ದೊಡ್ಡ ನ್ಯಾನೋ 'ಪೆಲಿಕನ್' ಟೆಸ್ಟಿಂಗ್; ಬಿಡುಗಡೆ, ವೈಶಿಷ್ಟಗಳೇನು?

By Nagaraja

ಟಾಟಾ ನ್ಯಾನೋ ಹೊಸ ಸ್ವರೂಪವನ್ನು ಪಡೆದುಕೊಳ್ಳುತ್ತಿರುವ ವಿಚಾರ ನಿಮಗೆಲ್ಲರಿಗೂ ತಿಳಿದೇ ಇದೆ. ಪ್ರಸ್ತುತ ಕಾರು ಟೆಸ್ಟಿಂಗ್ ವೇಳೆ ಕ್ಯಾಮೆರಾ ರಹಸ್ಯ ಕಣ್ಣಿಗೆ ಸೆರೆ ಸಿಕ್ಕಿವೆ.

ಮುಂದಿನ ಟಾಟಾ ನ್ಯಾನೋ ಕಾರು ಪೆಲಿಕನ್ ಎಂಬ ಕೋಡ್ ಪಡೆದಿದ್ದು, ಬಿಡುಗಡೆಯ ತಯಾರಿಯಲ್ಲಿದೆ. ಇದು ಈಗಿರುವ ನ್ಯಾನೋ ಜೆನ್ ಎಕ್ಸ್ ಮಾದರಿಗೆ ವಿನ್ಯಾಸ ಸಾಮ್ಯತೆಯನ್ನು ಹಂಚಿಕೊಂಡಿದೆ.

ದೊಡ್ಡ ನ್ಯಾನೋ 'ಪೆಲಿಕನ್' ಟೆಸ್ಟಿಂಗ್; ಬಿಡುಗಡೆ, ವೈಶಿಷ್ಟಗಳೇನು?

ಮುಂಭಾಗದಲ್ಲಿ ಹೊಸತಾದ ಹೆಡ್ ಲೈಟ್ ಕ್ಲಸ್ಟರ್ ಪ್ರಮುಖ ಆಕರ್ಷಣೆಯಾಗಿದೆ. ಪರಿಷ್ಕೃತ ಬಂಪರ್ ಇಲ್ಲಿನ ಹೈಲೈಟ್ ಆಗಿದೆ.

ದೊಡ್ಡ ನ್ಯಾನೋ 'ಪೆಲಿಕನ್' ಟೆಸ್ಟಿಂಗ್; ಬಿಡುಗಡೆ, ವೈಶಿಷ್ಟಗಳೇನು?

ಜೆನ್ ಎಕ್ಸ್ ನ್ಯಾನೋ ಹಾಗೂ ಟಾಟಾ ಟಿಯಾಗೊ ನಡುವೆ ಗುರುತಿಸಿಕೊಳ್ಳಲಿರುವ ಈ ಚೊಕ್ಕದಾದ ಕಾರು ಆಕಾರದಲ್ಲಿ ಇತರೆ ನ್ಯಾನೋಗಿಂತಲೂ ದೊಡ್ಡದಾಗಿದೆ.

ದೊಡ್ಡ ನ್ಯಾನೋ 'ಪೆಲಿಕನ್' ಟೆಸ್ಟಿಂಗ್; ಬಿಡುಗಡೆ, ವೈಶಿಷ್ಟಗಳೇನು?

ಹೊರಮೈಯಲ್ಲಿ 13 ಇಂಚುಗಳ ಚಕ್ರಗಳು, ಪರಿಷ್ಕೃತ ಬಂಪರ್, ಬದಲಾಯಿಸಿದ ಇಂಧನ ಪ್ರವೇಶ ದ್ವಾರ, ಫ್ರಂಟ್ ವಿಂಡ್ ಶೀಲ್ಡ್ ವಾಶ್ ಇತರ ಪ್ರಮುಖ ಬದಲಾವಣೆಯಾಗಿದೆ.

ದೊಡ್ಡ ನ್ಯಾನೋ 'ಪೆಲಿಕನ್' ಟೆಸ್ಟಿಂಗ್; ಬಿಡುಗಡೆ, ವೈಶಿಷ್ಟಗಳೇನು?

ಕಾರಿನೊಳಗೂ ಪರಿಷ್ಕೃತ ಡ್ಯಾಶ್ ಬೋರ್ಡ್ ಪ್ರಮುಖ ಆಕರ್ಣೆಯಾಗಿರಲಿದೆ. ಡ್ರೈವರ್ ನೇರ ಮುಂಭಾಗದಲ್ಲಿ ಇನ್ಸ್ರುಮೆಂಟ್ ಕ್ಲಸ್ಟರ್ ಲಗತ್ತಿಸಲಾಗುವುದು.

ದೊಡ್ಡ ನ್ಯಾನೋ 'ಪೆಲಿಕನ್' ಟೆಸ್ಟಿಂಗ್; ಬಿಡುಗಡೆ, ವೈಶಿಷ್ಟಗಳೇನು?

ಮನರಂಜನೆಗೂ ಆದ್ಯತೆ ಕೊಡಲಾಗುತ್ತಿದ್ದು, ಟಿಯಾಗೊದಲ್ಲಿರುವುದಕ್ಕೆ ಸಮಾನವಾದ ಹರ್ಮಾನ್ ಇನ್ಪೋಟೈನ್ಮೆಂಟ್ ಸಿಸ್ಟಂ ಇರಲಿದೆ. ಫ್ಯಾಬ್ರಿಕೆ ಹೋದಿಕೆ ಒಟ್ಟಾರೆ ವಿನ್ಯಾಸಕ್ಕೆ ಮೆರಗು ತುಂಬಲಿದೆ.

ದೊಡ್ಡ ನ್ಯಾನೋ 'ಪೆಲಿಕನ್' ಟೆಸ್ಟಿಂಗ್; ಬಿಡುಗಡೆ, ವೈಶಿಷ್ಟಗಳೇನು?

ನೂತನ ಟಾಟಾ ಪೆಲಿಕನ್ ದೊಡ್ಡದಾದ ತ್ರಿ ಸಿಲಿಂಡರ್ ಎಂಜಿನ್ ಗಿಟ್ಟಿಸಿಕೊಳ್ಳುವ ಸಾಧ್ಯತೆಯಿದ್ದು, 55.76ರಿಂದ 60.83 ಅಶ್ವಶಕ್ತಿ ಉತ್ಪಾದಿಸುವ ಸಾಧ್ಯತೆಯಿದೆ. ಇದು ಮ್ಯಾನುವಲ್ ಹಾಗೂ ಎಎಂಟಿ ಗೇರ್ ಬಾಕ್ಸ್ ನೊಂದಿಗೂ ಲಭ್ಯವಾಗಲಿದೆ.

ದೊಡ್ಡ ನ್ಯಾನೋ 'ಪೆಲಿಕನ್' ಟೆಸ್ಟಿಂಗ್; ಬಿಡುಗಡೆ, ವೈಶಿಷ್ಟಗಳೇನು?

ಅಂದ ಹಾಗೆ ಮುಂದಿನ ವರ್ಷದಲ್ಲಿ ಬಿಡುಗಡೆ ನಿರೀಕ್ಷೆ ಹೊಂದಿರುವ ನೂತನ ಟಾಟಾ ಪೆಲಿಕನ್, ದಟ್ಸನ್ ರೆಡಿ ಗೊ, ರೆನೊ ಕ್ವಿಡ್ ಮತ್ತು ಮಾರುತಿ ಆಲ್ಟೊ 800 ಮಾದರಿಗಳಿಗೆ ಪ್ರತಿಸ್ಪರ್ಧೆಯೊಡ್ಡಲಿದೆ.

Most Read Articles

Kannada
English summary
Tata Motors Planning To Launch All-New Nano, Spied Testing
Story first published: Thursday, September 29, 2016, 9:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X