ಶೀಘ್ರದಲ್ಲೇ ಟೊಯೊಟಾ ಇನ್ನೋವಾ ಕ್ರೈಸ್ಟಾ ಪೆಟ್ರೋಲ್ ಆವೃತ್ತಿ ಬಿಡುಗಡೆ

By Nagaraja

ಇತ್ತೀಚೆಗಷ್ಟೇ ಅತಿ ನೂತನ ಇನ್ನೋವಾ ಕ್ರೈಸ್ಟಾ ಭಾರತೀಯ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿತ್ತು. ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿರುವ ಇನ್ನೋವಾ ಕ್ರೈಸ್ಟಾಗೆ ಅದ್ಭುತ ಪ್ರತಿಕ್ರಿಯೆಯೂ ವ್ಯಕ್ತವಾಗಿತ್ತು.

ಈಗ ಬಂದಿರುವ ಮೂಲಗಳ ವರದಿಗಳ ಪ್ರಕಾರ ಕ್ರೈಸ್ಟಾ ಡೀಸೆಲ್ ಯಶಸ್ಸಿನಿಂದ ಪುಳಕಿತಗೊಂಡಿರುವ ಸಂಸ್ಥೆಯೀಗ ಪೆಟ್ರೋಲ್ ಆವೃತ್ತಿಯನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಇದರಂತೆ ಬುಕ್ಕಿಂಗ್ ಪ್ರಕ್ರಿಯೆಯನ್ನು ಆರಂಭಿಸಲಾಗಿದ್ದು, ವೆರಿಯಂಟ್ ವಿವರಗಳನ್ನು ಬಹಿರಂಗಗೊಂಡಿದೆ.

ಶೀಘ್ರದಲ್ಲೇ ಟೊಯೊಟಾ ಇನ್ನೋವಾ ಕ್ರೈಸ್ಟಾ ಪೆಟ್ರೋಲ್ ಆವೃತ್ತಿ ಬಿಡುಗಡೆ

ಡೀಲರುಗಳಿಂದ ಲಭ್ಯವಾಗಿರುವ ಖಚಿತ ಮಾಹಿತಿಗಳ ಪ್ರಕಾರ ನೂತನ ಇನ್ನೋವಾ ಕ್ರೈಸ್ಟಾ ಪೆಟ್ರೋಲ್ ಆವೃತ್ತಿಯು ಈಗಿರುವ ಡೀಸೆಲ್ ವೆರಿಯಂಟ್ ಗಿಂತಲೂ ಸರಿ ಸುಮಾರು 60,000 ರು.ಗಳಷ್ಟು ಅಗ್ಗವೆನಿಸಲಿದೆ.

ಶೀಘ್ರದಲ್ಲೇ ಟೊಯೊಟಾ ಇನ್ನೋವಾ ಕ್ರೈಸ್ಟಾ ಪೆಟ್ರೋಲ್ ಆವೃತ್ತಿ ಬಿಡುಗಡೆ

ಆಸಕ್ತ ಗ್ರಾಹಕರು ಒಂದು ಲಕ್ಷ ರುಪಾಯಿಗಳ ಮುಂಗಡ ಹಣವನ್ನು ಪಾವತಿಸಿ ಇನ್ನೋವಾ ಕ್ರೈಸ್ಟಾ ಪೆಟ್ರೋಲ್ ಆವೃತ್ತಿಗಾಗಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

ಶೀಘ್ರದಲ್ಲೇ ಟೊಯೊಟಾ ಇನ್ನೋವಾ ಕ್ರೈಸ್ಟಾ ಪೆಟ್ರೋಲ್ ಆವೃತ್ತಿ ಬಿಡುಗಡೆ

ನೂತನ ಇನ್ನೋವಾ ಕ್ರೈಸ್ಟಾ ಪೆಟ್ರೋಲ್ ಆವೃತ್ತಿಯು 2016 ಆಗಸ್ಟ್ ತಿಂಗಳಲ್ಲಿ ಬಿಡುಗಡೆಯಾಗುವುದು ಬಹುತೇಕ ಖಚಿತವೆನಿಸಿದೆ. ಇದರಲ್ಲಿರುವ 2.7 ಲೀಟರ್ ಫೋರ್ ಸಿಲಿಂಡರ್ ಎಂಜಿನ್ 245 ಎನ್ ಎಂ ತಿರುಗುಬಲದಲ್ಲಿ 166 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ವೆರಿಯಂಟ್ ಗಳು - ಇನ್ನೋವಾ ಕ್ರೈಸ್ಟಾ ಪೆಟ್ರೋಲ್ ಜಿ

ವೆರಿಯಂಟ್ ಗಳು - ಇನ್ನೋವಾ ಕ್ರೈಸ್ಟಾ ಪೆಟ್ರೋಲ್ ಜಿ

ಏಳು ಅಥವಾ ಎಂಟು ಸೀಟುಗಳ ಆಯ್ಕೆ,

ಫೈವ್ ಸ್ಪೀಡ್ ಮ್ಯಾನುವಲ್ ಅಥವಾ ಸಿಕ್ಸ್ ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್,

16 ಇಂಚುಗಳ ಅಲಾಯ್ ಚಕ್ರಗಳು, 205/65ಆರ್ 16 ಚಕ್ರ,

ನಾಲ್ಕು ಸ್ಪೀಕರ್ ಸ್ಟ್ಯಾಂಡರ್ಡ್,

ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ ಕೊರತೆ,

ಮೂರು ಏರ್ ಬ್ಯಾಗ್,

ಬೇಸಿಕ್ ಬಹು ಮಾಹಿತಿ ಪರದೆ

ವೆರಿಯಂಟ್ ಗಳು - ಇನ್ನೋವಾ ಕ್ರೈಸ್ಟಾ ಪೆಟ್ರೋಲ್ ವಿ

ವೆರಿಯಂಟ್ ಗಳು - ಇನ್ನೋವಾ ಕ್ರೈಸ್ಟಾ ಪೆಟ್ರೋಲ್ ವಿ

ಏಳು ಸೀಟುಗಳ ಆಯ್ಕೆ,

ಫೈವ್ ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್,

ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆ ಇರುವುದಿಲ್ಲ,

16 ಇಂಚುಗಳ ಅಲಾಯ್ ಚಕ್ರಗಳ ಜೊತೆಗೆ 205/65ಆರ್ 16 ಚಕ್ರ,

ಆಟೋಮ್ಯಾಟಿಕ್ ಎಲ್ ಇಡಿ ಪ್ರೊಜೆಕ್ಟರ್ ಹೆಡ್ ಲ್ಯಾಂಪ್,

ಎತ್ತರ ಹೊಂದಾಣಿಸಬಹುದಾದ ಚಾಲಕ ಸೀಟು,

ಆರು ಸ್ಪೀಕರ್ ಗಳ ಜೊತೆಗೆ ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ,

ಕೀಲೆಸ್ ಎಂಟ್ರಿ,

ಎಲ್ಲ ನಾಲ್ಕು ವಿಂಡೋಗಳಲ್ಲೂ ಆಟೋ ಅಪ್ ಆಂಡ್ ಡೌನ್,

ಫ್ರಂಟ್ ಫಾಗ್ ಲ್ಯಾಂಪ್.

ವೆರಿಯಂಟ್ ಗಳು - ಇನ್ನೋವಾ ಕ್ರೈಸ್ಟಾ ಪೆಟ್ರೋಲ್ ಝಡ್

ವೆರಿಯಂಟ್ ಗಳು - ಇನ್ನೋವಾ ಕ್ರೈಸ್ಟಾ ಪೆಟ್ರೋಲ್ ಝಡ್

ಏಳು ಸೀಟುಗಳ ಆಯ್ಕೆ,

ಸಿಕ್ಸ್ ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್,

ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆ ಇರುವುದಿಲ್ಲ,

17 ಇಂಚುಗಳ ಅಲಾಯ್ ಚಕ್ರಗಳು, 215/55ಆರ್ 17 ಚಕ್ರ,

ಏಳು ಏರ್ ಬ್ಯಾಗ್,

ಕ್ರೂಸ್ ಕಂಟ್ರೋಲ್,

ಸ್ಥಿರತೆ ನಿಯಂತ್ರಣ ಮತ್ತು ಹಿಲ್ ಸ್ಟ್ಯಾರ್ಟ್ ಅಸಿಸ್ಟ್,

ಲೆಥರ್ ಸೀಟು ಜೊತೆ ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ಚಾಲಕ ಸೀಟು,

ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಸ್ಟಂ ಜೊತೆ ನೇವಿಗೇಷನ್.

Most Read Articles

Kannada
English summary
Toyota Innova Crysta Petrol Variants Revealed, Bookings Open
Story first published: Thursday, July 7, 2016, 11:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X