ಮಾರುತಿ ವಿಟಾರಾ ಬ್ರಿಝಾಗೆ ಪ್ರತಿಸ್ಪರ್ಧಿ ಕಣಕ್ಕಿಳಿಸಲಿರುವ ರೆನೊ

ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಮಾರಾಟ ವಲಯ ಹೆಚ್ಚಿಸಿಕೊಂಡಿರುವ ರೆನೊ ಸಂಸ್ಥೆಯೀಗ ತನ್ನ ದೀರ್ಘಕಾಲದ ಯೋಜನೆಯನ್ನು ಬಹಿರಂಗಪಡಿಸಿದೆ.

By Nagaraja

ಡಸ್ಟರ್ ನಂತಹ ಜನಪ್ರಿಯ ಮಾದರಿಗಳನ್ನು ಪರಿಚಯಿಸಿರುವ ಫ್ರಾನ್ಸ್ ಮೂಲದ ರೆನೊ ಸಂಸ್ಥಯೀಗ, ದೇಶದ ನಂ.1 ಕಾರು ಸಂಸ್ಥೆ ಮಾರುತಿ ಸುಜುಕಿಯ ವಿಟಾರಾ ಬ್ರಿಝಾಗೆ ಪ್ರತಿಸ್ಪರ್ಧಿಯೊಂದನ್ನು ಕಣಕ್ಕಿಳಿಸಲಿದೆ. ಬಲ್ಲ ಮೂಲಗಳ ಪ್ರಕಾರ ರೆನೊ ಕಾಂಪಾಕ್ಟ್ ಕ್ರೀಡಾ ಬಳಕೆಯ ವಾಹನವು 2019ನೇ ಸಾಲಿನಲ್ಲಿ ಮಾರುಕಟ್ಟೆಗೆ ಪ್ರವೇಶಿಸಲಿದೆ.

ಮಾರುತಿ ವಿಟಾರಾ ಬ್ರಿಝಾಗೆ ಪ್ರತಿಸ್ಪರ್ಧಿ ಕಣಕ್ಕಿಳಿಸಲಿರುವ ರೆನೊ

ನಿಕಟ ಭವಿಷ್ಯದಲ್ಲೇ ಕ್ರೀಡಾ ಬಳಕೆಯ ವಾಹನದ ಜೊತೆಗೆ ಸೆಡಾನ್ ಮತ್ತು ಬಹು ಬಳಕೆಯ ವಾಹನವನ್ನು ಬಿಡುಗಡೆ ಮಾಡುವ ಯೋಜನೆಯನ್ನು ಹೊಂದಿದೆ.

ಮಾರುತಿ ವಿಟಾರಾ ಬ್ರಿಝಾಗೆ ಪ್ರತಿಸ್ಪರ್ಧಿ ಕಣಕ್ಕಿಳಿಸಲಿರುವ ರೆನೊ

ಮಾರುತಿ ವಿಟಾರಾ ಬ್ರಿಝಾ ಜೊತೆ ಫೋರ್ಡ್ ಇಕೊಸ್ಪೋರ್ಟ್ ಗೆ ಪ್ರತಿಸ್ಪರ್ಧಿಯಾಗಿರುವ ರೆನೊ ನೂತನ ಕಾಂಪಾಕ್ಟ್ ಎಸ್ ಯುವಿ 'ಎಚ್ ಬಿಸಿ' ಎಂಬ ಕೋಡ್ ಪಡೆದುಕೊಂಡಿದೆ.

ಮಾರುತಿ ವಿಟಾರಾ ಬ್ರಿಝಾಗೆ ಪ್ರತಿಸ್ಪರ್ಧಿ ಕಣಕ್ಕಿಳಿಸಲಿರುವ ರೆನೊ

ರೆನೊ ಕ್ವಿಡ್ ಪರಿಷ್ಕೃತ ಫ್ಲ್ಯಾರ್ಟ್ ಆಗಿರುವ ಸಿಎಂಎಫ್-ಎಪ್ಲಸ್ ತಳಹದಿಯಲ್ಲಿ ಹೊಸ ಕಾರು ನಿರ್ಮಾಣವಾಗಲಿದೆ.

ಮಾರುತಿ ವಿಟಾರಾ ಬ್ರಿಝಾಗೆ ಪ್ರತಿಸ್ಪರ್ಧಿ ಕಣಕ್ಕಿಳಿಸಲಿರುವ ರೆನೊ

ಭಾರತದಲ್ಲಿ ಎಸ್ ಯುವಿ ಕಾರುಗಳಿಗೆ ಅದರಲ್ಲೂ ಪ್ರಮುಖವಾಗಿಯೂ ನಾಲ್ಕು ಮೀಟರ್ ಉದ್ದ ಪರಿಧಿಯೊಳಗಿನ ಕ್ರೀಡಾ ಬಳಕೆಯ ವಾಹನಗಳಿಗೆ ಅತಿ ಹೆಚ್ಚಿನ ಬೇಡಿಕೆಯಿದೆ.

ಮಾರುತಿ ವಿಟಾರಾ ಬ್ರಿಝಾಗೆ ಪ್ರತಿಸ್ಪರ್ಧಿ ಕಣಕ್ಕಿಳಿಸಲಿರುವ ರೆನೊ

ಸಬ್ ಕಾಂಪಾಕ್ಟ್ ಎಸ್ ಯುವಿ ಬೇಡಿಕೆಯನ್ನು ಪರಿಗಣಿಸಿರುವ ಜರ್ಮನಿಯ ಮೂಲದ ಫೋಕ್ಸ್ ವ್ಯಾಗನ್, ಭಾರತದ್ದೇ ಆಗಿರುವ ಟಾಟಾ ಸಂಸ್ಥೆ ಮತ್ತು ಜಪಾನ್ ಮೂಲದ ಹೋಂಡಾ ಸಂಸ್ಥೆಗಳು ನೂತನ ಮಾದರಿಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಮಾರುತಿ ವಿಟಾರಾ ಬ್ರಿಝಾಗೆ ಪ್ರತಿಸ್ಪರ್ಧಿ ಕಣಕ್ಕಿಳಿಸಲಿರುವ ರೆನೊ

ಫೋಕ್ಸ್ ವ್ಯಾಗನ್ ಮುಂದಿನ ತಲೆಮಾರಿನ ಪೊಲೊ ತಳಹದಿಯಲ್ಲಿ ಹಾಗೂ ಟಾಟಾ ಮೋಟಾರ್ಸ್ ಹೊಸತಾದ ನೆಕ್ಸನ್ ಮತ್ತು ಹೋಂಡಾ ಸಂಸ್ಥೆಯು ನಾವು ಈಗಾಗಲೇ ವರದಿ ಮಾಡಿರುವಂತೆಯೇ ಡಬ್ಲ್ಯುಆರ್-ವಿ ಬಿಡುಗಡೆ ಮಾಡಲಿದೆ.

ಮಾರುತಿ ವಿಟಾರಾ ಬ್ರಿಝಾಗೆ ಪ್ರತಿಸ್ಪರ್ಧಿ ಕಣಕ್ಕಿಳಿಸಲಿರುವ ರೆನೊ

ಇನ್ನೊಂದೆಡೆ ಹ್ಯುಂಡೈ ಸಂಸ್ಥೆಯು ಕ್ರೆಟಾ ಅಬ್ಬರವನ್ನು ಮುಂದುವರಿಸಲಿದ್ದು, ಮಗದೊಂದು ನಾಲ್ಕು ಮೀಟರ್ ಉದ್ದದ ಕಾರ್ಲಿನೊ ಅಥವಾ ಎಚ್ ಎನ್ ಡಿ 14 ಕಾನ್ಸೆಪ್ಟ್ ಎಸ್ ಯುವಿ ಕಾರನ್ನು ನಿರ್ಮಿಸುತ್ತಿದೆ.

ಮಾರುತಿ ವಿಟಾರಾ ಬ್ರಿಝಾಗೆ ಪ್ರತಿಸ್ಪರ್ಧಿ ಕಣಕ್ಕಿಳಿಸಲಿರುವ ರೆನೊ

ರೆನೊ ನಿರ್ಮಿಸುತ್ತಿರುವ ನೂತನ ಕಾರು ಕಾಂಪಾಕ್ಟ್ ಎಸ್ ಯುವಿ ಎಂದು ಈಗಾಗಲೇ ವಿಶ್ಲೇಷಿಸುವುದು ತಪ್ಪಾದಿತು. ಆದರೆ ಭಾರತೀಯ ವಾಹನ ನಿಯಮಗಳಿಗೆ ಅನುಸಾರವಾಗಿ ಸ್ಪರ್ಧಾತ್ಮಕ ಬೆಲೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ನೂತನ ಕಾರನ್ನು ನಾಲ್ಕು ಮೀಟರ್ ಉದ್ದ ಪರಿಧಿಯಲ್ಲಿ ನಿರ್ಮಿಸುವ ಎಲ್ಲ ಸಾಧ್ಯತೆಗಳು ಕಂಡುಬರುತ್ತಿದೆ.

ಮಾರುತಿ ವಿಟಾರಾ ಬ್ರಿಝಾಗೆ ಪ್ರತಿಸ್ಪರ್ಧಿ ಕಣಕ್ಕಿಳಿಸಲಿರುವ ರೆನೊ

ಹ್ಯುಂಡೈ ಎಂಪಿವಿ ಕ್ರಾಸೋವರ್ ಕಾರನ್ನು 2018ರಲ್ಲಿ ನಿರೀಕ್ಷೆ ಮಾಡಬಹುದಾಗಿದ್ದು, ತದಾ ಬಳಿಕ 2019ರಲ್ಲಿ ಎಸ್ ಯುವಿ ಆಗಮನವಾಗಲಿದೆ. ಇದಾದ ಮುಂದಿನ ವರ್ಷದಲ್ಲಿ ಅಂದರೆ 2010ರಲ್ಲಿ ಸೆಡಾನ್ ಕಾರಿನ ಪ್ರವೇಶವಾಗಲಿದೆ.

Most Read Articles

Kannada
Read more on ರೆನೊ renault
English summary
Renault To Bring New Compact SUV To Rival Maruti Suzuki Vitara Brezza
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X