ಇನ್ನೋವಾ ಕ್ರೈಸ್ಟಾಗೆ ಸವಾಲೊಡ್ಡಲು ಜ. 18ರಂದು ಬರುತ್ತಿದೆ ಟಾಟಾ ಹೆಕ್ಸಾ

ಟಾಟಾ ಹೆಕ್ಸಾ ಬಹು ನಿರೀಕ್ಷಿತ ಕ್ರಾಸೋವರ್ ಕ್ರೀಡಾ ಬಳಕೆಯ ವಾಹನವು 2017 ಜನವರಿ 18ರಂದು ಬಿಡುಗಡೆಯಾಗಲಿದೆ.

By Nagaraja

ಬಹುನಿರೀಕ್ಷಿತ ಟಾಟಾ ಹೆಕ್ಸಾ ಕ್ರಾಸೋವರ್ ಕ್ರೀಡಾ ಬಳಕೆಯ ವಾಹನವು ಮುಂಬರುವ 2017 ಜನವರಿ 18ರಂದು ಬಿಡುಗಡೆಯಾಗುವ ಸಾಧ್ಯತೆಗಳಿವೆ. ಈ ಹಿಂದೆ ಟಾಟಾ ಹೆಕ್ಸಾ ಜ.16ರಂದು ಬಿಡುಗಡೆಯಾಗುವ ಬಗ್ಗೆ ಸೂಚನೆಗಳಿದ್ದವು. ಹಾಗಿದ್ದರೂ ಅಧಿಕೃತ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.

ಇನ್ನೋವಾ ಕ್ರೈಸ್ಟಾಗೆ ಸವಾಲೊಡ್ಡಲು ಜ. 18ರಂದು ಬರುತ್ತಿದೆ ಟಾಟಾ ಹೆಕ್ಸಾ

ಟಾಟಾ ಆರಿಯಾ ತಳಹದಿಯಲ್ಲಿ ನಿರ್ಮಾಣವಾಗಿರುವ ಟಾಟಾ ಹೆಕ್ಸಾ ಆರು ಅತ್ಯಾಕರ್ಷಕ ವೆರಿಯಂಟ್ ಗಳಲ್ಲಿ ಲಭ್ಯವಾಗಲಿದೆ.

ಟಾಟಾ ಹೆಕ್ಸಾ ವೆರಿಯಂಟ್ ವಿವರ

ಟಾಟಾ ಹೆಕ್ಸಾ ವೆರಿಯಂಟ್ ವಿವರ

ಎಕ್ಸ್ ಇ, ಎಕ್ಸ್ ಎಂ, ಎಕ್ಸ್ ಎಂಎ, ಎಕ್ಸ್ ಟಿ, ಎಕ್ಸ್ ಟಿ (4x4), ಎಕ್ಸ್ ಟಿಎ.

ಇನ್ನೋವಾ ಕ್ರೈಸ್ಟಾಗೆ ಸವಾಲೊಡ್ಡಲು ಜ. 18ರಂದು ಬರುತ್ತಿದೆ ಟಾಟಾ ಹೆಕ್ಸಾ

ಈ ಪೈಕಿ ಎಕ್ಸ್ ಇ, ಎಕ್ಸ್ ಎಂ, ಎಕ್ಸ್ ಎಂಎ ಆವೃತ್ತಿಗಳು ಏಳು ಸೀಟು ಮತ್ತು ಎಕ್ಸ್ ಟಿ (4x4) ಮತ್ತು ಎಕ್ಸ್ ಟಿಎ ವೆರಿಯಂಟ್ ಗಳು ಆರು ಸೀಟು ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಈ ಪೈಕಿ ಎರಡನೇ ಸಾಲಿನಲ್ಲಿ ಕ್ಯಾಪ್ಟನ್ ಸೀಟುಗಳ ಸೇವೆ ಇರಲಿದೆ.

ಇನ್ನೋವಾ ಕ್ರೈಸ್ಟಾಗೆ ಸವಾಲೊಡ್ಡಲು ಜ. 18ರಂದು ಬರುತ್ತಿದೆ ಟಾಟಾ ಹೆಕ್ಸಾ

2.2 ವ್ಯಾರಿಕೋರ್ ಡೀಸೆಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಟಾಟಾ ಹೆಕ್ಸಾ 400 ಎನ್ ಎಂ ತಿರುಗುಬಲದಲ್ಲಿ 154 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ ಆರು ಸ್ಪೀಡ್ ಮ್ಯಾನುವಲ್ ಹಾಗೂ ಆಟೋ ಗೇರ್ ಬಾಕ್ಸ್ ಲಭ್ಯವಿರುತ್ತದೆ.

ಇನ್ನೋವಾ ಕ್ರೈಸ್ಟಾಗೆ ಸವಾಲೊಡ್ಡಲು ಜ. 18ರಂದು ಬರುತ್ತಿದೆ ಟಾಟಾ ಹೆಕ್ಸಾ

ಇನ್ನು ಎಕ್ಸ್ ವೆರಿಯಂಟ್ 2.2 ಲೀಟರ್ ಡೀಸೆಲ್ ಎಂಜಿನ್ ಗಿಟ್ಟಿಸಿಕೊಳ್ಳಲಿದ್ದು, 320 ಎನ್ ಎಂ ತಿರುಗುಬಲದಲ್ಲಿ 148 ಅಶ್ವಶಕ್ತಿ ಉತ್ಪಾದಿಸಲಿದೆ. ಹಾಗೆಯೇ ಐದು ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

ಇನ್ನೋವಾ ಕ್ರೈಸ್ಟಾಗೆ ಸವಾಲೊಡ್ಡಲು ಜ. 18ರಂದು ಬರುತ್ತಿದೆ ಟಾಟಾ ಹೆಕ್ಸಾ

ಎಂಪಿವಿ ಹಾಗೂ ಎಸ್ ಯುವಿ ಸಾನಿಧ್ಯ, ಪ್ರೊಜೆಕ್ಟರ್ ಹೆಡ್ ಲ್ಯಾಂಪ್, ಡೇಟೈಮ್ ರನ್ನಿಂಗ್ ಲೈಟ್ಸ್, ಕ್ರೋಮ್ ಸ್ಪರ್ಶತೆ, ಲೆಥರ್ ಹೋದಿಕೆ, 10 ಸ್ಪೀಕರ್ ಜೆಬಿಎಲ್ ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ ಮತ್ತು ಕೂಲ್ಡ್ ಗ್ಲೋಬ್ ಬಾಕ್ಸ್ ಸೇವೆಗಳಿರಲಿದೆ.

ಇನ್ನೋವಾ ಕ್ರೈಸ್ಟಾಗೆ ಸವಾಲೊಡ್ಡಲು ಜ. 18ರಂದು ಬರುತ್ತಿದೆ ಟಾಟಾ ಹೆಕ್ಸಾ

ಭಾರತದಲ್ಲಿ ಟಾಟಾ ಹೆಕ್ಸಾ 18 ಲಕ್ಷ ರುಪಾಯಿಗಳಷ್ಟು ದುಬಾರಿಯೆನಿಸುವ ಸಾಧ್ಯತೆಗಳಿವೆ. ಇದು ಇನ್ನೋವಾ ಕ್ರೈಸ್ಟಾ ಹಾಗೂ ಮಹೀಂದ್ರ ಎಕ್ಸ್ ಯುವಿ500 ಮುಂತಾದ ಮಾದರಿಗಳಿಗೆ ಪ್ರತಿಸ್ಪರ್ಧೆಯನ್ನು ಒಡ್ಡಲಿದೆ.

ಇನ್ನೋವಾ ಕ್ರೈಸ್ಟಾಗೆ ಸವಾಲೊಡ್ಡಲು ಜ. 18ರಂದು ಬರುತ್ತಿದೆ ಟಾಟಾ ಹೆಕ್ಸಾ

ಇನ್ನು ಎಲ್ಲ ಭೂಪ್ರದೇಶಕ್ಕೆ ಹೊಂದಿಕೆಯಾಗುವ ರೀತಿಯಲ್ಲಿ ರಿಯರ್ ವೀಲ್ ಡ್ರೈವ್ ಜೊತೆಗೆ ಆಲ್ ವೀಲ್ ಡ್ರೈವ್ ಚಾಲನಾ ವ್ಯವಸ್ಥೆಯಿರಲಿದೆ.

Most Read Articles

Kannada
English summary
Tata Hexa India Launch Most Likely On January 18, 2017
Story first published: Friday, December 9, 2016, 10:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X