ಹೊಸ ಸ್ವಿಫ್ಟ್ ತವರೂರಾದ ಜಪಾನ್ ಎಂಟ್ರಿಗೆ ಕ್ಷಣಗಣನೆ ಆರಂಭ

Written By:

ಜಪಾನ್ ಮೂಲದ ಪ್ರತಿಷ್ಠಿತ ವಾಹನ ಸಂಸ್ಥೆ ಸುಜುಕಿ, ಮುಂದಿನ ತಲೆಮಾರಿನ ಸ್ವಿಫ್ಟ್ ಕಾರನ್ನು ಇನ್ನೇನು ಕೆಲವೇ ಕ್ಷಣಗಳಲ್ಲಿ ಅನಾವರಣಗೊಳಿಸಲಿದೆ. ಬಲ್ಲ ಮೂಲಗಳ ಪ್ರಕಾರ ಈ ವರ್ಷಾಂತ್ಯದ ವೇಳೆಯಲ್ಲಿ ಡಿಸೆಂಬರ್ 27ರಂದು ಹೊಚ್ಚ ಹೊಸ ಸ್ವಿಫ್ಟ್ ಕಾರು ತವರೂರಾದ ಜಪಾನ್ ನಲ್ಲಿ ಪಾದಾರ್ಪಣೆಗೈಯಲಿದೆ.

ಜಗತ್ತಿನೆಲ್ಲ ಸ್ವಿಫ್ಟ್ ಅಭಿಮಾನಿಗಳು ಅದರಲ್ಲೂ ವಿಶೇಷವಾಗಿಯೂ ಭಾರತೀಯರು ಈ ಸರ್ವಕಾಲಿಕ ಶ್ರೇಷ್ಠ ಸ್ವಿಫ್ಟ್ ಕಾರಿನ ಆಗಮನವನ್ನು ಎದುರು ನೋಡುತ್ತಿದ್ದಾರೆ. ಇದು ನಿಕಟ ಭವಿಷ್ಯದಲ್ಲೇ ಭಾರತಕ್ಕೂ ಕಾಲಿಡಲಿದೆ.

ಇತ್ತೀಚೆಗಷ್ಟೇ ಸ್ವಿಫ್ಟ್ ಮಾಹಿತಿ ಕೈಪಿಡಿ ಪುಸ್ತಕವು ಲೀಕ್ ಆಗಿತ್ತು. ಇದರಲ್ಲಿ ಹೊಸ ಸ್ವಿಫ್ಟ್ ಬಗೆಗಿನ ವಿವರಗಳು ಬಯಲಾಗಿದ್ದರೂ ನೂತನ ಕಾರನ್ನು ಕಣ್ಣಾರೆ ನೋಡುವ ಅವಕಾಶ ವಾಹನ ಪ್ರೇಮಿಗಳಿಗೆ ದಕ್ಕಿರಲಿಲ್ಲ.

ಕಾರಿನ ಮುಂಭಾಗದಲ್ಲಿ ಷಡ್ಭುಜೀಯ ಗ್ರಿಲ್ ಜೊತೆ ಕ್ರೋಮ್ ಎದ್ದು ಕಾಣಿಸಲಿದೆ. ಹೊಸತಾದ ಹೆಡ್ ಲ್ಯಾಂಪ್, ಡೈಮಂಡ್ ಕಟ್ ಅಲಾಯ್ ಚಕ್ರಗಳು ಇದರಲ್ಲಿದೆ.

ಹೊಸ ಸ್ವಿಫ್ಟ್ ಕಾರು ಹಿಂದಿನ ಮಾದರಿಗಿಂತಲೂ ಶೇಕಡಾ 15ರಷ್ಟು ಕಡಿಮೆ ಭಾರವನ್ನು ಗಿಟ್ಟಿಸಿಕೊಳ್ಳಲಿದೆ. ಹಾಗೆಯೇ ಇದರ ಬಿಗಿತವು ಹಿಂದಿನ ಮಾದರಿಗಿಂತಲೂ ಶೇಕಡಾ 10ರಷ್ಟು ಹೆಚ್ಚಾಗಿದೆ.

ತಾಂತ್ರಿಕವಾಗಿಯೂ ಹೊಸ ಸ್ವಿಫ್ಟ್ ಕಾರಲ್ಲಿ ಯಾವುದೇ ಬದಲಾವಣೆ ಕಂಡುಬರುವುದಿಲ್ಲ. ಇದು 1.2 ಲೀಟರ್ ಪೆಟ್ರೋಲ್ ಮತ್ತು 1.3 ಲೀಟರ್ ಡೀಸೆಲ್ ಎಂಜಿನ್ ಗಳಿಂದ ನಿಯಂತ್ರಿಸ್ಪಡಲಿದೆ.

ಬಲೆನೊ ತಳಹದಿಯಲ್ಲಿ ನಿರ್ಮಾಣವಾಗಲಿರುವ ಹೊಸ ಸ್ವಿಫ್ಟ್ ಕಾರಲ್ಲಿ ಅತಿ ಹೆಚ್ಚು ಚರ್ಚಿತ ನೂತನ 1.0 ಲೀಟರ್ ಬೂಸ್ಟರ್ ಜೆಟ್ ಟರ್ಬೊ ಪೆಟ್ರೋಲ್ ಎಂಜಿನ್ ಜೋಡಣೆಯಾಗಲಿದೆ. ಇದು ಮುಂಬರುವ ಬಲೆನೊ ಆರ್ ಎಸ್ ಕಾರಿನಲ್ಲೂ ಲಭ್ಯವಾಗಲಿದೆ.

ಕಾರಿನೊಳಗೆ ಪರಿಷ್ಕೃತ ಸ್ಟೀರಿಂಗ್ ವೀಲ್, ಕ್ರೀಡಾತ್ಮಕ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಜೋಡಣೆಯಾಗಲಿದೆ. ಇನ್ನು ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ ಜೊತೆ ಆಪಲ್ ಕಾರ್ ಪ್ಲೇ ಹಾಗೂ ಮೈಕ್ರೋಲಿಂಕ್ ಸಂಯೋಜನೆಯು ಇರಲಿದೆ.

ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಡ್ಯುಯಲ್ ಏರ್ ಬ್ಯಾಗ್, ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ, ರಿಯರ್ ಪಾರ್ಕಿಂಗ್ ಕ್ಯಾಮೆರಾ/ಸೆನ್ಸಾರ್, ಆಲ್ ಪವರ್ ವಿಂಡೋ ಇತ್ಯಾದಿ ವೈಶಿಷ್ಟ್ಯಗಳು ಕಂಡುಬರಲಿದೆ.

Read more on ಸುಜುಕಿ suzuki
English summary
Next-Generation Suzuki Swift To Be Revealed In Japan
Please Wait while comments are loading...

Latest Photos