ಬ್ರಿಟಿಷ್ ಜಿಟಿ ರೇಸ್ ಕಾರ್ ಚಾಂಪಿಯನ್‌ಶಿಪ್- ಅವಕಾಶ ಪಡೆದ ಕನ್ನಡದ ಯುವಕ..!!

ಪ್ರತಿಷ್ಠಿತ ಬ್ರಿಟಿಷ್ ಜಿಟಿ ಕಾರ್ ಚಾಂಪಿಯನ್‌ಶಿಪ್‌ನಲ್ಲಿ ಸ್ಫರ್ಧಿಸಲು ಬೆಂಗಳೂರಿನ ಯುವಕನೋರ್ವನಿಗೆ ಅವಕಾಶ ದೊರಕಿದ್ದು, ಬ್ಲ್ಯಾಕ್ ಬುಲ್ ಗ್ಯಾರೇಜ್ 59 ತಂಡ ಪ್ರತಿನಿಧಿಸಲು ಸಜ್ಜಾಗಿದ್ದಾನೆ.

By Praveen

ಬ್ರಿಟಿಷ್ ಜಿಟಿ ರೇಸ್ ಕಾರ್ ಚಾಂಪಿಯನ್‌ಶಿಪ್‌ನಲ್ಲಿ ಬೆಂಗಳೂರಿನ ಯುವಕ ಅಖೀಲ್ ರಬೀಂದ್ರಾ ಎಂಬುವರಿಗೆ ಸ್ಥಾನ ದೊರಕಿದೆ.ವಿಶ್ವದ ಪ್ರಮುಖ 7 ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಅಖೀಲ್, #59 570S GT4 ರೇಸ್ ಕಾರ್ ಚಾಲನೆ ಮಾಡಲಿದ್ದಾನೆ.

ಬ್ರಿಟಿಷ್ ಜಿಟಿ ರೇಸ್ ಕಾರ್ ಚಾಂಪಿಯನ್‌ಶಿಪ್- ಅವಕಾಶ ಪಡೆದ ಕನ್ನಡದ ಯುವಕ..!!

ರೇಸ್ ಕಾರ್ ಚಾಂಪಿಯನ್‌ಶಿಪ್‌ನಲ್ಲಿ ಹೆಸರು ಮಾಡುತ್ತಿರುವ ಅಖೀಲ್ ಸಾಧನೆ ಮೆಚ್ಚಿರುವ ಬ್ಲ್ಯಾಕ್ ಬುಲ್ ಗ್ಯಾರೇಜ್ 59 ತಂಡ, ಅಖೀಲ್ ಸೇರಿದಂತೆ ಒಟ್ಟು 7 ಮಂದಿ ಉದಯೋನ್ಮುಖ ಆಟಗಾರರಿಗೆ ಸ್ಥಾನ ನೀಡಿದೆ. ಅಖೀಲ್ ಮೇಲೆ ಹೆಚ್ಚು ನೀರಿಕ್ಷೆ ಇಟ್ಟುಕೊಂಡಿರುವ ಬ್ಲ್ಯಾಕ್ ಬುಲ್ ಗ್ಯಾರೇಜ್ 59 ತಂಡ ಇದಕ್ಕಾಗಿ ಭಾರೀ ತಯಾರಿ ನಡೆಸುತ್ತಿದೆ.

ಬ್ರಿಟಿಷ್ ಜಿಟಿ ರೇಸ್ ಕಾರ್ ಚಾಂಪಿಯನ್‌ಶಿಪ್- ಅವಕಾಶ ಪಡೆದ ಕನ್ನಡದ ಯುವಕ..!!

ಈ ಋತುಮಾನದ ಬ್ರಿಟಿಷ್ ಜಿಟಿ ರೇಸ್ ಕಾರ್ ಚಾಂಪಿಯನ್‌ಶಿಪ್‌ನಲ್ಲಿ ಸೆಣಸಾಟ ನಡೆಸಲಿರುವ ಅಖೀಲ್ ಮತ್ತು ಅವರ ತಂಡವು ಬ್ಲ್ಯಾಕ್ ಬುಲ್ ಗ್ಯಾರೇಜ್ 59 ತಂಡ ಪ್ರತಿನಿಧಿಸಲಿದೆ. ಜೊತೆಗೆ ಅಖೀಲ್ ತಂಡದಲ್ಲಿ 16 ವರ್ಷದ ಬಾಲಕನೋರ್ವ ಸ್ಪರ್ಧೆ ಮಾಡಲಿದ್ದು, ಚಾಂಪಿಯನ್‌ಶಿಪ್ ಪಡೆದುಕೊಳ್ಳುವ ತವಕದಲ್ಲಿದ್ದಾರೆ.

ಬ್ರಿಟಿಷ್ ಜಿಟಿ ರೇಸ್ ಕಾರ್ ಚಾಂಪಿಯನ್‌ಶಿಪ್- ಅವಕಾಶ ಪಡೆದ ಕನ್ನಡದ ಯುವಕ..!!

ಈಗಾಗಲೇ ದೇಶಿಯ ಹಾಗೂ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಿರುವ ಅಖೀಲ್ ರಬೀಂದ್ರಾ, ರೇಸ್ ಕಾರು ಚಾಲನೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಇಲ್ಲದೇ 2013ರ ಬ್ರಿಟಿಷ್ ಜಿಟಿ ರೇಸ್ ಕಾರ್ ಚಾಂಪಿಯನ್‌ಶಿಪ್‌ನಲ್ಲಿ ಭಾಗಿಯಾದ ಅನುಭವ ಹೊಂದಿರುವ ಅಖೀಲ್, ಈ ಬಾರಿ ಉತ್ತಮ ಪ್ರದರ್ಶನ ತೋರುವ ನೀರಿಕ್ಷೆಯಿದೆ.

ಬ್ರಿಟಿಷ್ ಜಿಟಿ ರೇಸ್ ಕಾರ್ ಚಾಂಪಿಯನ್‌ಶಿಪ್- ಅವಕಾಶ ಪಡೆದ ಕನ್ನಡದ ಯುವಕ..!!

ಸಿಕ್ಕ ಅವಕಾಶಗಳಲ್ಲೇ ಉತ್ತಮ ಪ್ರದರ್ಶನ ತೋರುವ ಅಖೀಲ್, ಹುಟ್ಟಿಬೆಳೆದಿದ್ದು ಬೆಂಗಳೂರಿನಲ್ಲೇ. ಸುಮಾರು 12 ವರ್ಷದ ಬಾಲಕನಿದ್ದಾಗಲೇ ಈ ಬಗ್ಗೆ ತರಬೇತಿ ಪಡೆದಿದ್ದ ಅಖೀಲ್, ಪೂರ್ವತಯಾರಿಯೊಂದಿಗೆ ಇಂದು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆಯುವ ಮತ್ತೊಂದು ಅವಕಾಶ ಹುಡುಕಿಕೊಂಡು ಬಂದಿದೆ.

ಬ್ರಿಟಿಷ್ ಜಿಟಿ ರೇಸ್ ಕಾರ್ ಚಾಂಪಿಯನ್‌ಶಿಪ್- ಅವಕಾಶ ಪಡೆದ ಕನ್ನಡದ ಯುವಕ..!!

ಅಖೀಲ್ ರಬೀಂದ್ರಾ ಆಯ್ಕೆ ಬಗ್ಗೆ ಹೆಮ್ಮೆಯಿಂದಲೇ ಅಭಿಪ್ರಾಯ ಹಂಚಿಕೊಂಡಿರುವ ಆ್ಯಂಡ್ರಿವ್ ಕಿರ್ಕಲ್ದ್ಯ್, ಮುಂಬರುವ ಬ್ರಿಟಿಷ್ ಜಿಟಿ ರೇಸ್ ಕಾರ್ ಚಾಂಪಿಯನ್‌ಶಿಪ್‌ನಲ್ಲಿ ನಮ್ಮ ತಂಡ ಗೆಲ್ಲುವ ನೀರಿಕ್ಷೆಯಿದೆ. ನಮ್ಮ ತಂಡದಲ್ಲಿ ಉದಯೋನ್ಮುಖ ಆಟಗಾರರಿದ್ದು, ಬೆಂಗಳೂರಿನ ಅಖೀಲ್ ಮೇಲೆ ಹೆಚ್ಚಿನ ನೀರಿಕ್ಷೆ ಮಾಡಿದ್ದೇವೆ ಎಂದಿದ್ದಾರೆ.

ಬ್ರಿಟಿಷ್ ಜಿಟಿ ರೇಸ್ ಕಾರ್ ಚಾಂಪಿಯನ್‌ಶಿಪ್- ಅವಕಾಶ ಪಡೆದ ಕನ್ನಡದ ಯುವಕ..!!

ಬ್ರಿಟಿಷ್ ಜಿಟಿ ರೇಸ್ ಕಾರ್ ಚಾಂಪಿಯನ್‌ಶಿಪ್‌ನ ಈ ಹಿಂದಿನ ಆವೃತ್ತಿಗಳಲ್ಲಿ ಅಖೀಲ್ ಭಾಗಿಯಾದ ಅನುಭವ ಇದೆ. ಹೀಗಾಗಿ ಅವರಿಗೆ ಮತ್ತೊಂದು ಅವಕಾಶ ಸಿಕ್ಕಿದ್ದು, ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಯಾವುದೇ ಸಂಶಯವಿಲ್ಲ ಎಂಬ ನಂಬಿಕೆ ನಮ್ಮ ತಂಡಕ್ಕಿದೆ ಎನ್ನುವುದು ಬ್ಲ್ಯಾಕ್ ಬುಲ್ ಗ್ಯಾರೇಜ್ 59 ತಂಡದ ಬಲವಾದ ನಂಬಿಕೆ.

ಬ್ರಿಟಿಷ್ ಜಿಟಿ ರೇಸ್ ಕಾರ್ ಚಾಂಪಿಯನ್‌ಶಿಪ್- ಅವಕಾಶ ಪಡೆದ ಕನ್ನಡದ ಯುವಕ..!!

20 ವರ್ಷದ ಅಖೀಲ್ ರಬೀಂದ್ರಾ, ಬ್ರಿಟಿಷ್ ಜಿಟಿ ರೇಸ್ ಕಾರ್ ಚಾಂಪಿಯನ್‌ಶಿಪ್‌ನ ಪ್ರಥಮ ಸುತ್ತಿನಲ್ಲಿ 16 ವರ್ಷದ ಮೆಕ್‌ಡೊನಾಲ್ಡ್ ತಂಡದ ಬಾಲಕನೊಂದಿಗೆ ಸ್ಪರ್ಧೆ ನಡೆಸಲಿದ್ದಾರೆ. ಜೊತೆಗೆ BRDC F4 ರೇಸ್ ಕಾರು ಚಾಲನಾ ಅನುಭವ ಹೊಂದಿದ್ದಾರೆ.

ಬ್ರಿಟಿಷ್ ಜಿಟಿ ರೇಸ್ ಕಾರ್ ಚಾಂಪಿಯನ್‌ಶಿಪ್- ಅವಕಾಶ ಪಡೆದ ಕನ್ನಡದ ಯುವಕ..!!

ಸದ್ಯ ಬ್ಲ್ಯಾಕ್ ಬುಲ್ ಗ್ಯಾರೇಜ್ 59 ತಂಡದಲ್ಲಿ ಭರವಸೆಯ ಆಟಗಾರನಾಗಿ ಮಿಂಚುತ್ತಿರುವ ಅಖೀಲ್, ಇತರೆ 7 ಮಂದಿ ಆಟಗಾರಗಿಂತ ಹೆಚ್ಚು ನೀರಿಕ್ಷೆ ಹೊಂದಿರುವ ಆಟಗಾರರಾದ್ದಾರೆ. ಹೀಗಾಗಿ ಇವರ ಮೇಲೆ ಹೆಚ್ಚಿನ ಭರವಸೆ ಇಡಲಾಗಿದ್ದು, ಇದಕ್ಕಾಗಿ ಪೂರ್ವತಯಾರಿ ಈಗಾಗಲೇ ಜೋರಾಗಿಯೇ ನಡೆಯುತ್ತಿದೆ.

ಬ್ರಿಟಿಷ್ ಜಿಟಿ ರೇಸ್ ಕಾರ್ ಚಾಂಪಿಯನ್‌ಶಿಪ್- ಅವಕಾಶ ಪಡೆದ ಕನ್ನಡದ ಯುವಕ..!!

ಆದ್ರೆ ಅದೇನೇ ಇರಲಿ ಪ್ರತಿಷ್ಠಿತ ಬ್ರಿಟಿಷ್ ಜಿಟಿ ರೇಸ್ ಕಾರ್ ಚಾಂಪಿಯನ್‌ಶಿಪ್‌ನಲ್ಲಿ ಕನ್ನಡಿಗರೊಬ್ಬರು ಭಾಗಿಯಾಗುತ್ತಿರುವುದೇ ನಮಗೆ ಹೆಮ್ಮೆಯ ವಿಚಾರ. ಅಲ್ಲದೇ ಈ ಹಿಂದೆಯೂ ಭಾಗಿಯಾದ ಅನುಭವ ಹೊಂದಿರುವ ಅಖೀಲ್, ಈ ಬಾರಿ ಗೆಲ್ಲುವ ತವಕದಲ್ಲಿದ್ದು, ಅವರಿಗೆ ನಮ್ಮೇಲ್ಲರ ಅಭಿನಂದನೆಗಳು.

ನೀವು ರೇಸ್ ಕಾರ್ ಪ್ರಿಯರಾಗಿದ್ದರೆ ಮೆಕ್ಲ್‌ರನ್ P1 ಜಿಟಿಆರ್ ರೇಸ್ ಕಾರಿನ ಚಿತ್ರಗಳಿಗಾಗಿ ಕೆಳಗಿನ ಗ್ಯಾಲರಿಯನ್ನು ಕ್ಲಿಕ್ ಮಾಡಿ.

Most Read Articles

Kannada
English summary
The 20-year-old from Bengaluru will share the #59 570S GT4 car with 16-year-old Macdonald as they make their debuts in the seven-round championships.
Story first published: Thursday, March 9, 2017, 14:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X