ಫಾರ್ಚ್ಯುನರ್‌ಗೆ ಸಂಭ್ರಮದ ಸಮಯ; 1 ಲಕ್ಷ ಮಾರಾಟ ಮೈಲುಗಲ್ಲು

Written By:

ಜಪಾನ್ ಮೂಲದ ದೈತ್ಯ ವಾಹನ ಸಂಸ್ಥೆ ಟೊಯೊಟಾ, 2009ನೇ ಸಾಲಿನಲ್ಲಿ ಭಾರತದಲ್ಲಿ ಮೊತ್ತ ಬಾರಿಗೆ ಫಾರ್ಚ್ಯುನರ್ ಪ್ರೀಮಿಯಂ ಕ್ರೀಡಾ ಬಳಕೆಯ ವಾಹನವನ್ನು ಬಿಡುಗಡೆಗೊಳಿಸಿತ್ತು. ಈ ಬಹುನಿರೀಕ್ಷಿತ ಕಾರೀಗ ಒಂದು ಲಕ್ಷ ಮಾರಾಟ ಮೈಲುಗಲ್ಲನ್ನು ತಲುಪಿದೆ.

ಭಾರತದಲ್ಲಿ ಫಾರ್ಚ್ಯುನರ್ ಹಾದಿ ಅಷ್ಟು ಸುಗಮವಾಗಿರಲಿಲ್ಲ. ಪ್ರೀಮಿಯಂ ಎಸ್ ಯುವಿ ವಿಭಾಗದಲ್ಲಿ ನಿಕಟ ಪೈಪೋಟಿ ಎದುರಾಗಿದ್ದರೂ ಈ ಎಲ್ಲ ಸವಾಲುಗಳನ್ನು ಮೆಟ್ಟಿ ನಿಲ್ಲುವಲ್ಲಿ ಯಶ ಕಂಡಿದೆ.

ಕಳೆದ ನವೆಂಬರ್ ತಿಂಗಳಿನಲ್ಲಷ್ಟೇ ಹೊಸ ಫಾರ್ಚ್ಯುನರ್ ಕಾರು ಬಿಡುಗಡೆಗೊಂಡಿತ್ತು. ಇದು ಈಗಾಗಲೇ 6000 ಕ್ಕೂ ಹೆಚ್ಚು ಮುಂಗಡ ಬುಕ್ಕಿಂಗ್ ದಾಖಲಿಸಿದ್ದು, ಈ ಪೈಕಿ 2000 ಯುನಿಟ್ ಗಳನ್ನು ಗ್ರಾಹಕರು ತಲುಪಿಸಲಾಗಿದೆ.

2009ರಲ್ಲಿ ಭಾರತೀಯ ಮಾರುಕಟ್ಟೆಗೆ ಪ್ರವೇಶಿಸಿದ್ದ ಫಾರ್ಚ್ಯುನರ್ 2012ರಲ್ಲಿ ಮೊದಲ ಬಾರಿಗೆ ಅಂದತೆಯನ್ನು ಬದಲಾಯಿಸಿತ್ತು. ದೇಶದಲ್ಲಿ ವರ್ಧಿಸುತ್ತಿರುವ ಬೇಡಿಕೆಯನ್ನು ಪರಿಗಣಿಸಿ ಹೆಚ್ಚಿನ ವೆರಿಯಂಟ್ ಗಳನ್ನು ಸೇರ್ಪಡೆಗೊಳಿಸಲಾಗಿತ್ತು.

ಪ್ರಾರಂಭದಲ್ಲಿ 3.0 ಲೀಟರ್ ಫೋರ್ ವೀಲ್ ಮ್ಯಾನುವಲ್ ವೆರಿಯಂಟ್ ನೊಂದಿಗೆ ಲಭ್ಯವಿದ್ದ ಫಾರ್ಚ್ಯುನರ್ ಸಾಲಿಗೆ ಬಳಿಕ 3.0 ಲೀಟರ್ 4X2 ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ವೆರಿಯಂಟ್ ಗಳು ಸೇರಿದ್ದವು.

ಬಳಿಕ ಟಾಪ್ ಎಂಡ್ 3.0 ಲೀಟರ್ 4X4 ಆಟೋಮ್ಯಾಟಿಕ್ ವೆರಿಯಂಟನ್ನು ದೇಶಕ್ಕೆ ಪರಿಚಯಿಸಿತ್ತು. ಇದರ ಜೊತೆಗೆ ಮಗದೊಂದು ಎಂಟ್ರಿ ಲೆವೆಲ್ 2.5 ಲೀಟರ್ 4X2 ಫೈವ್ ಸ್ಪೀಡ್ ಮ್ಯಾನುವಲ್ ಹಾಗೂ 5 ಸ್ಪೀಡ್ ಆಟೋಮ್ಯಾಟಿಕ್ ಸೇರಿತ್ತು.

ಭಾರತದಲ್ಲಿ ಟೊಯೊಟಾ ಫಾರ್ಚ್ಯುನರ್ ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 25.92 ಲಕ್ಷ ರು.ಗಳಿಂದ 31.12 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

ವೆರಿಯಂಟ್ ಗಳು

4x2 ಪೆಟ್ರೋಲ್ ಮ್ಯಾನುವಲ್,
4x2 ಪೆಟ್ರೋಲ್ ಆಟೋ,
4x2 ಡೀಸೆಲ್ ಮ್ಯಾನುವಲ್,
4x2 ಡೀಸೆಲ್ ಆಟೋ,
4x4 ಡೀಸೆಲ್ ಮ್ಯಾನುವಲ್,
4x2 ಡೀಸೆಲ್ ಆಟೋ.

English summary
Toyota Fortuner Crosses An Impressive Milestone
Please Wait while comments are loading...

Latest Photos