ಟಾಟಾ ಕ್ಸೆನಾನ್ ಪರಿಷ್ಕೃತ ಕ್ಸೆನಾನ್ ಟೆಸ್ಟಿಂಗ್ ವೇಳೆ ಪತ್ತೆ

ಟಾಟಾ ಕ್ಸೆನಾನ್ ಗೆ ಉಪಯುಕ್ತ ವಾಹು ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ವ್ಯಕ್ತವಾಗುವ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ.

By Nagaraja

ಟಾಟಾ ಕ್ಸೆನಾನ್ ಪರಿಷ್ಕೃತ ಆವೃತ್ತಿಯು ಸದ್ಯದಲ್ಲೇ ಮಾರುಕಟ್ಟೆಗೆ ಅಪ್ಪಳಿಸಲಿದೆ. ಇದರಂತೆ ಟೆಸ್ಟಿಂಗ್ ಪ್ರಕ್ರಿಯೆ ಭರದಿಂದ ನಡೆಯುತ್ತಿದೆ. ಟಾಟಾ ಕ್ಸೆನಾನ್ ಪರಿಷ್ಕೃತ ಆವೃತ್ತಿಯು ಆಟೋಮ್ಯಾಟಿಕ್ ಗೇರಾ ಬಾಕ್ಸ್ ಪಡೆಯಲಿದೆಯೆಂಬುದು ಸದ್ಯದ ಹಾಟ್ ಸುದ್ದಿಯಾಗಿದೆ.

ಟಾಟಾ ಕ್ಸೆನಾನ್ ಪರಿಷ್ಕೃತ ಕ್ಸೆನಾನ್ ಟೆಸ್ಟಿಂಗ್ ವೇಳೆ ಪತ್ತೆ

ಇದೀಗಷ್ಟೇ ಸ್ಕಾರ್ಪಿಯೊ ತಳಹದಿಯಲ್ಲಿ ಮಹೀಂದ್ರ ನಿರ್ಮಿಸುತ್ತಿರುವ ನೂತನ ಜೀವನ ಶೈಲಿ ಗಾಡಿಯು ಟೆಸ್ಟಿಂಗ್ ವೇಳೆ ಸೆರೆ ಹಿಡಿಯಲಾಗಿತ್ತು. ಟಾಟಾದ ನೂತನ ಗಾಡಿಯು ಇದಕ್ಕೆ ಪ್ರತಿಸ್ಪರ್ಧಿಯಾಗುವ ಸಾಧ್ಯತೆಯಿದೆ.

ಟಾಟಾ ಕ್ಸೆನಾನ್ ಪರಿಷ್ಕೃತ ಕ್ಸೆನಾನ್ ಟೆಸ್ಟಿಂಗ್ ವೇಳೆ ಪತ್ತೆ

ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಬಿಡುಗಡೆ ನಿರೀಕ್ಷೆ ಹೊಂದಿರುವ ಟಾಟಾ ಮೋಟಾರ್ಸ್, ಪ್ರಯಾಣಿಕ ವಾಹನ ವಿಭಾಗಕ್ಕೆ ಹೊಸ ಆಯಾಮವನ್ನು ತುಂಬಲಿದೆ.

ಟಾಟಾ ಕ್ಸೆನಾನ್ ಪರಿಷ್ಕೃತ ಕ್ಸೆನಾನ್ ಟೆಸ್ಟಿಂಗ್ ವೇಳೆ ಪತ್ತೆ

ಟಾಟಾ ಕ್ಸೆನಾನ್ ಫೇಸ್ ಲಿಫ್ಟ್ ಜೊತೆಗೆ ಫೋರ್ಡ್ ರೇಂಜರ್ ಪಿಕಪ್ ಸಹ ಟೆಸ್ಟಿಂಗ್ ವೇಳೆಯಲ್ಲಿ ಪತ್ತೆಯಾಗಿದೆ. ಈ ಪೈಕಿ ಫೋರ್ಡ್ ರೇಂಜರ್ ಒಂದು ಜಾಗತಿಕ ಉತ್ಪನ್ನವಾಗಿದೆ.

ಟಾಟಾ ಕ್ಸೆನಾನ್ ಪರಿಷ್ಕೃತ ಕ್ಸೆನಾನ್ ಟೆಸ್ಟಿಂಗ್ ವೇಳೆ ಪತ್ತೆ

ಟಾಟಾ ಸಹ ಜಾಗತಿಕ ಮಾರುಕಟ್ಟೆಯನ್ನು ಗುರಿ ಮಾಡುವ ಎಲ್ಲ ಸಾಧ್ಯತೆಗಳಿವೆ. ಇದು ಮೊದಲು ಭಾರತ ಮಾರುಕಟ್ಟೆಯನ್ನು ಮುಂದಿನ ವರ್ಷದಲ್ಲಿ ತಲುಪಲಿದೆ.

ಟಾಟಾ ಕ್ಸೆನಾನ್ ಪರಿಷ್ಕೃತ ಕ್ಸೆನಾನ್ ಟೆಸ್ಟಿಂಗ್ ವೇಳೆ ಪತ್ತೆ

ಮುಂಭಾಗದಲ್ಲಿ ಪರಿಷ್ಕೃತ ಗ್ರಿಲ್, ಹೊಸತಾದ ಫ್ರಂಟ್ ಬಂಪರ್ ಮತ್ತು ಪರಿಷ್ಕೃತ ಫಾಗ್ ಲ್ಯಾಂಪ್ ಗಳನ್ನು ಪಡೆದಿದೆ. ಒಟ್ಟಾರೆಯಾಗಿ ಆಕ್ರಮಣಕಾರಿ ವಿನ್ಯಾಸ ನೀತಿ ಅನುಸರಿಸಲಾಗಿದೆ.

ಟಾಟಾ ಕ್ಸೆನಾನ್ ಪರಿಷ್ಕೃತ ಕ್ಸೆನಾನ್ ಟೆಸ್ಟಿಂಗ್ ವೇಳೆ ಪತ್ತೆ

ಕಾರಿನೊಳಗೆ ಒಂದು ಪ್ರಯಾಣಿಕ ಕಾರಿನಲ್ಲಿ ದೊರಕುವ ಎಲ್ಲ ಸೌಲಭ್ಯಗಳನ್ನು ನೀಡಲು ಟಾಟಾ ಗಮನ ಕೇಂದ್ರಿಕರಿಸಿದೆ. ತನ್ಮೂಲಕ ಆರಾಮದಾಯಕ ಪ್ರಯಾಣವನ್ನು ಖಾತ್ರಿಪಡಿಸಲಾಗುವುದು.

ಟಾಟಾ ಕ್ಸೆನಾನ್ ಪರಿಷ್ಕೃತ ಕ್ಸೆನಾನ್ ಟೆಸ್ಟಿಂಗ್ ವೇಳೆ ಪತ್ತೆ

ಹೊಸತಾದ ಹೈಡ್ರೋಫಾರ್ಮ್ಡ್ ಚಾಸೀ ತಳಹದಿಯಲ್ಲಿ ಟಾಟಾ ಕ್ಸೆನಾನ್ ನಿರ್ಮಿಸಲಾಗಿದ್ದು, ನಗರ ಪ್ರದೇಶದ ಗ್ರಾಹಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ನೀಡಲಾಗಿದೆ.

ಟಾಟಾ ಕ್ಸೆನಾನ್ ಪರಿಷ್ಕೃತ ಕ್ಸೆನಾನ್ ಟೆಸ್ಟಿಂಗ್ ವೇಳೆ ಪತ್ತೆ

ಹಾಗಿದ್ದರೂ ಎಂಜಿನ್ ತಾಂತ್ರಿಕತೆಯಲ್ಲಿ ಯಾವುದೇ ಬದಲಾವಣೆಗಳು ಕಂಡುಬರುವುದಿಲ್ಲ. ಇದರಲ್ಲಿರುವ 2.2 ಲೀಟರ್ ಫೋರ್ ಸಿಲಿಂಡರ್ ವ್ಯಾರಿಕೋರ್ ಎಂಜಿನ್ 320 ಎನ್ ಎಂ ತಿರುಗುಬಲದಲ್ಲಿ 147 ಅಶ್ವಶಕ್ತಿ ಉತ್ಪಾದಿಸಲಿದೆ. ನೂತನ ಕ್ಸೆನಾನ್ ಮಗದೊಂದು ಎಂಜಿನ್ ಟ್ಯೂನ್ ಪಡೆಯಲಿದ್ದು, 400 ಎನ್ ಎಂ ತಿರುಗುಬಲದಲ್ಲಿ 156 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರಲಿದೆ.

Most Read Articles

Kannada
English summary
Spotted: Tata Xenon Facelift With Automatic Transmission
Story first published: Thursday, October 20, 2016, 10:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X