ಫೋಕ್ಸ್‌ವ್ಯಾಗನ್‌ ಟೈಗನ್ ಅತ್ಯಂತ ಸೇಫ್ ಕಾರು!

By Nagaraja

ಭವಿಷ್ಯದಲ್ಲಿ ಭಾರತಕ್ಕೂ ಆಗಮಿಸಲಿರುವ ಫೋಕ್ಸ್ ವ್ಯಾಗನ್ ಟೈಗನ್, ಯುರೋ ಎನ್‌ಸಿಎಪಿ ಢಿಕ್ಕಿ ಪರೀಕ್ಷೆಯಲ್ಲಿ ಪಂಚ ತಾರೆಗಳನ್ನು ಗೆದ್ದುಕೊಂಡಿದೆ. ಈ ಮೂಖಾಂತರ ಎಲ್ಲ ವಿಭಾಗದಲ್ಲೂ ಅತ್ಯಂತ ಸುರಕ್ಷಿತ ಕಾರೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

2015 ಫ್ರಾಂಕ್ ಫರ್ಟ್ ಮೋಟಾರು ಶೋದಲ್ಲಿ ಫೋಕ್ಸ್ ವ್ಯಾಗನ್, ಟೈಗನ್ ಕ್ರೀಡಾ ಬಳಕೆಯ ವಾಹನವನ್ನು ಅನಾವರಣಗೊಳಿಸಿತ್ತು. 2016 ಆಟೋ ಎಕ್ಸ್ ಪೋದಲ್ಲೂ ಪ್ರದರ್ಶನ ಕಂಡಿರುವ ಫೋಕ್ಸ್ ವ್ಯಾಗನ್ ಟೈಗನ್, 2017ನೇ ಸಾಲಿನಲ್ಲಿ ದೇಶದಲ್ಲಿ ಬಿಡುಗಡೆಯಾಗಲಿದೆ.

ಫೋಕ್ಸ್‌ವ್ಯಾಗನ್‌ ಟೈಗನ್ ಅತ್ಯಂತ ಸೇಫ್ ಕಾರು!

ಏಳು ಸೀಟುಗಳ ಪ್ರೀಮಿಯಂ ಕ್ರೀಡಾ ಬಳಕೆಯ ವಾಹನವಾಗಿರುವ ಫೋಕ್ಸ್ ವ್ಯಾಗನ್ ಟೈಗನ್, ವಯಸ್ಕರ ಸುರಕ್ಷತೆಯಲ್ಲಿ ಶೇಕಡಾ 96ನ್ನು ಮತ್ತು ಮಕ್ಕಳ ಸುರಕ್ಷತೆಯಲ್ಲಿ ಶೇಕಡಾ 84ರಷ್ಟನ್ನು ಗಿಟ್ಟಿಸಿಕೊಂಡಿದೆ.

ಫೋಕ್ಸ್‌ವ್ಯಾಗನ್‌ ಟೈಗನ್ ಅತ್ಯಂತ ಸೇಫ್ ಕಾರು!

ಅದೇ ರೀತಿ ಪಾದಚಾರಿ ರಕ್ಷಣೆಯಲ್ಲಿ ಶೇಕಡಾ 72, ಸುರಕ್ಷತಾ ಸಹಾಯಿ ವ್ಯವಸ್ಥೆಯಲ್ಲಿ ಶೇಕಡಾ 69ರಷ್ಟನ್ನು ರೇಟಿಂಗ್ ಪಡೆದುಕೊಂಡಿದೆ.

ಫೋಕ್ಸ್‌ವ್ಯಾಗನ್‌ ಟೈಗನ್ ಅತ್ಯಂತ ಸೇಫ್ ಕಾರು!

ಗಂಟೆಗೆ 64 ಕೀ.ಮೀದಲ್ಲಿ ಮುಂಭಾಗದ ಢಿಕ್ಕಿ ಪರೀಕ್ಷೆಗೊಳಪಡಿಸಲಾಗಿತ್ತು. ಹಾಗೆಯೇ ಗಂಟೆಗೆ 50 ಕೀ.ಮೀ. ವೇಗದಲ್ಲಿ ಬದಿಯಿಂದ ಢಿಕ್ಕಿ ಪರೀಕ್ಷೆ ಮಾಡಲಾಗಿತ್ತು.

ಫೋಕ್ಸ್‌ವ್ಯಾಗನ್‌ ಟೈಗನ್ ಅತ್ಯಂತ ಸೇಫ್ ಕಾರು!

ಎರಡನೇ ತಲೆಮಾರಿನ ಫೋಕ್ಸ್ ವ್ಯಾಗನ್ ಟೈಗನ್ ಕಾರಿನ ಭದ್ರತೆಗೂ ಅತಿ ಹೆಚ್ಚು ಪ್ರಾಮುಖ್ಯತೆಯನ್ನು ಕೊಡಲಾಗಿದೆ. ಇದರಲ್ಲಿ ಏಳು ಏರ್ ಬ್ಯಾಗ್ ವ್ಯವಸ್ಥೆಗಳನ್ನು ಒದಗಿಸಲಾಗುತ್ತಿದೆ.

ಫೋಕ್ಸ್‌ವ್ಯಾಗನ್‌ ಟೈಗನ್ ಅತ್ಯಂತ ಸೇಫ್ ಕಾರು!

ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಜೊತೆ ಕೌಂಟರ್ ಸ್ಟೀರ್ ಅಸಿಸ್ಟನ್ಸ್, ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ ಜೊತೆ ಬ್ರೇಕಿಂಗ್ ಅಸಿಸ್ಟನ್ಸ್, ಢಿಕ್ಕಿ ಮೊದಲು ಬ್ರೇಕಿಂಗ್ ವ್ಯವಸ್ಥೆ ಇತ್ಯಾದಿ ತಂತ್ರಗಾರಿಕೆಗಳನ್ನು ಕೊಡಲಾಗಿದೆ.

ಫೋಕ್ಸ್‌ವ್ಯಾಗನ್‌ ಟೈಗನ್ ಅತ್ಯಂತ ಸೇಫ್ ಕಾರು!

ಅಂದ ಹಾಗೆ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಾಗಲಿರುವ ಫೋಕ್ಸ್ ವ್ಯಾಗನ್ ಟೈಗನ್ ಆರು ಸ್ಪೀಡ್ ಹಾಗೂ ಏಳು ಸ್ಪೀಡ್ ಡಿಎಸ್ ಜಿ ಗೇರ್ ಬಾಕ್ಸ್ ಪಡೆಯಲಿದೆ.

Most Read Articles

Kannada
English summary
Set To Launch Soon VW Tiguan Scores 5-Star Rating In Euro NCAP Crash Test
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X