ಕ್ಲಚ್, ಗೇರ್ ತೊಂದರೆಗೆ ಗುಡ್ ಬೈ ಹೇಳಿ; ಬರಮಾಡಿಕೊಳ್ಳಿ ಎಎಂಟಿ ಕಾರುಗಳನ್ನ!

By Nagaraja

ಟ್ರಾಫಿಕ್ ಜಂಜಾಟದ ನಡುವಲ್ಲಿ ಪದೇ ಪದೇ ಕ್ಲಚ್ ಅದುಮಿ ಗೇರ್ ಬದಲಾಯಿಸುವ ಗೋಳು ಸಾಕಪ್ಪಾ ಸಾಕು, ಸಾಕಾಗಿ ಹೋಯ್ತು ಎಂದು ಬೆಂಗ್ಳೂರಿಗರು ಸದಾ ಗೋಳಾಡುತ್ತಿರುತ್ತಾರೆ. ಇಂತಹ ಎಲ್ಲ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಆಟೋಮ್ಯಾಟಿಕ್ ಕಾರುಗಳನ್ನು ಕಂಡು ಹಿಡಿಯಲಾಗಿದೆ.

ಈ ವಿಭಾಗದಲ್ಲಿ ಪರಿಚಯಗೊಂಡಿರುವ ಅತಿ ನೂತನ ತಂತ್ರಗಾರಿಗೆಯೇ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ (ಎಎಂಟಿ). ಭಾರತದಲ್ಲಿ ಎಎಂಟಿ ಕಾರುಗಳಿಗೆ ಪ್ರಮುಖವಾಗಿಯೂ ನಗರ ಪ್ರದೇಶಗಳಲ್ಲಿ ಬೇಡಿಕೆ ಹೆಚ್ಚಾಗುತ್ತಿದ್ದು, ಹಾಗಿರುವಂತೆಯೇ ದೇಶದಲ್ಲಿ ಬಿಡುಗಡೆಯಾಗಲಿರುವ ಮುಂಬರುವ ಎಎಂಟಿ ಕಾರುಗಳ ಬಗ್ಗೆ ಮಾಹಿತಿಯನ್ನು ಕೊಡುವ ಪ್ರಯತ್ನವನ್ನು ಮಾಡಲಿದ್ದೇವೆ.

ರೆನೊ ಲೊಡ್ಜಿ ಎಎಂಟಿ

ರೆನೊ ಲೊಡ್ಜಿ ಎಎಂಟಿ

ಜನಪ್ರಿಯ ಡಸ್ಟರ್ ಎಸ್ ಯುವಿಗೆ ಎಎಂಟಿ ತಂತ್ರಗಾರಿಕೆಯನ್ನು ಒದಗಿಸಿರುವ ಫ್ರಾನ್ಸ್ ಮೂಲದ ರೆನೊ ಸಂಸ್ಥೆಯೀಗ ಲೊಡ್ಜಿ ಬಹು ಬಳಕೆಯ ವಾಹನಕ್ಕೂ ಇದೇ ತಂತ್ರಜ್ಞಾನ ಆಳವಡಿಸುವ ಇರಾದೆಯಲ್ಲಿದೆ.

ರೆನೊ ಲೊಡ್ಜಿ ಎಎಂಟಿ

ರೆನೊ ಲೊಡ್ಜಿ ಎಎಂಟಿ

ನೂತನ ರೆನೊ ಲೊಡ್ಜಿ ಕಾರಿನಲ್ಲೂ ಕ್ವಿಡ್ ನಲ್ಲಿರುವುದಕ್ಕೆ ಸಮಾನವಾದ 'ಈಸಿ-ಆರ್' ಎಎಂಟಿ ತಂತ್ರಗಾರಿಕೆ ಬಳಕೆಯಾಗಲಿದೆ. ಪ್ರಸಕ್ತ ಸಾಲಿನ ವರ್ಷಾಂತ್ಯದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿರುವ ಲೊಡ್ಜಿ ಎಎಂಟಿ 10ರಿಂದ 12 ಲಕ್ಷ ರು.ಗಳ ವರೆಗೆ ದುಬಾರಿಯೆನಿಸಲಿದೆ.

ರೆನೊ ಕ್ವಿಡ್ ಎಎಂಟಿ

ರೆನೊ ಕ್ವಿಡ್ ಎಎಂಟಿ

ಅತ್ತ ಕ್ವಿಡ್ 1.0 ಲೀಟರ್ ಶಕ್ತಿಶಾಲಿ ಆವೃತ್ತಿಯನ್ನು ಬಿಡುಗಡೆ ಮಾಡಿರುವ ರೆನೊ ಸಂಸ್ಥೆಯು ಮುಂಬರುವ ಹಬ್ಬದ ಆವೃತ್ತಿಯಲ್ಲಿ ಎಎಂಟಿ ಮಾದರಿಯನ್ನು ಬಿಡುಗಡೆ ಮಾಡಲಿದೆ. ಇದು ಮೀಡಿಯಾ ನೇವ್ ಇನ್ಪೋಟೈನ್ಮೆಂಟ್ ಗಳಂತಹ ವೈಶಿಷ್ಟ್ಯಳನ್ನು ಪಡೆಯಲಿದೆ.

ರೆನೊ ಕ್ವಿಡ್ ಎಎಂಟಿ

ರೆನೊ ಕ್ವಿಡ್ ಎಎಂಟಿ

ರೆನೊ ಕ್ವಿಡ್ ಸಹ ಈಸಿ-ಆರ್ ಎಎಂಟಿ ಗೇರ್ ಬಾಕ್ಸ್ ಪಡೆಯಲಿದ್ದು, ಮೂರು ಲಕ್ಷ ರು.ಗಳಿಂದ ಐದು ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ. ಕಡಿಮೆ ಬೆಲೆಯ ಎಎಂಟಿ ಕಾರುಗಳ ಪಟ್ಟಿಯಲ್ಲಿ ರೆನೊ ಕ್ವಿಡ್ ಹೊಸ ಅಲೆಯೆಬ್ಬಿಸಲಿದೆ.

ದಟ್ಸನ್ ರೆಡಿ-ಗೊ ಎಎಂಟಿ

ದಟ್ಸನ್ ರೆಡಿ-ಗೊ ಎಎಂಟಿ

ಕ್ವಿಡ್ ಜೊತೆ ಫ್ಲ್ಯಾಟ್ ಫಾರ್ಮ್ ಹಂಚಿಕೊಂಡಿರುವ ನಿಸ್ಸಾನ್ ಬಜೆಟ್ ಬ್ರಾಂಡ್ ದಟ್ಸನ್ ಸಹ ಅತಿ ಶೀಘ್ರದಲ್ಲೇ ರೆಡಿ ಗೊ ಎಎಂಟಿ ಕಾರನ್ನು ಬಿಡುಗಡೆ ಮಾಡಲಿದೆ. ತನ್ಮೂಲಕ ದೇಶದಲ್ಲಿ ತನ್ನದೇ ಮಾರಾಟ ವಲಯ ಸೃಷ್ಟಿ ಮಾಡುವ ಇರಾದೆಯಲ್ಲಿದೆ.

ದಟ್ಸನ್ ರೆಡಿ-ಗೊ ಎಎಂಟಿ

ದಟ್ಸನ್ ರೆಡಿ-ಗೊ ಎಎಂಟಿ

ಬಹುಶ: 800 ಸಿಸಿ ಆವೃತ್ತಿಯಲ್ಲೇ ರೆಡಿ ಗೊ ಎಎಂಟಿ ಆಯ್ಕೆಯೊಂದಿಗೆ ಬರಲಿದ್ದು, ದೇಶದ ಅತ್ಯಂತ ಅಗ್ಗದ ಎಎಂಟಿ ಕಾರೆಂಬ ಖ್ಯಾತಿಗೆ ಪಾತ್ರವಾದರೂ ಅಚ್ಚರಿಯಿಲ್ಲ. ವರ್ಷಾಂತ್ಯದಲ್ಲೇ ಬಿಡುಗಡೆ ಹೊಂದುವ ನಿರೀಕ್ಷೆಯಿರುವ ರೆಡಿ ಗೊ ಎಎಂಟಿ ಕಾರು 3.5 ಲಕ್ಷ ರು.ಗಳಿಂದ 4.5 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

ಮಾರುತಿ ವಿಟಾರಾ ಬ್ರಿಝಾ ಎಎಂಟಿ

ಮಾರುತಿ ವಿಟಾರಾ ಬ್ರಿಝಾ ಎಎಂಟಿ

ಹಾಟ್ ಕೇಕ್ ತರಹನೇ ಮಾರಾಟವಾಗುತ್ತಿರುವ ಮಾರುತಿ ವಿಟಾರಾ ಬ್ರಿಝಾ ಎಎಂಟಿ ಕಾರು ಇತ್ತೀಚೆಗಷ್ಟೇ ಇಂಡೋನೇಷ್ಯಾದಲ್ಲಿ ಅನಾವರಣಗೊಂಡಿದ್ದು, ನಿಕಟ ಭವಿಷ್ಯದಲ್ಲೇ ಭಾರತಕ್ಕೂ ಕಾಲಿಡಲಿದೆ.

ಮಾರುತಿ ವಿಟಾರಾ ಬ್ರಿಝಾ ಎಎಂಟಿ

ಮಾರುತಿ ವಿಟಾರಾ ಬ್ರಿಝಾ ಎಎಂಟಿ

ಮಾರುತಿ ಸಂಸ್ಥೆಯ ಆಗಲೇ ಸೆಲೆರಿಯೊದಂತಹ ಜನಪ್ರಿಯ ಮಾದರಿಗಳಲ್ಲಿ ಎಎಂಟಿ ಗೇರ್ ಬಾಕ್ಸ್ ಆಯ್ಕೆಯನ್ನು ನೀಡುತ್ತಿರುವುದರಿಂದ ಇದಕ್ಕೆ ಸಮಾನವಾದ ರೀತಿಯಲ್ಲಿ ವಿಟಾರಾಗೂ ತಂತ್ರಜ್ಞಾನ ಆಳವಡಿಸಿಕೊಳ್ಳಲಿದೆ. ಇದು ಅಕ್ಟೋಬರ್ ನಿಂದ ಡಿಸೆಂಬರ್ ಅವಧಿಯಲ್ಲಿ ಬಿಡುಗಡೆಯಾಗಲಿದ್ದು, ಏಳರಿಂದ ಒಂಬತ್ತು ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

ಟಾಟಾ ಟಿಯಾಗೊ ಎಎಂಟಿ

ಟಾಟಾ ಟಿಯಾಗೊ ಎಎಂಟಿ

ಸಮಕಾಲೀನ ಮಾರುಕಟ್ಟೆಯಲ್ಲಿ ಟಾಟಾ ಪಾಲಿಗೆ ಅತಿ ಹೆಚ್ಚು ಯಶಸ್ಸನ್ನು ನೀಡಿರುವ ಟಿಯಾಗೊ ಮಗದೊಂದು ಎಎಂಟಿ ಆವೃತ್ತಿಯು ಮಾರುಕಟ್ಟೆಗೆ ಅಪ್ಪಳಿಸಲು ತೆರೆಮರೆಯಲ್ಲಿ ಸಜ್ಜಾಗುತ್ತಿದೆ.

ಟಾಟಾ ಟಿಯಾಗೊ ಎಎಂಟಿ

ಟಾಟಾ ಟಿಯಾಗೊ ಎಎಂಟಿ

ವಿನ್ಯಾಸದಿಂದ ಹಿಡಿದು ಎಲ್ಲ ಹಂತದಲ್ಲೂ ಗಮನಾರ್ಹ ಮಾರಾಟವನ್ನು ಕಾಯ್ದುಕೊಂಡಿರುವ ಟಿಯಾಗೊ ಎಎಂಟಿ ಆವೃತ್ತಿಯು ಪ್ರಸಕ್ತ ಸಾಲಿನ ವರ್ಷಾಂತ್ಯದಲ್ಲಿ ಅಥವಾ ಮುಂಬರುವ ವರ್ಷಾರಂಭದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಇದು ನಾಲ್ಕರಿಂದ ಐದು ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

ಕ್ಲಚ್, ಗೇರ್ ತೊಂದರೆಗೆ ಗುಡ್ ಬೈ ಹೇಳಿ; ಬರಮಾಡಿಕೊಳ್ಳಿ ಎಎಂಟಿ ಕಾರುಗಳನ್ನ!

ನಿಮ್ಮ ಬಳಿಯೂ ಆಟೋಮ್ಯಾಟಿಕ್ ಕಾರುಗಳಿದ್ದರೆ ಇದು ಮ್ಯಾನುವಲ್ ಕಾರುಗಿಂತಲೂ ಹೇಗೆ ಭಿನ್ನ ಎಂಬುದರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕೆಳಗಡೆ ಕೊಟ್ಟಿರುವ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಉಲ್ಲೇಖಿಸಲು ಮರೆಯದಿರಿ.

Most Read Articles

Kannada
English summary
Upcoming AMT Cars In India — Time To Go Clutch Free
Story first published: Friday, August 26, 2016, 10:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X