ಫೋಕ್ಸ್‌ವ್ಯಾಗನ್ ಗಾಲ್ಫ್ ಜಿಟಿಐ ಶಕ್ತಿಶಾಲಿ ಕಾರು ಭಾರತಕ್ಕೆ

Written By:

ಜರ್ಮನಿಯ ಪ್ರತಿಷ್ಠಿತ ವಾಹನ ಸಂಸ್ಥೆ ಫೋಕ್ಸ್‌ವ್ಯಾಗನ್, ಅತಿ ನೂತನ ಶಕ್ತಿಶಾಲಿ ಗಾಲ್ಫ್ ಜಿಟಿಐ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡುವ ಯೋಜನೆ ಹೊಂದಿದೆ. ಈ ಸಂಬಂಧ ಫೋಕ್ಸ್ ವ್ಯಾಗನ್ ಇಂಡಿಯಾ ಪ್ರಯಾಣಿಕ ಕಾರು ನಿರ್ದೇಶಕರರಾಗಿರುವ ಮೈಕಲ್ ಮೇಯರ್ ಸೂಚನೆಯನ್ನು ನೀಡಿದ್ದಾರೆ.

ಕಳೆದ ತಿಂಗಳಿನಲ್ಲಷ್ಟೇ ಮೂರು ಡೋರ್ ಗಳ ಪೊಲೊ ಜಿಟಿಐ ಕಾರನ್ನು ಫೋಕ್ಸ್ ವ್ಯಾಗನ್ ಬಿಡುಗಡೆಗೊಳಿಸಿತ್ತು. ಇದು ಸೀಮಿತ 99 ಯುನಿಟ್ ಗಳಷ್ಟು ಮಾರಾಟವಾಗಲಿದೆ.

ಈಗ ಪೊಲೊ ಜಿಟಿಐ ಕಾರಿನ ಹಿರಿಯ ಸೋದರನಾಗಿರುವ ಹೆಚ್ಚು ಶಕ್ತಿಶಾಲಿ ಗಾಲ್ಫ್ ಜಿಟಿಐ ಭಾರತಕ್ಕೆ ಕಾಲಿಡಲು ಸಜ್ಜಾಗುತ್ತಿದೆ. ಇದು ನಿರ್ವಹಣಾ ಕಾರು ವಿಭಾಗದಲ್ಲಿ ಹೊಸ ಅಧ್ಯಾಯವನ್ನು ತೆರೆದುಕೊಳ್ಳಲಿದೆ.

2018 ಅಥವಾ 2019ರಲ್ಲಿ ಫೋಕ್ಸ್ ವ್ಯಾಗನ್ ಜಿಟಿಐ ಕುಟುಂಬದಿಂದ ಹೆಚ್ಚಿನ ಶಕ್ತಿಶಾಲಿ ಕಾರುಗಳನ್ನು ನಿರೀಕ್ಷೆ ಮಾಡಬಹುದಾಗಿದೆ. ಇನ್ನೊಂದೆಡೆ ಭಾರತದಲ್ಲಿ ನಿರ್ವಹಣಾ ಕಾರುಗಳಿಗೆ ನಿಧಾನವಾಗಿ ಬೇಡಿಕೆ ಹೆಚ್ಚುತ್ತಿದೆ.

ಜಾಗತಿಕ ಮಟ್ಟದಲ್ಲಿ ಫೋಕ್ಸ್ ವ್ಯಾಗನ್ ಗಾಲ್ಫ್ ಕಾರು ಸಂಸ್ಥೆಗೆ ಅತಿ ಹೆಚ್ಚಿನ ಯಶಸ್ಸನ್ನು ತಂದು ಕೊಟ್ಟಿದೆ. ಇದು ಪೊಲೊಗಿಂತಲೂ ಮೇಲ್ದರ್ಜೆಯಲ್ಲಿ ಗುರುತಿಸಿಕೊಳ್ಳಲಿದೆ.

ಸಂಸ್ಥೆಯ ಎಂಕ್ಯೂಬಿ ಆರ್ಕಿಟೇಕ್ಚರ್ ತಳಹದಿಯಲ್ಲಿ ನಿರ್ಮಾಣವಾಗಲಿರುವ ಫೋಕ್ಸ್ ವ್ಯಾಗನ್ ಗಾಲ್ಫ್ ಜಿಟಿಐ, ಇಎ 288 2.0 ಲೀಟರ್ ಟಿಎಸ್ ಐ ಟರ್ಬೊಚಾರ್ಜ್ಡ್ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 230 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ ಹೊಸತಾಗಿ ಅಭಿವೃದ್ಧಿಗೊಳಿಸಿದ ಸೆವೆನ್ ಸ್ಪೀಡ್ ಡಿಎಸ್ ಜಿ ಗೇರ್ ಬಾಕ್ಸ್ ಇದರಲ್ಲಿರಲಿದೆ.

ಈ ನಡುವೆ ಮುಂದಿನ ವರ್ಷದಲ್ಲಿ ಟೈಗ್ವಾನ್ ಕ್ರೀಡಾ ಬಳಕೆಯ ವಾಹನವನ್ನು ಬಿಡುಗಡೆ ಮಾಡುವ ಯೋಜನೆಯನ್ನು ಫೋಕ್ಸ್ ವ್ಯಾಗನ್ ಹೊಂದಿದೆ. ಇದು ಕೂಡಾ ಎಂಕ್ಯೂಬಿ ತಳಹದಿಯಲ್ಲಿ ನಿರ್ಮಾಣವಾಗಲಿದ್ದು, 30 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

English summary
Volkswagen Ready To Bring The World's Most Famous Hot Hatchback To India
Please Wait while comments are loading...

Latest Photos