ಕಾರು ಮಾರುಕಟ್ಟೆಯಲ್ಲಿ ಕಾವೇರುತ್ತಿರುವ ಮಹೀಂದ್ರ ಕಾರುಗಳು

By Nagaraja

ಭಾರತದ ಕ್ರೀಡಾ ಬಳಕೆಯ ದೈತ್ಯ ವಾಹನ ಸಂಸ್ಥೆ ಮಹೀಂದ್ರ ಆಂಡ್ ಮಹೀಂದ್ರ, ಉಪಯುಕ್ತ ವಾಹನ ವಿಭಾಗದಲ್ಲಿ ತನ್ನದೇ ಆದ ವಿಸ್ತಾರವಾದ ಮಾರುಕಟ್ಟೆ ವಲಯವನ್ನು ಹೊಂದಿದೆ. ನಿರಂತರ ಅಂತರಾಳದಲ್ಲಿ ಪರಿಷ್ಕೃತ ಹಾಗೂ ಹೊಸ ಹೊಸ ಮಾದರಿಗಳನ್ನು ಬಿಡುಗಡೆ ಮಾಡುವುದರಲ್ಲಿ ತಲ್ಲೀನವಾಗಿರುವ ಮಹೀಂದ್ರ ನೂತನ ತಂತ್ರಜ್ಞಾನ ಅವಿಷ್ಕರಿಸುವುದತ್ತ ತನ್ನ ಚಿತ್ತ ಹಾಯಿಸಿದೆ.

ದೇಶದಲ್ಲಿ ತನ್ನ ಬದ್ಧತೆಯನ್ನು ಪ್ರದರ್ಶಿಸುತ್ತಿರುವ ಮಹೀಂದ್ರ 2016-17ನೇ ಸಾಲಿನಲ್ಲೂ ಅನೇಕ ಹೊಸ ಹಾಗೂ ಪರಿಷ್ಕೃತ ಮಾದರಿಗಳನ್ನು ಬಿಡುಗಡೆ ಮಾಡಲಿದೆ. ಈ ಸಂಬಂಧ ವಿಸೃತವಾದ ವಿವರವನ್ನು ನೀಡುವ ಪ್ರಯತ್ನವನ್ನು ಮಾಡಲಿದ್ದೇವೆ.

ಮಹೀಂದ್ರ ಸ್ಕಾರ್ಪಿಯೊ ಪೆಟ್ರೋಲ್

ಮಹೀಂದ್ರ ಸ್ಕಾರ್ಪಿಯೊ ಪೆಟ್ರೋಲ್

ದೆಹಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ಡೀಸೆಲ್ ಕಾರುಗಳ ನಿಷೇಧದ ಕಾವು ಏರುತ್ತಿರುವಂತೆಯೇ ದೇಶದ ಮುಂಚೂಣಿಯ ಸಂಸ್ಥೆಯಾಗಿರುವ ಮಹೀಂದ್ರ ಪೆಟ್ರೋಲ್ ಎಂಜಿನ್ ನಿಯಂತ್ರಿತ ಸ್ಕಾರ್ಪಿಯೊ ಕಾರನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿದೆ.

ಮಹೀಂದ್ರ ಸ್ಕಾರ್ಪಿಯೊ ಪೆಟ್ರೋಲ್

ಮಹೀಂದ್ರ ಸ್ಕಾರ್ಪಿಯೊ ಪೆಟ್ರೋಲ್

ನೂತನ ಮಹೀಂದ್ರ ಸ್ಕಾರ್ಪಿಯೊ 2.2 ಲೀಟರ್ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸ್ಪಡುವ ಸಾಧ್ಯತೆಯಿದೆ. ಇದು 280 ಎನ್ ಎಂ ತಿರುಗುಬಲದಲ್ಲಿ 140 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ನಿರೀಕ್ಷಿತ ಬೆಲೆ: 8ರಿಂದ 12 ಲಕ್ಷ ರು.

ನಿರೀಕ್ಷಿತ ಬಿಡುಗಡೆ: 2016 ಆಗಸ್ಟ್ ನಿಂದ ಸೆಪ್ಟೆಂಬರ್

ಮಹೀಂದ್ರ ಎಕ್ಸ್ ಯುವಿ500 ಪೆಟ್ರೋಲ್

ಮಹೀಂದ್ರ ಎಕ್ಸ್ ಯುವಿ500 ಪೆಟ್ರೋಲ್

ಸ್ಕಾರ್ಪಿಯೊ ತರಹನೇ ಮಹೀಂದ್ರ ಎಕ್ಸ್ ಯುವಿ 500 ಸಹ ಪೆಟ್ರೋಲ್ ಎಂಜಿನ್ ಪಡೆಯಲು ಸಜ್ಜಾಗುತ್ತಿದೆ. ಡೀಸೆಲ್ ಕಾರುಗಳ ಮೇಲಿನ ನಿಷೇಧದ ಜೊತೆಗೆ ಪೆಟ್ರೋಲ್ ಹಾಗೂ ಡೀಸೆಲ್ ಶ್ರೇಣಿಯ ಕಾರುಗಳ ನಡುವಣ ಅಂತರವನ್ನು ಕಡಿಮೆ ಮಾಡಲು ಸಂಸ್ಥೆಗೆ ಸಹಕಾರಿಯಾಗಲಿದೆ.

ಮಹೀಂದ್ರ ಎಕ್ಸ್ ಯುವಿ500 ಪೆಟ್ರೋಲ್

ಮಹೀಂದ್ರ ಎಕ್ಸ್ ಯುವಿ500 ಪೆಟ್ರೋಲ್

ನೂತನ ಮಹೀಂದ್ರ ಎಕ್ಸ್ ಯುವಿ 500 ಮಾದರಿಯು ಸ್ಕಾರ್ಪಿಯೊಗೆ ಸಮಾನವಾದ 2.2 ಲೀಟರ್ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 280 ಎನ್ ಎಂ ತಿರುಗುಬಲದಲ್ಲಿ 140 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ನಿರೀಕ್ಷಿತ ಬೆಲೆ: 11ರಿಂದ 15 ಲಕ್ಷ ರು.

ನಿರೀಕ್ಷಿತ ಬಿಡುಗಡೆ: 2016 ಆಗಸ್ಟ್ ನಿಂದ ಅಕ್ಟೋಬರ್

ಮಹೀಂದ್ರ ಎಕ್ಸ್‌ಯುವಿ ಏರೋ

ಮಹೀಂದ್ರ ಎಕ್ಸ್‌ಯುವಿ ಏರೋ

2016 ದೆಹಲಿ ಆಟೋ ಎಕ್ಸ್ ಪೋದಲ್ಲಿ ಅತಿ ನೂತನ ಎಕ್ಸ್ ಯುವಿ ಏರೋ ಕಾನ್ಸೆಪ್ಟ್ ಕಾರನ್ನು ಮಹೀಂದ್ರ ಪ್ರದರ್ಶನಗೊಳಿಸಿತ್ತು. ಅಲ್ಲದೆ ನೂತನ ಕೂಪೆ ಶೈಲಿಯ ಎಸ್‌ಯುವಿ ಕಾರು ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು.

ಮಹೀಂದ್ರ ಎಕ್ಸ್‌ಯುವಿ ಏರೋ

ಮಹೀಂದ್ರ ಎಕ್ಸ್‌ಯುವಿ ಏರೋ

ಪೆಟ್ರೋಲ್ ಹಾಗೂ ಡೀಸೆಲ್ ಮಾದರಿಗಳಲ್ಲಿ ಬಿಡುಗಡೆಯಾಗಲಿರುವ ಮಹೀಂದ್ರ ಏರೋ, 2.2 ಲೀಟರ್ ಎಂಜಿನ್ ಗಳಿಂದ ನಿಯಂತ್ರಿಸಲ್ಪಡಲಿದೆ. ಅಲ್ಲದೆ ಗರಿಷ್ಠ ನಾವೀನ್ಯ ತಂತ್ರಜ್ಞಾನಗಳನ್ನು ಒಳಗೊಂಡಿರಲಿದೆ.

ನಿರೀಕ್ಷಿತ ಬೆಲೆ: 20ರಿಂದ 25 ಲಕ್ಷ ರು.

ನಿರೀಕ್ಷಿತ ಬಿಡುಗಡೆ: 2017

ಮಹೀಂದ್ರ ಎಕ್ಸ್‌ಯುವಿ500 ಹೈಬ್ರಿಡ್

ಮಹೀಂದ್ರ ಎಕ್ಸ್‌ಯುವಿ500 ಹೈಬ್ರಿಡ್

ಭವಿಷ್ಯದ ಸಂಚಾರ ವ್ಯವಸ್ಥೆಗೆ ಪರ್ಯಾಯ ಮಾರ್ಗವನ್ನು ಹುಡುಕಲು ತನ್ನ ಸೇವೆಯನ್ನು ಸಲ್ಲಿಸುತ್ತಿರುವ ಮಹೀಂದ್ರ, ಎಕ್ಸ್ ಯುವಿ500 ಹೈಬ್ರಿಡ್ ವಾಹನವನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಇದು ದೇಶದ ಕಾರು ವಿಭಾಗಕ್ಕೆ ದೊಡ್ಡ ಉತ್ತೇಜನವನ್ನೇ ತುಂಬಲಿದೆ.

ಮಹೀಂದ್ರ ಎಕ್ಸ್‌ಯುವಿ500 ಹೈಬ್ರಿಡ್

ಮಹೀಂದ್ರ ಎಕ್ಸ್‌ಯುವಿ500 ಹೈಬ್ರಿಡ್

ಮಹೀಂದ್ರ ಎಕ್ಸ್‌ಯುವಿ500 ಹೈಬ್ರಿಡ್ ವಾಹನವು 2.2 ಲೀಟರ್ ಎಂಹಾಕ್ ಡೀಸೆಲ್ ಎಂಜಿನ್ ಜೊತೆಗೆ ಎಲೆಕ್ಟ್ರಿಕ್ ಮೋಟಾರು ಪಡೆಯಲಿದೆ.

ನಿರೀಕ್ಷಿತ ಬೆಲೆ: 15ರಿಂದ 17 ಲಕ್ಷ ರು.

ನಿರೀಕ್ಷಿತ ಬಿಡುಗಡೆ: 2017

ಮಹೀಂದ್ರ ಸ್ಯಾಂಗ್ಯೊಂಗ್ ಟಿವೊಲಿ

ಮಹೀಂದ್ರ ಸ್ಯಾಂಗ್ಯೊಂಗ್ ಟಿವೊಲಿ

ದಕ್ಷಿಣ ಕೊರಿಯಾ ಮೂಲದ ಸ್ಯಾಂಗ್ಯೊಂಗ್ ಅಧೀನತೆಯನ್ನು ಹೊಂದಿರುವ ಮಹೀಂದ್ರ, ಜನಪ್ರಿಯ ಸ್ಯಾಂಗ್ಯೊಂಗ್ ಟಿವೊಲಿ ಕ್ರೀಡಾ ಬಳಕೆಯ ವಾಹನವನ್ನು ದೇಶಕ್ಕೆ ಪರಿಚಯಿಸಲಿದೆ.

ಮಹೀಂದ್ರ ಸ್ಯಾಂಗ್ಯೊಂಗ್ ಟಿವೊಲಿ

ಮಹೀಂದ್ರ ಸ್ಯಾಂಗ್ಯೊಂಗ್ ಟಿವೊಲಿ

ಮಹೀಂದ್ರ ಸ್ಯಾಂಗ್ಯೊಂಗ್ ಟಿವೊಲಿ ಕ್ರೀಡಾ ಬಳಕೆಯ ವಾಹನವು 1.6 ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಗಳನ್ನು ಪಡೆಯಲಿದೆ. ಇವೆರಡು ಅನುಕ್ರಮವಾಗಿ 126 (160 ಎನ್ ಎಂ ತಿರುಗುಬಲ) ಹಾಗೂ 113 ಅಶ್ವಶಕ್ತಿಗಳನ್ನು (300 ಎನ್ ಎಂ ತಿರುಗುಬಲ) ಉತ್ಪಾದಿಸಲಿದೆ.

ನಿರೀಕ್ಷಿತ ಬೆಲೆ: 8 ರಿಂದ 12 ಲಕ್ಷ ರು.

ನಿರೀಕ್ಷಿತ ಬಿಡುಗಡೆ: 2016 ವರ್ಷಾಂತ್ಯ ಅಥವಾ 2017 ವರ್ಷಾರಂಭದಲ್ಲಿ

ಮಹೀಂದ್ರ ಸ್ಯಾಂಗ್ಯೊಂಗ್ ರೆಕ್ಸ್ಟಾನ್

ಮಹೀಂದ್ರ ಸ್ಯಾಂಗ್ಯೊಂಗ್ ರೆಕ್ಸ್ಟಾನ್

ಹೊಚ್ಚ ಹೊಸ ಮಹೀಂದ್ರ ಸ್ಯಾಂಗ್ಯೊಂಗ್ ರಕ್ಸ್ಟಾನ್ ಸಹ ಭಾರತಕ್ಕೆ ನಿಕಟ ಭವಿಷ್ಯದಲ್ಲೇ ಕಾಲಿಡಲಿದೆ. ಆಕ್ರಮಣಕಾರಿ ಶೈಲಿ ಮತ್ತು ಗರಿಷ್ಠ ನಿರ್ವಹಣಾ ಎಂಜಿನ್ ಗಳು ಇದರ ಪ್ರಮುಖ ಆಕರ್ಷಣೆಯಾಗಲಿದೆ.

ಮಹೀಂದ್ರ ಸ್ಯಾಂಗ್ಯೊಂಗ್ ರೆಕ್ಸ್ಟಾನ್

ಮಹೀಂದ್ರ ಸ್ಯಾಂಗ್ಯೊಂಗ್ ರೆಕ್ಸ್ಟಾನ್

ಮಹೀಂದ್ರ ಸ್ಯಾಂಗ್ಯೊಂಗ್ ರೆಕ್ಸ್ಟಾನ್ 2.0 ಲೀಟರ್ ಪೆಟ್ರೋಲ್ ಮತ್ತು 2.2 ಲೀಟರ್ ಡೀಸೆಲ್ ಎಂಜಿನ್ ಗಳಿಂದ ನಿಂದ ನಿಯಂತ್ರಿಸಲ್ಪಡಲಿದೆ. ಇದರ ಎಂಟು ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸನ್ನು ಮರ್ಸಿಡಿಸ್ ಬೆಂಝ್ ನಿಂದ ಆಮದು ಮಾಡಿಕೊಳ್ಳಲಾಗುವುದು.

ನಿರೀಕ್ಷಿತ ಬೆಲೆ: 25 ರಿಂದ 30 ಲಕ್ಷ ರು.

ನಿರೀಕ್ಷಿತ ಬಿಡುಗಡೆ: 2017

ಕಾರು ಮಾರುಕಟ್ಟೆಯಲ್ಲಿ ಕಾವೇರುತ್ತಿರುವ ಮಹೀಂದ್ರ ಕಾರುಗಳು

ನಿಮ್ಮ ಬಳಿಯೂ ಮಹೀಂದ್ರ ಕಾರುಗಳಿದ್ದರೆ ಈ ಸಂಬಂಧ ನಿಮ್ಮ ಅನುಭವ, ಅನಿಸಿಕೆಗಳನ್ನು ನಮ್ಮ ಜೊತೆ ಕಾಮೆಂಟ್ ಬಾಕ್ಸ್ ನಲ್ಲಿ ಹಂಚಿಕೊಳ್ಳಲು ಮರೆಯದಿರಿ.

Most Read Articles

Kannada
English summary
SUV's Galore; Here Are The Upcoming Cars From Mahindra In 2016-17
Story first published: Wednesday, June 22, 2016, 17:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X