'ಟೊಯೊಟಾ' ವಿಶ್ವದ ಅತಿ ದೊಡ್ಡ ಕಾರು ಸಂಸ್ಥೆ

By Nagaraja

ಮಾರುತಿ ಸುಜುಕಿ ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆ ಆಗಿರಬಹುದು. ಆದರೆ ಜಗತ್ತಿನ ವಿಚಾರಕ್ಕೆ ಬಂದಾಗ ವಿಶ್ವದ ಅತಿ ದೊಡ್ಡ ಕಾರು ಸಂಸ್ಥೆಯೆಂಬ ಗೌರವಕ್ಕೆ ಜಪಾನ್ ಮೂಲದ ಟೊಯೊಟಾ ಪಾತ್ರವಾಗಿದೆ.

2015ನೇ ಸಾಲಿನಲ್ಲಿ 10.15 ದಶಲಕ್ಷ ವಾಹನಗಳ ಮಾರಾಟವನ್ನು ಸಾಧಿಸಿರುವ ಟೊಯೊಟಾ ಸತತ ನಾಲ್ಕನೇ ಬಾರಿಗೆ ವಿಶ್ವದ ಅತಿ ದೊಡ್ಡ ಕಾರು ಸಂಸ್ಥೆಯೆಂಬ ಕಿರೀಟವನ್ನು ಎತ್ತಿ ಹಿಡಿದಿದೆ.

ಟೊಯೊಟಾ


ಒಂದು ವರ್ಷದ ಹಿಂದೆ ಅಂದರೆ 2014ರಲ್ಲಿ ಟೊಯೊಟಾ ಸಂಸ್ಥೆಯು 10.23 ದಶಲಕ್ಷ ಯುನಿಟ್ ಗಳ ಮಾರಾಟವನ್ನು ಕಂಡುಕೊಂಡಿತ್ತು.

ಎರಡನೇ ಸ್ಥಾನದಲ್ಲಿ ಗುರುತಿಸಿಕೊಂಡಿರುವ ಫೋಕ್ಸ್ ವ್ಯಾಗನ್ 9.93 ದಶಲಕ್ಷ ಯುನಿಟ್ ಗಳ ಮಾರಾಟವನ್ನು ದಾಖಲಿಸಿತ್ತು. 2015ನೇ ಸಾಲಿನ ಮೊದಲಾರ್ಧದಲ್ಲಿ ಮುನ್ನಡೆಯನ್ನು ಸಾಧಿಸಿದ್ದ ಫೋಕ್ಸ್ ವ್ಯಾಗನ್ ಸಂಸ್ಥೆಯ ಮೇಲೆ ಹೇರಲಾಗಿದ್ದ ಮಹಾ ಮಾಲಿನ್ಯ ಮೋಸ ಹಗರಣದಿಂದಾಗಿ ಹಿನ್ನಡೆಕ್ಕೊಳಗಾಗಿತ್ತು.

9.8 ದಶಲಕ್ಷ ಯುನಿಟ್ ಗಳ ಮಾರಾಟವನ್ನು ಸಾಧಿಸಿರುವ ಅಮೆರಿಕ ಮೂಲದ ಜನರಲ್ ಮೋಟಾರ್ಸ್ ಮೂರನೇ ಸ್ಥಾನದಲ್ಲಿದೆ.

Most Read Articles

Kannada
English summary
Toyota Remains World's Biggest Carmaker
Story first published: Monday, February 1, 2016, 18:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X