ಫೋಕ್ಸ್‌ವ್ಯಾಗನ್ ಎಮಿಯೊ; ಭಾರತೀಯರಿಗಾಗಿ ಭಾರತದಲ್ಲಿ ನಿರ್ಮಿತ ಕಾರು

By Nagaraja

ಮಹಾ ಮಾಲಿನ್ಯ ಮೋಸದ ಬಳಿಕ ಜಾಗತಿಕ ಮಟ್ಟದಲ್ಲೇ ಭಾರಿ ಹಿನ್ನಡೆಗೊಳಗಾಗಿರುವ ಜರ್ಮನಿಯ ಮೂಲದ ಫೋಕ್ಸ್ ವ್ಯಾಗನ್ ಸಂಸ್ಥೆಯು ಪ್ರಾಮಾಣಿಕ ಕ್ಷಮೆಯಾಚನೆಯನ್ನು ನಡೆಸಿದ್ದಲ್ಲದೆ ಅತಿ ನೂತನ ಎಮಿಯೊ ಕಾಂಪಾಕ್ಟ್ ಸೆಡಾನ್ ಕಾರನ್ನು ಭರ್ಜರಿ ಅನಾವರಣಗೊಳಿಸಿದೆ.

ಫೋಕ್ಸ್ ವ್ಯಾಗನ್ ಎಮಿಯೊ ನಾಲ್ಕು ಮೀಟರ್ ಉದ್ದ ಪರಿಮಿತಿಯೊಳಗೆ ಭಾರತೀಯರಾಗಿ ಭಾರತದಲ್ಲೇ ನಿರ್ಮಿತ ಒಂದು ಕಾಂಪಾಕ್ಟ್ ಸೆಡಾನ್ ಕಾರಾಗಿದ್ದು, ಪ್ರಸಕ್ತ ಸಾಲಿನ ದ್ವಿತಿಯಾರ್ಧದಲ್ಲಿ ಭರ್ಜರಿ ಬಿಡುಗಡೆ ಕಾಣಲಿದೆ.

ಫೋಕ್ಸ್‌ವ್ಯಾಗನ್ ಎಮಿಯೊ


ನೂತನ ಎಮಿಯೊ ಫೋಕ್ಸ್ ವ್ಯಾಗನ್ ಸಂಸ್ಥೆಯಿಂದ ನಿರ್ಮಾಣವಾಗಿರುವ ಮೊತ್ತ ಮೊದಲ ಕಾಂಪಾಕ್ಟ್ ಸೆಡಾನ್ ಕಾರಾಗಿದೆ. ಭಾರತೀಯ ಗ್ರಾಹಕರ ಬೇಡಿಕೆಗಳಿಗಾನುಸಾರವಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ.

2016 ದೆಹಲಿ ಆಟೋ ಎಕ್ಸ್ ಪೋದಲ್ಲೂ ಭರ್ಜರಿ ಪ್ರದರ್ಶನ ಕಾಣಲಿರುವ ನೂತನ ಎಮಿಯೊ, ಎರಡು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಅವುಗಳೆಂದರೆ

1.2 ಲೀಟರ್ 3 ಸಿಲಿಂಡರ್ ಎಂಪಿಐ ಮತ್ತು 1.5 ಲೀಟರ್ 4 ಸಿಲಂಡರ್ ಟಿಡಿಐ ಎಂಜಿನ್.

ಎಮಿಯೊ ಹೆಸರಲ್ಲೇನಿದೆ?
'ಎಮೊ' ಎಂಬ ಲ್ಯಾಟಿನ್ ಪದದಿಂದ ಎಮಿಯೊ ಉಲ್ಲೇಖಿಸಲಾಗಿದೆ. ಇಲ್ಲಿ ಎಮೊ ಎಂಬುದು 'ಐ ಲವ್' ಎಂಬ ಅರ್ಥವನ್ನು ನೀಡುತ್ತದೆ.

ಮಹಾರಾಷ್ಟ್ರದಲ್ಲಿ ಸ್ಥಿತಗೊಂಡಿರುವ ಫೋಕ್ಸ್ ವ್ಯಾಗನ್ ಘಟಕದಲ್ಲಿ ನಿರ್ಮಾಣಗೊಳ್ಳಲಿರುವ ಎಮಿಯೊ, ಸ್ಪೋರ್ಟಿ ಹಾಗೂ ಅತ್ಯುತ್ತಮ ಚಲನಶೀಲತೆಯನ್ನು ಕಾಪಾಡಿಕೊಂಡಿದೆ.

ಪ್ರಮುಖವಾಗಿಯೂ ನಗರ ಪ್ರದೇಶದ ಯುವ ಗ್ರಾಹಕರನ್ನು ಗುರಿಯಾಗಿರಿಸಿಕೊಳ್ಳಲಿರುವ ಫೋಕ್ಸ್ ವ್ಯಾಗನ್ ಎಮಿಯೊದ 1.2 ಲೀಟರ್ 3 ಸಿಲಿಂಡರ್ ಎಂಪಿಐ ಫೈವ್ ಸ್ಪೀಡ್ ಗೇರ್ ಬಾಕ್ಸ್ ಪಡೆಯಲಿದೆ. ಅದೇ ಹೊತ್ತಿಗೆ 1.5 ಲೀಟರ್ 4 ಸಿಲಂಡರ್ ಟಿಡಿಐ ಎಂಜಿನ್ 5 ಸ್ಪೀಡ್ ಜೊತೆಗೆ 7 ಸ್ಪೀಡ್ ಡಿಎಸ್ ಜಿ ಆಟೋ ಗೇರ್ ಬಾಕ್ಸ್ ಪಡೆಯಲಿದೆ.


ಇನ್ನು ಭದ್ರತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಡ್ಯುಯಲ್ ಫ್ರಂಟ್ ಏರ್ ಬ್ಯಾಗ್ ಜೊತೆ ಎಬಿಎಸ್ ಸ್ಟ್ಯಾಂಡರ್ಡ್ ಆಗಿ ಪಡೆಯಲಿದೆ. ಉನ್ನತ ಮಟ್ಟದ ನಿರ್ಮಾಣ ಗುಣಮಟ್ಟತೆ, ಚಾಲನ ಗುಣಮಟ್ಟ, ಹ್ಯಾಂಡ್ಲಿಂಗ್ ಹಾಗೂ ಹೈ ಸ್ಪೀಡ್ ಸ್ಥಿರತೆಯು ಇನ್ನಿತರ ವೈಶಿಷ್ಟ್ಯಗಳಾಗಿದೆ.

ಚಾಲಕ ಹಾಗೂ ಪ್ರಯಾಣಿಕರ ಅನುಕೂಲ ಹಾಗೂ ಆರಾಮದಾಯಕತೆಗೆ ಹೆಚ್ಚಿನ ಒತ್ತು ಕೊಟ್ಟಿರುವ ಫೋಕ್ಸ್ ವ್ಯಾಗನ್, ಇದೇ ಮೊದಲ ಬಾರಿಗೆ ಕಾಂಪಾಕ್ಟ್ ಸೆಡಾನ್ ವಿಭಾಗದಲ್ಲಿ ಕ್ರೂಸ್ ಕಂಟ್ರೋಲ್, ರೈನ್ ಸೆನ್ಸಿಂಗ್ ವೈಪರ್ ಜೊತೆ ಸ್ಟಾಟಿಕ್ ಕಾರ್ನರಿಂಗ್ ಲೈಟ್ಸ್ ಹಾಗೂ ಡೈನಾಮಿಕ್ ಟಚ್ ಸ್ಕ್ರೀನ್ ಮಲ್ಟಿ ಮೀಡಿಯಾ ಮ್ಯೂಸಿಕ್ ಸಿಸ್ಟಂ (ಮಿರರ್ ಲಿಂಕ್, ಐ-ಪೊಡ್ ಕನೆಕ್ಟಿವಿಟಿ, ಫೋನ್ ಬುಕ್/ ಎಸ್‌ಎಂಎಸ್ ವೀಕ್ಷಣೆ) ಸೇವೆಗಳನ್ನು ನೀಡುತ್ತಿದೆ.

ಪ್ರತಿಸ್ಪರ್ಧಿಗಳು

  • ಮಾರುತಿ ಸುಜುಕಿ ಡಿಜೈರ್
  • ಹ್ಯುಂಡೈ ಎಕ್ಸ್‌ಸೆಂಟ್
  • ಹೋಂಡಾ ಅಮೇಜ್
  • ಫೋರ್ಡ್ ಫಿಗೊ ಆಸ್ಪೈರ್

ಮೈಲೇಜ್
ಪೆಟ್ರೋಲ್: 16.47 ಕೀ.ಮೀ.
ಡೀಸೆಲ್: 20.14 ಕೀ.ಮೀ.

10 ವೈಶಿಷ್ಟ್ಯಗಳು

  • ರೈನ್ ಸೆನ್ಸಿಂಗ್ ವೈಪರ್ (ಫಸ್ಟ್ ಇನ್ ಸೆಗ್ಮೆಂಟ್),
  • ಆಟೋ ಡಿಮ್ಮಿಂಗ್ ಐಆರ್‌ವಿಎಂ,
  • ಕ್ರೂಸ್ ಕಂಟ್ರೋಲ್ (ಫಸ್ಟ್ ಇನ್ ಸೆಗ್ಮೆಂಟ್),
  • ಹಿಂದುಗಡೆ ಎಸಿ ವೆಂಟ್ಸ್,
  • ಎಬಿಎಸ್, ಇಪಿಎಸ್ ಮತ್ತು ಸ್ಟ್ಯಾಂಡರ್ಡ್ ಡ್ಯುಯಲ್ ಏರ್ ಬ್ಯಾಗ್,
  • ಟಚ್ ಸ್ಕ್ರೀನ್ ಮಾಹಿತಿ ಮನರಂಜನಾ ವ್ಯವಸ್ಥೆ,
  • ಕೂಲ್ಡ್ ಗ್ಲೋವ್ ಬಾಕ್ಸ್,
  • ಫ್ರಂಟ್ ಆರ್ಮ್ ರೆಸ್ಟ್,
  • ಹಿಲ್ ಹೋಲ್ಡ್ ಕಂಟ್ರೋಲ್,
  • ಎಲೆಕ್ಟ್ರಾನಿಕ್ ಇಂಮೊಬಿಲೈಜರ್

Most Read Articles

Kannada
English summary
Volkswagen Ameo Revealed In India
Story first published: Tuesday, February 2, 2016, 18:32 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X