ಟ್ರಕ್ ಚಾಲಕರಿಗೆ ಗುಡ್ ನ್ಯೂಸ್: ಇನ್ಮೇಲೆ ಟ್ರಕ್‌ನಲ್ಲಿಯೂ ಇರಲಿದೆ ಈ ಹೈಟೆಕ್ ವ್ಯವಸ್ಥೆ

Written By:

ಟ್ರಕ್ ತಯಾರಿಕೆಯಲ್ಲಿ ಜಗತ್ತಿನ ಎರಡನೇ ಅತಿದೊಡ್ಡ ಸಂಸ್ಥೆಯಾಗಿರುವ 'ಡೈಮ್ಲರ್' ಅಪಘಾತಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಟ್ರಕ್ ಗಳಲ್ಲಿ ಹವಾನಿಯಂತ್ರಣ ವ್ಯವಸ್ಥೆ ಅಳವಡಿಸಲು ತೀರ್ಮಾನಿಸಿದೆ.

ಜಗತ್ತಿನೆಲ್ಲ ಮುಂಚೂಣಿಯ ಸಂಸ್ಥೆಗಳು ಭವಿಷ್ಯದ ವಾಹನಗಳನ್ನು ಅಭಿವೃದ್ಧಪಡಿಸುವದರಲ್ಲಿ ತಲ್ಲೀನವಾಗಿರುವ ಇದೇ ಹೊತ್ತಿನಲ್ಲಿ, ಜಗತ್ತಿನ ಎರಡನೇ ಅತಿದೊಡ್ಡ ಟ್ರಕ್ ತಯಾರಕ ಸಂಸ್ಥೆಯಾಗಿರುವ ಡೈಮ್ಲರ್ ಟ್ರಕ್ ಗಳಲ್ಲಿ ಹವಾನಿಯಂತ್ರಣ ವ್ಯವಸ್ಥೆ ಅಳವಡಿಸಲಿದೆ.

ಹವಾನಿಯಂತ್ರಣ ವ್ಯವಸ್ಥೆ ಅಳವಡಿಸುವುದರಿಂದ ಟ್ರಕ್ ಚಾಲಕನಿಗೆ ಹೆಚ್ಚಿನ ಮಟ್ಟದ ಶ್ರಮ ಆಗದೆ ಇರುವುದರಿಂದ ಚಾಲಕ ಹೆಚ್ಚು ಜಾಗೃತನಾಗಿರುವುದಲ್ಲದೆ, ಆರಾಮಧಾಯಕ ಪ್ರಯಾಣ ಮಾಡಬಹುದಾಗಿದೆ.

ಹವಾನಿಯಂತ್ರಣ ವ್ಯವಸ್ಥೆ ಅಳವಡಿಸುವ ಬಗ್ಗೆ ಈಗಾಗಲೇ ದುಬಾರಿ ಬೆಲೆಯ ಟ್ರಕ್ ತಯಾರಕ ಸಂಸ್ಥೆ ಡೈಮ್ಲರ್ ಕಾರ್ಯಪ್ರವೃತರಾಗಿದ್ದು, ಸದ್ಯದರಲ್ಲಿಯೇ ಪ್ರತಿಯೊಂದು ವಿವರವನ್ನು ಪ್ರಕಟಣೆಯಲ್ಲಿ ತಿಳಿಸಲಿದೆ.

ಡೈಮ್ಲರ್ ಇಂಡಿಯಾ ಕಮರ್ಷಿಯಲ್ ವೆಹಿಕಲ್ಸ್ (ಡಿಐಸಿವಿ), 2012ನೇ ಜೂನ್‌ನಲ್ಲಿ 'ಭಾರತ್ ಬೆಂಝ್' ಫ್ಲಾಟ್ ಫಾರ್ಮ್‌ನಲ್ಲಿ ಚೆನ್ನೈನಲ್ಲಿ ಉತ್ಪಾದನೆ ಆರಂಭಿಸಿತ್ತು.

ಹೆಚ್ಚು ಪರಿಣಾಮಕಾರಿಯಲ್ಲದ ಸಾಧಾರಣ ಮಟ್ಟದ ಗಾಳಿ ಉಗುಳುವ ಯಂತ್ರ ಇರಿಸುವ ಬಗ್ಗೆ ಹೆಚ್ಚಿನ ಟ್ರೆಕ್ ತಯಾರಕ ಸಂಸ್ಥೆಗಳು ಮುಂದಾಗಿರುವುದನ್ನು ತಳ್ಳಿಹಾಕಿರುವ ಡೈಮ್ಲರ್, ತನ್ನ ಟ್ರಕ್ ಗಳಲ್ಲಿ ಶ್ರೇಷ್ಠಮಟ್ಟದ ಹವಾನಿಯಂತ್ರಣ ವ್ಯವಸ್ಥೆ ಅಳವಡಿಸಿದ್ದೇವೆ, ಎಂದು ಸ್ಪಷ್ಟಪಡಿಸಿದೆ.

ಡೈಮ್ಲರ್ ಇಂಡಿಯಾ ತನ್ನ ಮಾತೃಸಂಸ್ಥೆಯಾಗಿರುವ 'ಮರ್ಸಿಡಿಸ್ ಬೆಂಝ್' ಸಂಸ್ಥೆಯ ಸಹಯೋಗದೊಂದಿಗೆ ಭಾರತದಲ್ಲಿ ಟ್ರಕ್ ತಯಾರಿಕೆಯಲ್ಲಿ ತೊಡಗಿಕೊಂಡಿದೆ.

ಚಾಲಕರ ಸಮಸ್ಯೆಗಳನ್ನು ಅರಿತುಕೊಂಡಿರುವ ಡೈಮ್ಲರ್, ದೀರ್ಘ ದೂರದ ವೇಳೆ ಒತ್ತಡ ರಹಿತ ಪಯಣಕ್ಕೆ ಹೆಚ್ಚಿನ ಆದ್ಯತೆ ನೀಡುವ ದೃಷ್ಟಿ ಇಂದ ಈ ತೀರ್ಮಾನಕ್ಕೆ ಬಂದಿರುವುದಾಗಿ ಕಂಪನಿಯ ವಕ್ತಾರರು ತಿಳಿಸಿದ್ದಾರೆ.

ಡೈಮ್ಲರ್ ಇಂಡಿಯಾದ ವಾಣಿಜ್ಯ ವಾಹನಗಳ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಓ ಆದ ಎರಿಚ್ ನಿಸ್ಸೆಲ್ ಹೌಫ್ ಮಾತನಾಡಿ, " ಲಾರಿಗಳಲ್ಲಿ ಅಳವಡಿಸಲು ಉದ್ದೇಶಿಸಿರುವ ಹವಾನಿಯಂತ್ರಣ ವ್ಯವಸ್ಥೆ ಕೇವಲ ಆರಾಮಧಾಯಕ ಮತ್ತು ಐಷಾರಾಮಿ ಉದ್ದೇಶಗಳನ್ನು ಇಟ್ಟುಕೊಂಡು ಮಾಡಿರುವ ವ್ಯವಸ್ಥೆ ಅಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.

ಮಾತು ಮುಂದುವರೆಸಿದ ಎರಿಚ್ ನಿಸ್ಸೆಲ್ ಹೌಫ್, "ಈ ಹವಾನಿಯಂತ್ರಣ ವ್ಯವಸ್ಥೆ ಅಳವಡಿಸುವುದರಿಂದ ಟ್ರಕ್ ಚಾಲಕನಿಗೆ ಶ್ರಮ ಕಡಿಮೆಯಾಗಲಿದ್ದು, ಇದರಿಂದಾಗಿ ಅಪಘಾತಗಳನ್ನು ಕಡಿಮೆ ಮಾಡುವ ಉದ್ದೇಶ ಹೊಂದಲಾಗಿದೆ ಹಾಗು ದೂರದ ಪ್ರಯಾಣವನ್ನು ಮತ್ತಷ್ಟು ಉತ್ಸಾಹದಿಂದ ಮಾಡಬಹುದಾಗಿದೆ" ಎಂದು ತಿಳಿಸಿದರು.

ಸಾಧಾರಣ ಮಟ್ಟದ ಗಾಳಿ ಉಗುಳುವ ಯಂತ್ರ ಕೇವಲ ಕಡಿಮೆ ವೆಚ್ಚ ತಗುಲಲಿದೆ ಎಂಬ ಒಂದೇ ಕಾರಣಕ್ಕೆ ಅದನ್ನು ಅಳವಡಿಸಲು ಬೇರೆ ಕಂಪನಿಗಳು ಪ್ರಯತ್ನಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಎರಿಚ್ ನಿಸ್ಸೆಲ್ ಹೌಫ್ ಪ್ರೆಶ್ನಿಸಿದ್ದಾರೆ.

ಗಾಳಿ ಉಗುಳುವ ಯಂತ್ರದಿಂದಾಗಿ ಯಾವುದೇ ಪ್ರಯೋಜನ ಇಲ್ಲದೆ ಇರುವುದು ಮತ್ತಷ್ಟು ತಾಪಮಾನ ಹೆಚ್ಚಿಸಿವುದರಲ್ಲಿ ಈ ಯಂತ್ರದ ಪಾತ್ರ ಪ್ರಮುಖವಾಗಿರುವುದನ್ನು ಗಮನಿಸಿರುವ ಡೈಮ್ಲರ್ ಇಂಡಿಯಾ ಈ ನಿರ್ಧಾರಕ್ಕೆ ಬಂದಿದೆ.

ಸದ್ಯ 9 ರಿಂದ 49 ಟನ್ ವರೆಗೂ ಇರುವ ಎಲ್ಲಾ ಟ್ರಕ್ ಗಳ ವಿಭಾಗದಲ್ಲಿ ಭಾರತ್ ಬೆಂಜ್ ತನ್ನ ಅಸ್ತಿತ್ವ ಹೊಂದಿದ್ದು, ಕಂಪನಿಯ ಹವಾನಿಯಂತ್ರಣ ವ್ಯವಸ್ಥೆ ಅಳವಡಿಕೆಯ ನಿರ್ಧಾರ ಬೇರೆ ಟ್ರಕ್ ತಯಾರಕ ಕಂಪನಿಗಳ ಮೇಲೆ ಖಂಡಿತ ಬೀರಲಿದ್ದು, ಈ ವಿಚಾರವಾಗಿ ಕಂಪನಿಗಳು ಈಗಾಗಲೇ ಚಿಂತನೆ ನೆಡೆಸಿವೆ.

ಚಾಲಕರೇ ಹೇಳುವ ಪ್ರಕಾರ ಹವಾನಿಯಂತ್ರಣ ವ್ಯವಸ್ಥೆ ಅಳವಡಿಸುವುದರಿಂದ ಹೆಚ್ಚಿನ ಇಂಧನ ವ್ಯಯವಾಗಲಿದೆಯಾದರೂ, ಶ್ರಮ ಕಡಿಮೆಯಾಗಲಿರುವುದರಿಂದ ಇನ್ನು ಹೆಚ್ಚಿನ ದೂರ ಕ್ರಮಿಸುವುದರಿಂದ ಒಡೆಯನಿಗೆ ಹೆಚ್ಚು ಲಾಭವಾಗಲಿದೆ ಎನ್ನುತ್ತಿದ್ದಾರೆ.

ಅತಿ ಹೆಚ್ಚು ಜನರು ವೀಕ್ಷಿಸಿದ ಲೇಖನಗಳು ಈ ಕೆಳಗಿನಂತಿವೆ...

ಒಂದು ಲೀಟರ್ ನೀರಿಗೆ 300 ಮೈಲಿ ದೂರ ಕ್ರಮಿಸುತ್ತೆ ಈ ಬೈಕ್ !!

ಡ್ರೈವ್‌ಸ್ಪಾರ್ಕ್‌ನಲ್ಲಿ ನೋಡಬೇಕಾದ ಫೋಟೋ ಗ್ಯಾಲರಿ

Click to compare, buy, and renew Car Insurance online

Buy InsuranceBuy Now

English summary
Daimler India Commercial Vehicles has stated that AC in trucks can help prevent accidents due to less driver fatigue. The company also opposes the proposed blower system in trucks.
Please Wait while comments are loading...

Latest Photos