ರೆನೊ ಕೊಲಿಯೊಸ್, ಫ್ಲೂಯೆನ್ಸ್ ಮೂಲೆ ಗುಂಪು ?

Written By:

ಕಳಪೆ ಮಾರಾಟವನ್ನು ಎದುರಿಸುತ್ತಿರುವ ಕೊಲಿಯೊಸ್ ಮತ್ತು ಫ್ಲೂಯೆನ್ಸ್ ಕಾರುಗಳಿಗೆ ಬ್ರೇಕ್ ಹಾಕಲು ಫ್ರಾನ್ಸ್ ಮೂಲದ ರೆನೊ ಸಂಸ್ಥೆ ನಿರ್ಧರಿಸಿದೆ. ಈ ಸಂಬಂಧ ಬಂದಿರುವ ವರದಿಗಳ ಪ್ರಕಾರ ಈ ಎರಡು ಕಾರುಗಳ ಮಾರಾಟ ಸದ್ಯದಲ್ಲೇ ನಿಲುಗಡೆಗೊಳ್ಳಲಿದೆ.

ಇನ್ನು ಮುಂದೆ ಸೆಮಿ ನೌಕ್ಡ್ ಡೌನ್ ಮೂಖಾಂತರ ದೇಶವನ್ನು ತಲುಪಿದ ಕಾರುಗಳನ್ನು ದೇಶದಲ್ಲಿ ಮಾರಾಟ ಮಾಡದಿರಲು ರೆನೊ ನಿರ್ಧರಿಸಿದೆ.

ಭಾರತದಲ್ಲಿ ದೇಶೀಯ ನಿರ್ಮಾಣಕ್ಕೆ ಉತ್ತೇಜನ ನೀಡುವ ಮೂಲಕ ಸ್ಪರ್ಧಾತ್ಮಕ ಬೆಲೆಗಳಲ್ಲಿ ಹೆಚ್ಚು ಜನಪ್ರಿಯ ಮಾದರಿಗಳನ್ನು ತಲುಪಿಸುವುದು ರೆನೊ ಉದ್ದೇಶವಾಗಿದೆ.

ಭಾರತದಲ್ಲಿ ಶೇಕಡಾ 80ರಷ್ಟು ನಿರ್ಮಾಣ ಕಾರ್ಯವನ್ನು ಸ್ಥಳೀಯವಾಗಿಸುವುದು ರೆನೊ ಉದ್ದೇಶವಾಗಿದೆ. ರೆನೊ ಕ್ವಿಡ್ ಯಶಸ್ಸನ್ನು ನೀವಿಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

ಶೇಕಡಾ 95ರಷ್ಟು ದೇಶೀಯವಾಗಿ ನಾಲ್ಕು ಮೀಟರ್ ಉದ್ದ ಪರಿಧಿಯಲ್ಲಿ ಗ್ರಾಹಕರಿಗೆ ಮನ ಮೆಚ್ಚುವ ಆಕರ್ಷಕ ಕಾರು ನಿರ್ಮಾಣ ಮಾಡುವ ಗುರಿಯನ್ನಿಟ್ಟುಕೊಂಡಿದೆ.

ಭಾರತದಲ್ಲಿ ಹೆಚ್ಚು ಜನಪ್ರಿಯತೆ ಸಾಧಿಸಿರುವ ಮಾದರಿಗಳಿಗೆ ಪ್ರೋತ್ಸಾಹ ನೀಡಲಾಗುವುದು. ಅಂದರೆ ಎಸ್ ಕೆಡಿ ಮುಖಾಂತರ ದೇಶವನ್ನು ತಲುಪಿರುವ ಫ್ಲೂಯೆನ್ಸ್ ಮತ್ತು ಕೊಲಿಯೊಸ್ ಕಾರುಗಳು ಮೂಲೆ ಗುಂಪಾಗಲಿದೆ.

ಶೇಕಡಾ 80ರಷ್ಟು ದೇಶೀಯವಾಗಿ ನಿರ್ಮಾಣದ ಹೊರತು ಕೊಲಿಯೊಸ್ ಮತ್ತು ಫ್ಲೂಯೆನ್ಸ್ ಮಾರಾಟಕ್ಕೆ ರೆನೊ ಉತ್ತೇಜನ ನೀಡಲ್ಲ.

ರೆನೊ ಕ್ವಿಡ್ ನಿರ್ಮಾಣದಲ್ಲಿ ಶೇಕಡಾ 98ರಷ್ಟು ಸ್ಥಳೀಯವಾಗಿಸಿತ್ತಲ್ಲದೆ ಸ್ಪರ್ಧಾತ್ಮಕ ಬೆಲೆ ಕಾಪಾಡಿಕೊಳ್ಳುವ ಮೂಲಕ ಗರಿಷ್ಠ ಮಾರಾಟವನ್ನು ದಾಖಲಿಸಿದೆ.

ಕಳೆದ ಜುಲೈ ತಿಂಗಳಿಂದ ಪ್ರತಿ ತಿಂಗಳು ದೇಶದ ಟಾಪ್ 10 ಅಗ್ರ ಮಾರಾಟದ ಕಾರುಗಳಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವ ಕ್ವಿಡ್ ಕಳೆದ ತಿಂಗಳಲ್ಲಿ 7847 ಯುನಿಟ್ ಗಳ ಮಾರಾಟವನ್ನು ದಾಖಲಿಸಿತ್ತು.

ಕ್ವಿಡ್ ನೆರವಿನೊಂದಿಗೆ ಜಾಗತಿಕ ಮಟ್ಟದಲ್ಲಿ ರೆನೊ ಇಂಡಿಯಾವು 18ರಿಂದ ಏಳನೇ ಸ್ಥಾನಕ್ಕೇರಿದೆ. ರೆನೊ ಇಂಡಿಯಾವು ಎಪ್ರಿಲ್ ನಿಂದ ನವೆಂಬರ್ ತಿಂಗಳ ವರೆಗೆ 91,702 ಯುನಿಟ್ ಗಳ ಮಾರಾಟವನ್ನು ಕಂಡಿದೆ.

ಅಂದ ಹಾಗೆ ಫ್ರಾನ್ಸ್, ಇಟಲಿ ಮತ್ತು ಜರ್ಮನಿ ರೆನೊ ಪಾಲಿಗೆ ಅಗ್ರ ಮೂರು ಮಾರಾಟದ ಕೇಂದ್ರವೆನಿಸಿಕೊಂಡಿದೆ. ಈಗ ಭಾರತವನ್ನು ಅಗ್ರ ಐದನೇ ಸ್ಥಾನಕ್ಕೇರಿಸುವುದು ರೆನೊ ಗುರಿಯಾಗಿದೆ.

ಅದೇ ಹೊತ್ತಿಗೆ ಮಾರುತಿ ಸುಜುಕಿ ವಿಟಾರಾ ಬ್ರಿಝಾ ಮತ್ತು ಫೋರ್ಡ್ ಇಕೊಸ್ಪೋರ್ಟ್ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ನೂತನ ಕಾಂಪಾಕ್ಟ್ ಕ್ರೀಡಾ ಬಳಕೆಯ ವಾಹನವನ್ನು ಬಿಡುಗಡೆ ಮಾಡುವ ಯೋಜನೆಯನ್ನು ರೆನೊ ಹೊಂದಿದೆ.

ಮುಂದಿನ ಐದು ವರ್ಷಗಳ ಅವಧಿಯಲ್ಲಿ ವರ್ಷಕ್ಕೊಂದು ಕಾರನ್ನು ಬಿಡುಗಡೆ ಮಾಡುವುದು ರೆನೊ ಗುರಿಯಾಗಿದೆ. ಹಾಗೆಯೇ ಮುಂದಿನ ಮೂರು ವರ್ಷಗಳಲ್ಲಿ 3000 ಕೋಟಿ ರುಪಾಯಿಗಳನ್ನು ಹೂಡಿಕೆ ಮಾಡಲಿದೆ.

Click to compare, buy, and renew Car Insurance online

Buy InsuranceBuy Now

Read more on ರೆನೊ renault
English summary
Renault Plans To Discontinue Koleos And Fluence In India; To Focus On Locally Produced Vehicles
Please Wait while comments are loading...

Latest Photos