯಿದೆಯೇ?

2012ರಲ್ಲಿ ಭಾರತೀಯ ವಾಹನ ಒಕ್ಕೂಟವು ಜಾರಿಗೆ ತಂದಿರುವ ತಾತ್ಕಾಲಿಕ ರಿಕಾಲ್ ಪದ್ಧತಿಯಂತೆ ಇದುವರೆಗೆ 18 ಲಕ್ಷದಷ್ಟು ವಾಹನಗಳನ್ನು ಹಿಂಪಡೆಯಲಾಗಿದೆ.

Most Read Articles

Kannada
English summary
Maruti Recalls 77,000 Cars — Is Your's On The List?
Story first published: Friday, May 27, 2016, 17:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X