ರೆನೊ ಕ್ವಿಡ್ ಎಎಂಟಿ ಕಾರು ಟೆಸ್ಟಿಂಗ್; ಬಿಡುಗಡೆ ಯಾವಾಗ?

By Nagaraja

2016 ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಂಡಿರುವ ರೆನೊ ಕ್ವಿಡ್ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ (ಎಎಂಟಿ) ಮಾದರಿಯ ಚಾಲನಾ ಪರೀಕ್ಷೆಯನ್ನು ಫ್ರಾನ್ಸ್ ಮೂಲದ ಸಂಸ್ಥೆಯು ಆರಂಭಿಸಿದೆ. ಇದರಂತೆ ರೆನೊ ಸಂಸ್ಥೆಯ ಘಟಕ ಸ್ಥಿತಗೊಂಡಿರುವ ಚೆನ್ನೈ ನಗರದಲ್ಲಿ ನೂತನ ರೆನೊ ಕ್ವಿಡ್ ಎಎಂಟಿ ಕಾರಿನ ಸಂಚಾರ ಪ್ರಯೋಗದ ವೇಳೆ ಕ್ಯಾಮೆರಾ ರಹಸ್ಯ ಕಣ್ಣುಗಳಿಗೆ ಸೆರೆ ಸಿಕ್ಕಿದೆ.

ನಿಮಗೆಲ್ಲರಿಗೂ ತಿಳಿದಿರುವಂತೆಯೇ ರೆನೊ ಎಎಂಟಿ ಕಾರಿನಲ್ಲಿ 'ಈಸಿ-ಆರ್' ಗೇರ್ ಬಾಕ್ಸ್ ಬಳಕೆ ಮಾಡಲಾಗಿದೆ. ಇದು ಹೆಚ್ಚು ಶಕ್ತಿಶಾಲಿ 1.0 ಲೀಟರ್ ಎಂಜಿನ್ ಪಡೆದುಕೊಳ್ಳುವುದು ಮಗದೊಂದು ವಿಶೇಷ.

ರೆನೊ ಕ್ವಿಡ್ ಎಎಂಟಿ ಕಾರು ಟೆಸ್ಟಿಂಗ್

ಕಳೆದ ವರ್ಷ ಮಾರುಕಟ್ಟೆಗೆ ಪ್ರವೇಶಿಸಿರುವ ಎಸ್ ಯುವಿ ಶೈಲಿಯ ಕ್ವಿಡ್ ಕಾರಿ ಭಾರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದು ಮಾರುತಿ ಆಲ್ಟೊ ಯಶಸ್ಸಿನ ಓಟಕ್ಕೆ ಹೊಡೆತ ನೀಡುವಲ್ಲಿ ಯಶ ಕಂಡಿದೆ.

ರೆನೊ ಕ್ವಿಡ್ ಎಎಂಟಿ ಕಾರು ಟೆಸ್ಟಿಂಗ್

ಈಗ ತನ್ನ ಶ್ರೇಣಿಯ ಕಾರುಗಳನ್ನು ವಿಸ್ತರಿಸುವ ಯೋಜನೆಯಲ್ಲಿರುವ ರೆನೊ, ಕ್ವಿಡ್ ಎಎಂಟಿ ಕಾರನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ. ಇದು ಕಡಿಮೆ ಬೆಲೆಯಲ್ಲಿ ದೊರಕಲಿರುವ ಎಎಂಟಿ ಎಂದೆನಿಸಿಕೊಳ್ಳಲಿದೆ.

ರೆನೊ ಕ್ವಿಡ್ ಎಎಂಟಿ ಕಾರು ಟೆಸ್ಟಿಂಗ್

ಭಾರತ ಮಾರುಕಟ್ಟೆಯಲ್ಲಿ ರೆನೊ ಎಎಂಟಿ ಮಾದರಿಯು ಮಾರುತಿಯ ಜನಪ್ರಿಯ ಆಲ್ಟೊ ಕೆ10 ಎಎಂಟಿ ಮಾದರಿಗೆ ಪ್ರತಿಸ್ಪರ್ಧಿಯನ್ನು ಒಡ್ಡಲಿದೆ.

ರೆನೊ ಕ್ವಿಡ್ ಎಎಂಟಿ ಕಾರು ಟೆಸ್ಟಿಂಗ್

ನೂತನ ರೆನೊ ಕ್ವಿಡ್ ಕಾರಿನಲ್ಲಿ 1.0 ಲೀಟರ್ ಸ್ಮಾರ್ಟ್ ಕಂಟ್ರೋಲ್ ಎಫಿಸಿಯನ್ಸಿ (ಎಸ್ ಸಿಇ) ಆಳವಡಿಕೆಯಾಗಲಿದೆ. ಅಲ್ಲದೆ ಶಿಫ್ಟ್ ಕಂಟ್ರೋಲ್ ಡಯಲ್ ಎಂಬ ರೀತಿಯಲ್ಲಿ ರಿವರ್ಸ್, ನ್ಯೂಟ್ರಲ್ ಮತ್ತು ಡ್ರೈವ್ ಗಳೆಂಬ ಮೂರು ಚಾಲನಾ ವಿಧಗಳು ಇರಲಿದೆ.

ಏನಿದು ಈಸಿ-ಆರ್ ಎಎಂಟಿ ಗೇರ್ ಬಾಕ್ಸ್

ಏನಿದು ಈಸಿ-ಆರ್ ಎಎಂಟಿ ಗೇರ್ ಬಾಕ್ಸ್

ಸಾಂಪ್ರದಾಯಿಕ ಗೇರ್ ಲಿವರ್ ಗಳಿಗಿಂತ ವಿಭಿನ್ನವಾಗಿ ಇದು ವೃತ್ತಾಕಾರದಲ್ಲಿದ್ದು, ತಿರುಗಿಸುವ ಮೂಲಕ ಚಾಲನಾ ವಿಧಗಳನ್ನು ಬದಲಾಯಿಸಬಹುದಾಗಿದೆ. ಇದು ನ್ಯೂಟ್ರಲ್, ಡ್ರೈವ್ ಅಥವಾ ರಿವರ್ಸ್ ಚಾಲನಾ ವ್ಯವಸ್ಥೆಗಳನ್ನು ಪಡೆದಿದೆ.

ರೆನೊ ಕ್ವಿಡ್ ಎಎಂಟಿ ಕಾರು ಟೆಸ್ಟಿಂಗ್

ಅಂತಿಮವಾಗಿ ನೂತನ ರೆನೊ ಕ್ವಿಡ್ ಬಿಡುಗಡೆ ಬಗ್ಗೆ ಅಧಿಕೃತ ಮಾಹಿತಿಗಳು ಇನ್ನಷ್ಟೇ ಹೊರಬರಬೇಕಿದೆ. ಇದು ಪ್ರಸಕ್ತ ಸಾಲಿನ ದ್ವಿತಿಯಾರ್ಧದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

Most Read Articles

Kannada
English summary
Renault Kwid AMT Caught Testing In Chennai Ahead Of Launch
Story first published: Monday, May 2, 2016, 16:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X