ದುಬಾರಿಯಾಯ್ತು ಟಾಟಾ ಕಾರು; 12,000 ರು.ಗಳ ವರೆಗೆ ಬೆಲೆ ಏರಿಕೆ

ಟಾಟಾ ಪಾಲಿಗೆ ಟಿಯಾಗೊ ಹ್ಯಾಚ್ ಬ್ಯಾಕ್ ಕಾರು ಅತಿ ಬೇಡಿಕೆಯ ಕಾರೆನಿಸಿಕೊಂಡಿದೆ. ನೂತನ ಬೆಲೆ ಏರಿಕೆ ನೀತಿಯು ಟಿಯಾಗೊ ಮಾರಾಟಕ್ಕೂ ಧಕ್ಕೆಯನ್ನುಂಟು ಮಾಡಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

By Nagaraja

ಇನ್ನು ಮುಂದೆ ಟಾಟಾ ಕಾರುಗಳು ಮತ್ತಷ್ಟು ದುಬಾರಿಯೆನಿಸಲಿದೆ. ಈ ಸಂಬಂಧ ಪ್ರಕಟಣೆಯನ್ನು ಹೊರಡಿಸಿರುವ ದೇಶದ ಅತಿ ದೊಡ್ಡ ವಾಹನ ಸಂಸ್ಥೆ ಟಾಟಾ ಮೋಟಾರ್ಸ್, ತನ್ನೆಲ್ಲ ಪ್ರಯಾಣಿಕ ಶ್ರೇಣಿಯ ಕಾರುಗಳಿಗೆ 12,000 ರು.ಗಳ ವರೆಗೆ ಬೆಲೆ ಏರಿಕೆಗೊಳಿಸಲು ನಿರ್ಧರಿಸಿದೆ.

ದುಬಾರಿಯಾಯ್ತು ಟಾಟಾ ಕಾರು; 12,000 ರು.ಗಳ ವರೆಗೆ ಬೆಲೆ ಏರಿಕೆ

ನಿರ್ಮಾಣ ವೆಚ್ಚ ಹೆಚ್ಚಾಗಿರುವ ಹಿನ್ನಲೆಯಲ್ಲಿ ಬೆಲೆ ಏರಿಕೆ ಅನಿವಾರ್ಯವೆನಿಸಿದೆ ಎಂದು ಟಾಟಾ ಸಂಸ್ಥೆಯು ತಿಳಿಸಿದೆ. ಇದರೊಂದಿಗೆ ಹಬ್ಬದ ಸಂಭ್ರಮದಲ್ಲಿರುವ ಹೊಸ ಕಾರು ಖರೀದಿ ಗ್ರಾಹಕರಿಗೆ ಹಿನ್ನಡೆಯುಂಟಾಗಿದೆ.

ದುಬಾರಿಯಾಯ್ತು ಟಾಟಾ ಕಾರು; 12,000 ರು.ಗಳ ವರೆಗೆ ಬೆಲೆ ಏರಿಕೆ

ಟಾಟಾ ಕಾರುಗಳಿದೆ 5,000 ರು.ಗಳಿಂದ ಗರಿಷ್ಠ 12,000 ರು.ಗಳಷ್ಟು ಬೆಲೆ ಏರಿಕೆಗೊಳಿಸಿದೆ. ತನ್ಮೂಲಕ ದೇಶದ ಮುಂಚೂಣಿಯ ವಾಹನ ಸಂಸ್ಥೆಯ ನೀತಿಯನ್ನು ಟಾಟಾ ಹಿಂಬಾಲಿಸಿದೆ.

ದುಬಾರಿಯಾಯ್ತು ಟಾಟಾ ಕಾರು; 12,000 ರು.ಗಳ ವರೆಗೆ ಬೆಲೆ ಏರಿಕೆ

ಉಕ್ಕು ಮತ್ತು ಸತುವಿನಂತಹ ಕಚ್ಚಾ ಪದಾರ್ಥಗಳ ಬೆಲೆ ಏರಿಕೆಯಾಗಿದ್ದು, ಇದರಿಂದಾಗಿ ಸಂಸ್ಥೆಯು ಇಂತಹದೊಂದು ನಿರ್ಧಾರವನ್ನು ತಳೆದಿದೆ.

ದುಬಾರಿಯಾಯ್ತು ಟಾಟಾ ಕಾರು; 12,000 ರು.ಗಳ ವರೆಗೆ ಬೆಲೆ ಏರಿಕೆ

ಎಂಟ್ರಿ ಲೆವೆಲ್ ಟಾಟಾ ನ್ಯಾನೋದಿಂದ ಆರಂಭಿಸಿದ ವಿವಿಧ ಜನಪ್ರಿಯ ಕಾರುಗಳನ್ನು ಮಾರಾಟ ಮಾಡುತ್ತಿರುವ ಟಾಟಾ ಕಾರುಗಳು ದೇಶದಲ್ಲಿ ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 2.15 ಲಕ್ಷ ರು.ಗಳಿಂದ 16.3 ಲಕ್ಷ ರು.ಗಳ ವರೆಗೆ ದುಬಾರಿಯೆನಿಸುತ್ತದೆ.

ದುಬಾರಿಯಾಯ್ತು ಟಾಟಾ ಕಾರು; 12,000 ರು.ಗಳ ವರೆಗೆ ಬೆಲೆ ಏರಿಕೆ

ಇತ್ತೀಚೆಗಷ್ಟೇ ಮಹೀಂದ್ರ ಸಂಸ್ಥೆಯು ಬೆಲೆ ಏರಿಕೆ ನೀತಿಯನ್ನು ಪ್ರಕಟಿಸಿತ್ತು. ಇದಕ್ಕೂ ಮೊದಲು ದೇಶದ ಅಗ್ರ ಮಾರುತಿ ಹಾಗೂ ಹ್ಯುಂಡೈ ಸಂಸ್ಥೆಗಳು 20,000 ರು.ಗಳ ವರೆಗೆ ಬೆಲೆ ಏರಿಕೆಗೊಳಿಸಿತ್ತು.

ಟಾಟಾ ಕಾರುಗಳು - ಹ್ಯಾಚ್ ಬ್ಯಾಕ್

ಟಾಟಾ ಕಾರುಗಳು - ಹ್ಯಾಚ್ ಬ್ಯಾಕ್

ಟಿಯಾಗೊ

ಜೆನ್ ಎಕ್ಸ್ ನ್ಯಾನೋ

ಬೋಲ್ಟ್

ಇಂಡಿಕಾ

ಸೆಡಾನ್

ಸೆಡಾನ್

ಜೆಸ್ಟ್

ಇಂಡಿಗೊ

ಉಪಯುಕ್ತ ವಾಹನಗಳು

ಉಪಯುಕ್ತ ವಾಹನಗಳು

ಸಫಾರಿ ಸ್ಟ್ರೋಮ್

ಸಫಾರಿ ಡಿಕೊರ್

ಸುಮೋ ಗೋಲ್ಡ್

ಕ್ಸೆನಾನ್ ಎಕ್ಸ್ ಟಿ

ಆರಿಯಾ

Most Read Articles

Kannada
English summary
Tata Motors hikes prices by up to Rs 12,000
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X