ಇದ್ಯಾವ ಹೊಸ ಟೊಯೊಟಾ ಕಾರು - ಬಲ್ಲೀರಾ ?

By Nagaraja

ಜಪಾನ್ ಮೂಲದ ಪ್ರತಿಷ್ಠಿತ ವಾಹನ ಸಂಸ್ಥೆ ಟೊಯೊಟಾ, 2016 ಗುಡ್ ವುಡ್ ಫೆಸ್ಟಿವಲ್ ಆಫ್ ಸ್ಪೀಡ್‌ನಲ್ಲಿ ಅತಿ ನೂತನ ಸಿ-ಎಚ್‌ಆರ್ ಹೈಬ್ರಿಡ್ ಕ್ರಾಸೋವರ್ ಕಾರನ್ನು ಅನಾವರಣಗೊಳಿಸಿದೆ. ಇದನ್ನು ಮೊದಲ ಬಾರಿಗೆ 2016 ಜಿನೆವಾ ಮೋಟಾರು ಶೋದಲ್ಲಿ ಅನಾವರಣಗೊಳಿಸಲಾಗಿತ್ತು.

ಟೊಯೊಟಾ ನ್ಯೂ ಗ್ಲೋಬಲ್ ಆರ್ಕಿಟೆಕ್ಚರ್ (ಟಿಎನ್‌ಜಿಎ) ಮೊಡ್ಯುಲರ್ ತಳಹದಿಯಲ್ಲಿ ನಿರ್ಮಾಣವಾಗುತ್ತಿರುವ ಎರಡನೇ ಕಾರು ಇದಾಗಿದೆ. ಇದಕ್ಕೂ ಮೊದಲು ನಾಲ್ಕನೇ ತಲೆಮಾರಿನ ಟೊಯೊಟಾ ಪ್ರಯಾಸ್ ನಿರ್ಮಾಣಗೊಂಡಿತ್ತು.

ಜಾಗತಿಕ ಮಾರುಕಟ್ಟೆಗೆ ಟೊಯೊಟಾ ಸಿ-ಎಚ್‌ಆರ್ ಹೈಬ್ರಿಡ್ ಕ್ರಾಸೋವರ್

ನೂತನ ಟೊಯೊಟಾ ಸಿ-ಎಚ್ ಆರ್ ಆರಂಭದಲ್ಲಿ ಪೆಟ್ರೋಲ್ ಜೊತೆ ಎಲೆಕ್ಟ್ರಿಕ್ ಮೋಟಾರು ಆಯ್ಕೆಯಲ್ಲಿ ಲಭ್ಯವಾಗಲಿದೆ. ಈ ಮೂಲಕ ಹೆಚ್ಚು ಪರಿಸರ ಸ್ನೇಹಿ ಎನಿಸಿಕೊಳ್ಳಲಿದೆ.

ಜಾಗತಿಕ ಮಾರುಕಟ್ಟೆಗೆ ಟೊಯೊಟಾ ಸಿ-ಎಚ್‌ಆರ್ ಹೈಬ್ರಿಡ್ ಕ್ರಾಸೋವರ್

ನೂತನ ಕಾರಿನಲ್ಲಿ 8ಎನ್ ಆರ್-ಎಫ್‌ಟಿಎಸ್ 1.2 ಲೀಟರ್ ಟರ್ಬೊಚಾರ್ಜ್ಡ್ ಫೋರ್ ಸಿಲಿಂಡರ್ ಎಂಜಿನ್ ಆಳವಡಿಸಲಾಗುವುದು. ಇದು 185 ಎನ್ ಎಂ ತಿರುಗುಬಲದಲ್ಲಿ 113.94 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ ಆರು ಸ್ಪೀಡ್ ಸಿವಿಟಿ ಗೇರ್ ಬಾಕ್ಸ್ ಇರುತ್ತದೆ.

ಜಾಗತಿಕ ಮಾರುಕಟ್ಟೆಗೆ ಟೊಯೊಟಾ ಸಿ-ಎಚ್‌ಆರ್ ಹೈಬ್ರಿಡ್ ಕ್ರಾಸೋವರ್

ಇದರ ಹೈಬ್ರಿಡ್ ಆವೃತ್ತಿಯು 1.9 ಲೀಟರ್ ಪೆಟ್ರೋಲ್ ಎಂಜಿನ್ (142 ಎನ್ ಎಂ ತಿರುಗುಬಲ, 96.51 ಅಶ್ವಶಕ್ತಿ) ಜೊತೆಗೆ ಎಲೆಕ್ಟ್ರಿಕ್ ಮೋಟಾರು ಪಡೆಯಲಿದೆ. ಇದರ ಎಲೆಕ್ಟ್ರಿಕ್ ಮೋಟಾರು 163 ಎನ್ ಎಂ ತಿರುಗುಬಲದಲ್ಲಿ 71.05 ಅಶ್ವಶಕ್ತಿ ಉತ್ಪಾದಿಸಲಿದೆ.

ಜಾಗತಿಕ ಮಾರುಕಟ್ಟೆಗೆ ಟೊಯೊಟಾ ಸಿ-ಎಚ್‌ಆರ್ ಹೈಬ್ರಿಡ್ ಕ್ರಾಸೋವರ್

ಇನ್ನು ಕೆಲವು ಮಾರುಕಟ್ಟೆಗಳಲ್ಲಿ 2.0 ಲೀಟರ್ ಫೋರ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಆಯ್ಕೆಯೂ ನೀಡಲಾಗುವುದು. ಇದು 193 ಎನ್ ಎಂ ತಿರುಗುಬಲದಲ್ಲಿ 110 ಅಶ್ವಶಕ್ತಿ ಉತ್ಪಾದಿಸಲಿದ್ದು, ಸಿವಿಟಿ ಗೇರ್ ಬಾಕ್ಸ್ ಕಂಡುಬರಲಿದೆ.

ಜಾಗತಿಕ ಮಾರುಕಟ್ಟೆಗೆ ಟೊಯೊಟಾ ಸಿ-ಎಚ್‌ಆರ್ ಹೈಬ್ರಿಡ್ ಕ್ರಾಸೋವರ್

ಪ್ರಸಕ್ತ ವರ್ಷಾಂತ್ಯದಲ್ಲಿ ಬ್ರಿಟನ್ ಮಾರುಕಟ್ಟೆಯನ್ನು ತಲುಪಲಿರುವ ಟೊಯೊಟಾ ಸಿ-ಎಚ್ ಆರ್ ಮುಂದಿನ ವರ್ಷದಲ್ಲಿ ಅಮೆರಿಕ ಮತ್ತು ಆಸ್ಟ್ರೇಲಿಯಾ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ.

ಜಾಗತಿಕ ಮಾರುಕಟ್ಟೆಗೆ ಟೊಯೊಟಾ ಸಿ-ಎಚ್‌ಆರ್ ಹೈಬ್ರಿಡ್ ಕ್ರಾಸೋವರ್

ಕಾರಿನೊಳಗೆ ಎಂಟು ಇಂಚುಗಳ ಟ್ಯಾಬ್ಲೆಟ್ ಶೈಲಿಯ ಇನ್ಪೋಟೈನ್ಮೆಂಟ್ ಸಿಸ್ಟಂ ಪ್ರಮುಖ ಆಕರ್ಷಣೆಯಾಗಲಿದೆ. ಅಲ್ಲದೆ ಹೆಚ್ಚು ಕೇಂದ್ರಿತ ಕ್ಯಾಬಿನ್ ಸಿದ್ಧಪಡಿಸಲಾಗಿದೆ.

ಜಾಗತಿಕ ಮಾರುಕಟ್ಟೆಗೆ ಟೊಯೊಟಾ ಸಿ-ಎಚ್‌ಆರ್ ಹೈಬ್ರಿಡ್ ಕ್ರಾಸೋವರ್

ಕಾರಿನೊಳಗೆ ನೀಲಿ-ಕಪ್ಪು, ಕಪ್ಪು-ಕಂದು ಮತ್ತು ಕಡು ಬೂದು ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಾಗಲಿದ್ದು, ಹೆಚ್ಚು ಪ್ರೀಮಿಯಂ ಸೌಲಭ್ಯಗಳನ್ನು ಒಳಗೊಂಡಿರಲಿದೆ.

ಜಾಗತಿಕ ಮಾರುಕಟ್ಟೆಗೆ ಟೊಯೊಟಾ ಸಿ-ಎಚ್‌ಆರ್ ಹೈಬ್ರಿಡ್ ಕ್ರಾಸೋವರ್

ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಫೋಕ್ಸ್ ವ್ಯಾಗನ್ ಟೈಗನ್ ಮತ್ತು ನಿಸ್ಸಾನ್ ಕ್ವಾಶ್ ಗೈ ಮುಂತಾದ ಮಾದರಿಗಳಿಗೆ ಪ್ರತಿಸ್ಪರ್ಧೆಯನ್ನು ಒಡ್ಡಲಿದೆ.

Most Read Articles

Kannada
English summary
Toyota C-HR: Hybrid Crossover Interior Images And Details Revealed
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X