ಇನ್ನೋವಾ ಕ್ರೈಸ್ಟಾ ಸಾಲಿಗೆ ಬರುತ್ತಿದೆ ಮಗದೊಂದು ಸಾರಥಿ 'ವೆಂಚ್ಯುರರ್'

ಇನ್ನೋವಾ ಕ್ರೈಸ್ಟಾ ಸಾಲಿನಲ್ಲಿ ಮಗದೊಂದು ಕಾರು ಪ್ರತ್ಯಕ್ಷಗೊಂಡಿದ್ದು, ನ್ಯೂ ವೆಂಚ್ಯುರರ್ ಎಂದೆನಿಸಿಕೊಂಡಿದೆ.

By Nagaraja

ಟೊಯೊಟಾ ಇನ್ನೋವಾ ಕ್ರೈಸ್ಟಾ ದೇಶದಲ್ಲಿ ಬಿಡುಗಡೆಯಾದ ಈ ಕಿರು ಅವಧಿಯಲ್ಲೇ ಅತಿ ಹೆಚ್ಚು ಯಶಸ್ಸನ್ನು ಸಾಧಿಸಿದ್ದು, ಹೆಚ್ಚಿನ ಬೇಡಿಕೆಯನ್ನು ಕಾಪಾಡಿಕೊಂಡಿದೆ. ಪ್ರಸ್ತುತ ಇನ್ನೋವಾ ಸಾಲಿಗೀಗ ಮಗದೊಂದು ವೆರಿಯಂಟ್ ಸೇರ್ಪಡೆಗೊಳಿಸುವ ಗುರಿಯನ್ನು ಟೊಯೊಟಾ ಹೊಂದಿದೆ.

ಇನ್ನೋವಾ ಕ್ರೈಸ್ಟಾ ಸಾಲಿಗೆ ಬರುತ್ತಿದೆ ಮಗದೊಂದು ಸಾರಥಿ 'ವೆಂಚ್ಯುರರ್'

ಬಲ್ಲ ಮೂಲಗಳ ಪ್ರಕಾರ ಟೊಯೊಟಾ ಇನ್ನೋವಾ ಕ್ರೈಸ್ಟಾ ಮಗದೊಂದು ಟಾಪ್ ಎಂಡ್ ವೆರಿಯಂಟ್ ಗಿಟ್ಟಿಸಿಕೊಳ್ಳಲಿದೆ. ಇದು 'ನ್ಯೂ ವೆಂಚ್ಯುರರ್' ಎಂದು ಹೆಸರಿಸಿಕೊಳ್ಳಲಿದೆ.

ಇನ್ನೋವಾ ಕ್ರೈಸ್ಟಾ ಸಾಲಿಗೆ ಬರುತ್ತಿದೆ ಮಗದೊಂದು ಸಾರಥಿ 'ವೆಂಚ್ಯುರರ್'

ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಟೊಯೊಟಾ ಇನ್ನೋವಾ ವೆಂಚ್ಯುರರ್ ಲಭ್ಯವಾಗಲಿದೆ.

ಇನ್ನೋವಾ ಕ್ರೈಸ್ಟಾ ಸಾಲಿಗೆ ಬರುತ್ತಿದೆ ಮಗದೊಂದು ಸಾರಥಿ 'ವೆಂಚ್ಯುರರ್'

ಪ್ರಸ್ತುತ ಟೊಯೊಟಾ ಇನ್ನೋವಾ ವೆಂಚ್ಯುರರ್ ರಹಸ್ಯ ಚಿತ್ರಗಳು ನೆರೆಯ ಇಂಡೋನೇಷ್ಯಾದಲ್ಲಿ ಲೀಕ್ ಆಗಿದ್ದು, ಮುಂದಿನ ದಿನಗಳಲ್ಲಿ ಭಾರತಕ್ಕೂ ಕಾಲಿಡಲಿದೆ.

ಇನ್ನೋವಾ ಕ್ರೈಸ್ಟಾ ಸಾಲಿಗೆ ಬರುತ್ತಿದೆ ಮಗದೊಂದು ಸಾರಥಿ 'ವೆಂಚ್ಯುರರ್'

ಇಲ್ಲಿನ ಚಿತ್ರಗಳು ಸಾರುತ್ತಿರುವಂತೆಯೇ ಹೊಸ ಇನ್ನೋವಾ ವೆಂಚ್ಯುರರ್ ಹೊರಮೈಗೆ ವಿಶೇಷ ಕೆಂಪು ಬಣ್ಣವನ್ನು ಬಳಿಯಲಾಗಿದೆ. ಇದು ವಿಶಿಷ್ಟ ದೇಹ ಶೈಲಿಯನ್ನು ಕಾಪಾಡಿಕೊಂಡಿದೆ.

ಇನ್ನೋವಾ ಕ್ರೈಸ್ಟಾ ಸಾಲಿಗೆ ಬರುತ್ತಿದೆ ಮಗದೊಂದು ಸಾರಥಿ 'ವೆಂಚ್ಯುರರ್'

ಇನ್ನು ಕ್ರೋಮ್ ಸ್ಪರ್ಶವನ್ನು ಕೊಡಲಾಗಿದೆ. ಫಾಗ್ ಲ್ಯಾಂಪ್ ಸಹ ವಿಶೇಷ ಆಕರ್ಷಣೆಯನ್ನು ಪಡೆದಿದೆ.

ಇನ್ನೋವಾ ಕ್ರೈಸ್ಟಾ ಸಾಲಿಗೆ ಬರುತ್ತಿದೆ ಮಗದೊಂದು ಸಾರಥಿ 'ವೆಂಚ್ಯುರರ್'

ಅಂತೆಯೇ ಸ್ಟ್ಯಾಂಡರ್ಡ್ ವೆರಿಯಂಟ್ ಗಿಂತಲೂ ವಿಭಿನ್ನವಾದ ಬೂದು ವರ್ಣದ ಅಲಾಯ್ ಚಕ್ರ ಮತ್ತು ವಿನ್ಯಾಸವನ್ನು ಗಿಟ್ಟಿಸಿಕೊಂಡಿದೆ.

ಇನ್ನೋವಾ ಕ್ರೈಸ್ಟಾ ಸಾಲಿಗೆ ಬರುತ್ತಿದೆ ಮಗದೊಂದು ಸಾರಥಿ 'ವೆಂಚ್ಯುರರ್'

ಕಾರಿನೊಳಗೆ ಡ್ಯುಯಲ್ ಟೋನ್ ಸೀಟು ಮತ್ತು ಈಗಿನ ಮಾದರಿಗಿಂತಲೂ ಹೆಚ್ಚು ಪ್ರೀಮಿಯಂ ವೈಶಿಷ್ಟ್ಯಗಳನ್ನು ಪಡೆಯಲಿದೆ.

ಇನ್ನೋವಾ ಕ್ರೈಸ್ಟಾ ಸಾಲಿಗೆ ಬರುತ್ತಿದೆ ಮಗದೊಂದು ಸಾರಥಿ 'ವೆಂಚ್ಯುರರ್'

ಅಂದ ಹಾಗೆ ಮೊದಲು ಇಂಡೋನೇಷ್ಯಾ ಮಾರುಕಟ್ಟೆಯನ್ನು ತಲುಪಲಿರುವ ಟೊಯೊಟಾ ಇನ್ನೋವಾ ವೆಂಚ್ಯುರರ್ ತದಾ ಬಳಿಕ ಭಾರತದತ್ತ ಹೆಜ್ಜೆಯನ್ನಿಡಲಿದೆ.

Most Read Articles

Kannada
English summary
Toyota is readying a new top-spec trim called as the Innova Venturer
Story first published: Thursday, December 22, 2016, 16:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X